ಫಲವತ್ತತೆಯ ಸಂಕೇತವಾದ ಪ್ರಾಚೀನ ಮಿಥುನ ಕಲ್ಲುಗಳು ಪತ್ತೆಯಾಗಿವೆ. ಈ ಕಲ್ಲುಗಳು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ವೇಳೆ ಪತ್ತೆಯಾಗಿವೆ. ಈ ಕಲ್ಲುಗಳ ವಿಶೇಷತೆಯೂ ಇಲ್ಲಿದೆ. 

ಶಿವಮೊಗ್ಗ [ಜ.02]: ಪುರಾತತ್ವ ಇಲಾಖೆಗೆ ಸಂಬಂಧಪಟ್ಟಎರಡು ಕಲ್ಲುಗಳು ಸಾಗರ ತಾಲೂಕಿನ ಆನಂದಪುರದಲ್ಲಿ ರಾಷ್ಟ್ರೀಯ ಹೆದ್ದಾರಿ 206 ನಲ್ಲಿ ರಸ್ತೆ ಕಾಮಗಾರಿ ನಡೆಯುವ ಸಂದರ್ಭದಲ್ಲಿ ದೊರೆತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಷ್ಟೀಯ ಹೆದ್ದಾರಿಯಲ್ಲಿ ಕೆರೆಯ ಏರಿಯಲ್ಲಿ ಸಾಗಿ ಹೋಗಿರುವ ಈ ಕೆರೆ ಆನಂದ ಪುರದ ಕೆರೆಯಾಗಿದೆ. ಇಲ್ಲಿ ರಸ್ತೆ ಕಾಮಗಾರಿ ನಡೆಸುವಾಗ ಎರಡು ಕಲ್ಲುಗಳು ದೊರೆತಿವೆ. ಈ ಕಲ್ಲುಗಳನ್ನು ಮಿಥುನದ ಕಲ್ಲುಗಳು ಎಂದು ಗುರುತಿಸಲಾಗಿದೆ. 

ಇದರಲ್ಲಿ ಒಂದು ಕಲ್ಲು ಅರ್ಧ ತುಂಡಾಗಿವೆ. ಕೆಳದಿ ಕಾಲದ ಸಂದರ್ಭದಲ್ಲಿ ಕೆರೆ ಏರಿಗಳಲ್ಲಿ ಈ ಕಲ್ಲುಗಳನ್ನು ಬಳಸಲಾಗುತ್ತಿತ್ತು ಎಂದು ಶಿವಮೊಗ್ಗದ ಪುರಾತತ್ವ ಇಲಾಖೆ ತಿಳಿಸಿದೆ. 

ಮುತ್ತು ಕೊಡಲು ಹೋದವನಿಗೆ ಕಚ್ಚಿ ಹರಿದ ಹಾವು..

ಈಗಾಗಲೇ ಸೊರಬ ತಾಲೂಕು ಉಳವಿಯ ಕೆರೆ ಮತ್ತು ಸಾಗರದ ಕೆಲ ಕೆರೆಗಳಲ್ಲಿ ಈ ಮಿಥುನದ ಕಲ್ಲುಗಳು ಕಂಡುಬರುತ್ತವೆ. ಬೆಳೆಯ ಉತ್ಪಾದನೆ ಹೆಚ್ಚಾಗಲಿ ಎಂದು ಆಗಿನ ಕಾಲದಲ್ಲಿ ಕೆರೆ ಏರಿಯ ಮೇಲೆ ಈ ಕಲ್ಲುಗಳನ್ನ ಬಳಸಲಾಗುತ್ತಿತ್ತು. ಈ ಮಿಥುನ ಕಲ್ಲುಗಳು ಉತ್ಪಾದನೆಯ ಸಂಕೇತವಾಗಿವೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಶೇಜೇಶ್ವರ್‌ ತಿಳಿಸಿದ್ದಾರೆ.