ವಿಜಯಪುರ(ಮೇ.10): ನಗರದಲ್ಲಿ ಕೊರೋನಾ ಒಬ್ಬ ವೃದ್ಧೆ ಹಾಗೂ ಬಾಲಕನಿಂದ ಕೊರೋನಾ ಹಬ್ಬಿದ್ದು, ಇವರಿಬ್ಬರೂ ಸೂಪರ್‌ ಸ್ಪ್ರೆಡರ್‌ ಆಗಿದ್ದಾರೆ.

ನಗರದ ಚಪ್ಪರಬಂದ ಬಡಾವಣೆಯ 60 ವರ್ಷದ ವೃದ್ಧೆಯೇ ಸೂಪರ್‌ ಸ್ಪ್ರೆಡರ್‌ ಆಗಿದ್ದಾಳೆ. ಪಿ.221 ವೃದ್ಧೆಯಿಂದ ಇದುವರೆಗೆ ಒಟ್ಟು 36 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ವೃದ್ಧೆ ತನ್ನ ಕುಟುಂಬದ 28 ಜನರಿಗೆ ಸೋಂಕು ತಗುಲಿಸಿದ್ದಾಳೆ. ಜತೆಗೆ ವೃದ್ಧೆಯ ಪತಿ ಕೊರೋನಾ ರೋಗಕ್ಕೆ ಬಲಿಯಾಗಿದ್ದಾನೆ. 28 ಜನರಿರುವ ಈ ವೃದ್ಧೆಯ ಕುಟುಂಬದಲ್ಲಿ ಎಲ್ಲರಿಗೂ ಸೋಂಕು ತಗುಲಿದೆ.

ಅಪ್ಪ, ಅಮ್ಮನ ವಿಡಿಯೋ ಕಾಲ್‌ನಲ್ಲಿ ನೋಡಿ ಬಿಕ್ಕಿ ಬಿಕ್ಕಿ ಅಳುತ್ತೆ ಕಂದಮ್ಮ..! ಎಂಥವರನ್ನೂ ಭಾವುಕವಾಗಿಸುತ್ತೆ ಈ ವಿಡಿಯೋ

ಇನ್ನೊಂದು ಕುಟುಂಬಕ್ಕೆ ಸೂಪರ್‌ ಸ್ಪ್ರೆಡರ್‌ ಆದ ಬಾಲಕ ಪಿ.228. ಈತನಿಂದ ಒಟ್ಟು 11 ಮಂದಿಗೆ ಕೊರೋನಾ ಸೋಂಕು ಹರಡಿದೆ. ಈ ಬಾಲಕನಿಗೆ ಮಹಾರಾಷ್ಟ್ರದ ಪುಣೆಯಲ್ಲಿದ್ದ ತನ್ನ ತಾಯಿಯಿಂದ ಸೋಂಕು ತಗುಲಿದೆ. ಈ ಬಾಲಕ ಪುಣೆಯಿಂದ ವಿಜಯಪುರಕ್ಕೆ ಬಂದು ಇಲ್ಲಿಯೇ ನೆಲೆಸಿದ್ದ. ಈ ಬಾಲಕನಿಂದ ಮನೆ ಮಂದಿಗೆಲ್ಲ ಕೊರೋನಾ ಸೋಂಕು ಹರಡಿದೆ. ಈ ಇಬ್ಬರು ಜಿಲ್ಲೆಯ ಸೂಪರ್‌ ಸ್ಪ್ರೆಡರ್‌  ಆಗಿದ್ದು, ಈ ಇಬ್ಬರಿಂದ ಒಟ್ಟು 47 ಜನರಿಗೆ ಕೊರೋನಾ ಹರಡಿದೆ.