MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Karnataka Districts
• ರಂಗದಲ್ಲಿ ಕುಣಿಯಲು ಅಂಗವೈಕಲ್ಯ ಅಡ್ಡಿಯಾಗಲಿಲ್ಲ..! ಒಂದೇ ಕಾಲಿರೋದಾದ್ರೂ ಹೆಜ್ಜೆ ತಪ್ಪಿಲ್ಲ

ರಂಗದಲ್ಲಿ ಕುಣಿಯಲು ಅಂಗವೈಕಲ್ಯ ಅಡ್ಡಿಯಾಗಲಿಲ್ಲ..! ಒಂದೇ ಕಾಲಿರೋದಾದ್ರೂ ಹೆಜ್ಜೆ ತಪ್ಪಿಲ್ಲ

ಲಯಬದ್ಧ ಹಿಮ್ಮೇಳಕ್ಕೆ ಅಷ್ಟೇ ಆಕರ್ಷಕವಾಗಿ ಯಕ್ಷಗಾನದ ಪ್ರವೇಶ ನಾಟ್ಯ ನೀಡಿದ ಈತ, ನಿರಾಯಾಸವಾಗಿ ಧಿಗಿಣ ತೆಗೆದು ಪ್ರೇಕ್ಷಕರ ಹುಬ್ಬೇರುವಂತೆ ಮಾಡುತ್ತಾನೆ. ಸಂಭಾಷಣೆಯನ್ನೂ ನಿರರ್ಗಳವಾಗಿ ಒಪ್ಪಿಸುತ್ತಾನೆ. ಪುಂಡುವೇಷಧಾರಿಯಾಗಿ ಒಂದು ಬಾರಿಗೆ ನಿರಾಯಾಸವಾಗಿ 20ರಿಂದ 30 ಧಿಗಿಣ ತೆಗೆಯಬಲ್ಲ (ಹಾರುವುದು). ಇಂತಹ ವಿಡಿಯೋವೊಂದು ಕರಾವಳಿಯಲ್ಲಿ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇಲ್ಲಿವೆ ಫೋಟೋಸ್

2 Min read
Author : Suvarna News | Asianet News
Published : May 15 2020, 03:13 PM IST
Share this Photo Gallery
• FB
• TW
• Linkdin
• Whatsapp
19

ಈತನಿಗೆ ಎಡ ಕಾಲಿಲ್ಲ. ಕೃತಕ ಕಾಲು ಬಳಸಿ ಸಮರ್ಥವಾಗಿ ಯಕ್ಷಗಾನದ ಕುಣಿತ ಈತನ ತಾಕತ್ತು. ಈತ ಮನೋಜ್ ಕುಮಾರ್. 17ರ ಹರೆಯದ ಚಿಗುರು ಮೀಸೆಯ ಯುವಕ ಬೆಳ್ತಂಗಡಿ ತಾಲೂಕಿನ ವೇಣೂರು ನಿವಾಸಿ. ವೇಣೂರು ಸರ್ಕಾರಿ ಕಾಲೇಜಿನ ದ್ವಿತೀಯ ಪಿ.ಯು. ವಿದ್ಯಾರ್ಥಿ. 6ನೇ ಕ್ಲಾಸಿನಲ್ಲಿದ್ದಾಗ ಈತನ ಎಡಕಾಲು ಗ್ಯಾಂಗ್ರಿನ್ ಗೆ ತುತ್ತಾಗಿ ಕಾಲನ್ನು ಮೊಣಕಾಲಿನಿಂದ ಕೆಳಗೆ ಶಸ್ತ್ರಕ್ರಿಯೆ ಮೂಲಕ ಕತ್ತರಿಸಲಾಯಿತು.

