* ಲಾಕ್‌ಡೌನ್‌ ಪರಿಣಾಮ ಖಾಸಗಿ ವಾಹನ ಸಿಗದೇ ಪರದಾಟ* ಸೈಕಲ್‌ನಲ್ಲೇ ಮಗಳು ಹಾಗೂ ಮೊಮ್ಮಗಳನ್ನು ಕರೆದುಕೊಂಡು ಬಂದ ಅಜ್ಜ* ಗದಗ ನಗರದಲ್ಲಿ ನಡೆದ ಘಟನೆ 

ಗದಗ(ಮೇ.29): ಲಾಕ್‌ಡೌನ್‌ ಪರಿಣಾಮ ವಾಹನ ಸಿಗದೇ ಮೊಮ್ಮಗಳ ನೇತ್ರ ಚಿಕಿತ್ಸೆಗಾಗಿ ವೃದ್ಧನೋರ್ವ ತಾಲೂಕಿನ ಕಳಸಾಪುರ ಗ್ರಾಮದಿಂದ ಮಗಳು ಹಾಗೂ ಮೊಮ್ಮಗಳನ್ನು ಸೈಕಲ್‌ನಲ್ಲಿ ಕೂರಿಸಿಕೊಂಡು 5 ಕಿಮೀ ದೂರದ ಗದಗ ನಗರಕ್ಕೆ ಆಗಮಿಸಿದ ಘಟನೆ ಶುಕ್ರವಾರ ನಡೆದಿದೆ.

ಮಹಾಮಾರಿ ಕೊರೋನಾ ಸರಪಳಿ ತುಂಡರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಠಿಣ ಲಾಕ್‌ಡೌನ್‌ ಹೇರಿದ ಹಿನ್ನೆಲೆಯಲ್ಲಿ ಯಾವುದೇ ವಾಹನ ಸಿಗದೇ ಸೈಕಲ್‌ನಲ್ಲೇ ಮಗಳು ಹಾಗೂ ಮೊಮ್ಮಗಳನ್ನು ಕರೆದುಕೊಂಡು ಬಂದಿದ್ದಾರೆ.

ಗದಗನಲ್ಲಿ ಸಂಪೂರ್ಣ ಲಾಕ್‌ಡೌನ್‌: ತಳ್ಳುವ ಗಾಡಿಯಲ್ಲಿ ಆಸ್ಪತ್ರೆಗೆ ಪತಿ ಕರೆತಂದ ಮಹಿಳೆ..!

ಮೊಮ್ಮಗಳ ಕಣ್ಣು ನೋವು ಇತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳುವ ಅವಶ್ಯಕತೆಯಿದ್ದರೂ ಯಾವುದೇ ವಾಹನ ಸಿಗಲಿಲ್ಲ. ಮಗಳು, ಮೊಮ್ಮಗಳೊಂದಿಗೆ ಸೈಕಲ್‌ ಏರಿದರು. ನಗರದಲ್ಲಿ ಸಾಗುವಾಗ ಮಾತ್ರ ಮೊಮ್ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡು, ಮಗಳ ಕೈಗೆ ಸೈಕಲ್‌ ಕೊಟ್ಟು ಪಾದಯಾತ್ರೆ ಮೂಲಕ ನಗರದ ಖಾಸಗಿ ಕಣ್ಣಿನ ಆಸ್ಪತ್ರೆ ತಲುಪಿದ್ದಾರೆ.