ಮಂಗಳೂರು(ಮೇ 15): ಉದ್ಯೋಗ, ಆಹಾರ ವ್ಯವಸ್ಥೆ ಇಲ್ಲದೆ ಬೀದಿಗೆ ಬಿದ್ದಿರುವ ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತ ಕೊಳೆತ ಅಕ್ಕಿ ವಿತರಿಸಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.

ಎಂಆರ್‌ಪಿಎಲ್‌ ಪರಿಸರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರಿದ್ದಾರೆ. ಲಾಕ್‌ ಡೌನ್‌ ಸಂದರ್ಭ ಇವರು ಕೆಲಸವಿಲ್ಲದೆ ಕಂಗಾಲಾಗಿದ್ದರು. ಸ್ಥಳೀಯ ದಾನಿಗಳು ಮಾತ್ರ ಅವರಿಗೆ ಆಹಾರ ಸಾಮಗ್ರಿ ಒದಗಿಸುತ್ತಿದ್ದರು. ಹಸಿವಿನಿಂದ ಕಂಗೆಟ್ಟಿದ್ದ ಈ ಕಾರ್ಮಿಕರು ವಾರದ ಹಿಂದೆ ಎಂಆರ್‌ಪಿಎಲ್‌ ಮುಂಭಾಗ ಗುಂಪು ಸೇರಿ ಊರಿಗೆ ತಲುಪಿಸುವಂತೆ ಪ್ರತಿಭಟನೆ ನಡೆಸಿದ್ದರು.

ಮುತ್ತಪ್ಪ ರೈ ಬಗ್ಗೆ ನಿಮಗೆ ಗೊತ್ತಿರದ ಕುತೂಹಲಕಾರಿ ಸಂಗತಿಗಳಿವು..!

ಪ್ರತಿಭಟನೆಯ ದಿನ ಜೋಕಟ್ಟೆಗೆ ಆಗಮಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಲಾ ಐದು ಕೆಜಿ ತೂಕದ ನೂರು ಚೀಲ ಅಕ್ಕಿಯನ್ನು ಕಾರ್ಮಿಕರಿಗೆ ನೀಡಿದ್ದರು. ತೆರೆದು ನೋಡಿದರೆ ಬಹುತೇಕ ಚೀಲಗಳಲ್ಲಿರುವ ಅಕ್ಕಿ ಕೊಳೆತು ಹೋಗಿದ್ದು ತಿನ್ನಲೂ ಅಯೋಗ್ಯವಾಗಿತ್ತು. ಆದರೂ ಗತಿಯಿಲ್ಲದೆ ಕೆಲವು ಕಾರ್ಮಿಕರು ಅದೇ ಅಕ್ಕಿಯನ್ನು ಬೇಯಿಸಿ ತಿಂದಿದ್ದಾರೆ. ಇನ್ನೂ ಕೆಲವರು ಈ ವಿಚಾರವನ್ನು ಸ್ಥಳೀಯ ಮುಖಂಡರ ಗಮನಕ್ಕೆ ತಂದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ರಂಗದಲ್ಲಿ ಕುಣಿಯಲು ಅಂಗವೈಕಲ್ಯ ಅಡ್ಡಿಯಾಗಲಿಲ್ಲ..! ಒಂದೇ ಕಾಲಿರೋದಾದ್ರೂ ಹೆಜ್ಜೆ ತಪ್ಪಿಲ್ಲ

ಆದರೆ ಈ ವಿಚಾರವನ್ನು ಜಿಲ್ಲಾಡಳಿತ ತಳ್ಳಿ ಹಾಕಿದೆ. ಹಾಗಾದರೆ ಈ ಅಕ್ಕಿ ಎಲ್ಲಿಂದ ಬಂತು ಎಂಬ ಬಗ್ಗೆ ತನಿಖೆ ನಡೆಯಲಿ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಿ. ಅದಕ್ಕೂ ಮೊದಲು ಜಿಲ್ಲಾಡಳಿತದ ಅಕ್ಕಿ ಗೋಡೌನ್‌ನ ಪರಿಸ್ಥಿತಿಯನ್ನು ಜನರಿಗೆ ತೋರಿಸಲಿ ಎಂದು ಈ ವಿಚಾರವನ್ನು ಬಹಿರಂಗಗೊಳಿಸಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಒತ್ತಾಯಿಸಿದ್ದಾರೆ.