29

ಎಳವೆಯಿಂದಲೇ ಯಕ್ಷಗಾನವನ್ನು ಕನಸಾಗಿಸಿದ್ದ ಈತ ಎದೆಗುಂದಲಿಲ್ಲ. ಶಸ್ತ್ರಚಿಕಿತ್ಸೆಗೆ ಸಂದರ್ಭ ಆಸ್ಪತ್ರೆಯಲ್ಲಿದ್ದಾಗ ಈತ ಓದಿದ ಖ್ಯಾತ ನೃತ್ಯಗಾರ್ತಿ, ಕಾಲು ಕಳೆದುಕೊಂಡರೂ ಎದೆಗುಂದದೆ ನೃತ್ಯದಿಂದಲೇ ವಿಶ್ವವಿಖ್ಯಾತರಾದ ಸುಧಾ ಚಂದ್ರನ್ ಕುರಿತ ಪುಸ್ತಕದಿಂದ ಪ್ರೇರಿತನಾದ. ಕೃತಕ ಕಾಲು ಅಳವಡಿಸಿದ ಬಳಿಕ ಹೈಸ್ಕೂಲಿಗೆ ಬಂದಾಗ ಯೋಗ್ಯ ಗುರುಗಳ ಮುಖೇನ ಯಕ್ಷಗಾನ ಕಲಿಕೆ ಆರಂಭಿಸಿದ.

39

ಐದು ವರ್ಷಗಳಿಂದ ಯಕ್ಷಗಾನದ ನಾಟ್ಯ ತರಬೇತಿ ಪಡೆಯುತ್ತಿರುವ ಮನೋಜ್ ಕಳೆದ ಎರಡು ವರ್ಷಗಳಿಂದ ಮೇಳಗಳಲ್ಲಿ ಸಾಂದರ್ಭಿಕ ಕಲಾವಿದನಾಗಿಯೂ ಪಾತ್ರ ನಿರ್ವಹಿಸಿದ್ದಾನೆ.

49

ಸುಂಕದಕಟ್ಟೆ, ಬಪ್ಪನಾಡು, ಮಂಗಳಾದೇವಿ ಹಾಗೂ ಕಟೀಲು ಮೇಳಗಳಲ್ಲಿ ಹರಿಕೆ ರೂಪದಲ್ಲಿ ಹಾಗೂ ಬದಲಿ ಕಲಾವಿದನಾಗಿ ಸುಮಾರು 30ಕ್ಕೂ ಅಧಿಕ ಕಡೆ ಪ್ರದರ್ಶನ ನೀಡಿದ್ದಾನೆ. ನಿತ್ಯವೇಷ, ದೇವೇಂದ್ರಬಲ, ಯಕ್ಷರಾಜ ಪಿಂಗಳಾಕ್ಷ ಮತ್ತಿತರ ಪಾತ್ರಗಳನ್ನು ನಿರ್ವಹಿಸಿದ್ದಾನೆ. ಸಂಭಾಷಣೆ ಕಲಿಯುತ್ತಿದ್ದು, ವೇಷವನ್ನು ಸ್ವತಃ ತಾನೇ ಹಾಕಿಕೊಳ್ಳುತ್ತಿರುವುದು ಹೆಗ್ಗಳಿಕೆಯಾಗಿದೆ.

59

ಹೈಸ್ಕೂಲಿನಲ್ಲಿ ಪ್ರಾಂಶುಪಾಲರಾಗಿದ್ದ ವೆಂಕಟೇಶ ತುಳುಪುಲೆ ಅವರು ಆರಂಭದ ಗುರುಗಳು, ಬಳಿಕ ರಮೇಶ್ ಶೆಟ್ಟಿ ಪಡ್ಡಂದಡ್ಕ, ಭಾಗವತಿಕೆಯಲ್ಲಿ ಪ್ರಮೋದ ಅಂಡಿಂಜೆ ತರಬೇತಿ ನೀಡಿದ್ದಾರೆ. ವೇಣೂರು ಕಲಾಕಾರ ಹವ್ಯಾಸಿ ಯಕ್ಷಗಾನ ಕಲಾಸಂಘದ ಸಕ್ರಿಯ ಸದಸ್ಯ, ಅಲ್ಲಿ ಪ್ರಭಾಕರ ಪ್ರಭು ಗುರುಗಳು.

69

ಅಪ್ಪ-ಅಮ್ಮ ಹಾಗೂ ಇಬ್ಬರು ತಂಗಿಯರೊಂದಿಗೆ ಸುಮಾರು 11 ಮಂದಿ ಇರುವ ಕುಟುಂಬ ಈತನದ್ದು. ಆರ್ಥಿಕವಾಗಿ ಸಬಲರೇನಲ್ಲ. ಅಪ್ಪ ಊರಿನಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದು, ಅಮ್ಮ ಗೃಹಿಣಿ.

79

ಕಾಲೇಜಿಗೂ, ಯಕ್ಷಗಾನ ಪ್ರದರ್ಶನಕ್ಕೂ ಬಸ್ಸಿನಲ್ಲೇ ಪ್ರಯಾಣ, ಊರಿನ ಕಲಾವಿದರಿದ್ದರೆ ಅವರ ಬೈಕಿನಲ್ಲಿ ಹೋಗುತ್ತಾನೆ.

89

ಯಕ್ಷಗಾನವನ್ನೇ ವೃತ್ತಿಯಾಗಿಸಿ ಬದುಕು ಸಾಗಿಸಲು ಕಷ್ಟ. ಹವ್ಯಾಸಿಯಾಗಿಯೇ ಮುಂದುವರಿಯುತ್ತೇನೆ. ಬಣ್ಣದ ವೇಷಧಾರಿಯಾಗುವ ಹಂಬಲವೂ ಇದೆ ಎನ್ನುತ್ತಾನೆ.

99

ಲಾಕ್ ಡೌನ್ ಅವಧಿಯಲ್ಲಿ ತನ್ನ ಮನೆ ಅಂಗಳದಲ್ಲಿ ಮನೋಜ್ ಯಕ್ಷಗಾನ ಪ್ರಾಕ್ಟೀಸ್ ಮಾಡುವ ವಿಡಿಯೋವನ್ನು ಶ್ರೀ ಸುಂಕದಕಟ್ಟೆ ಮೇಳದ ಕಲಾವಿದ ಜಯೇಂದ್ರ ಕುಮಾಲ್ ಜಾಲತಾಣಗಳಲ್ಲಿ ಹಂಚಿಕೊಂಡದ್ದು ಈಗ ವೈರಲ್ ಆಗುತ್ತಿದೆ.

About the Author

SN
Suvarna News

Latest Videos
Recommended Stories
Recommended image1
ಯಮಪಾಶ ತುಂಡರಿಸಿ ನಾಲ್ವರ ಪ್ರಾಣ ಉಳಿಸಿದ ಬೆಂಗಳೂರು ಪೊಲೀಸರು; ಮರುಜನ್ಮ ಕೊಟ್ಟ ಖಾಕಿ ಪಡೆಗೊಂದು ಸಲಾಂ!
Recommended image2
ಶಾಸಕ ವಿನಯ್ ಕುಲಕರ್ಣಿ ಜೈಲಿಂದ ರಿಲೀಸ್; ಅಭಿಮಾನಿಗಳಿಂದ ದೊಡ್ಡಹಾರ ಹಾಕಿ, ಸಿಹಿ ತಿನ್ನಿಸಿ ಸಂಭ್ರಮ!
Recommended image3
ಬೆಂಗಳೂರು ಆಟೋ ಸುಲಿಗೆ: ಮೆಜೆಸ್ಟಿಕ್‌-ಕತ್ರಿಗುಪ್ಪೆಗೆ ₹700 ಡಿಮ್ಯಾಂಡ್! ಬಿಲ್ ಕೇಳಿ ಶಾಕ್ ಆದ ಮಹಿಳೆ ವಿಡಿಯೋ ವೈರಲ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved