Asianet Suvarna News Asianet Suvarna News

ಶಾಸಕ ಜಮೀರ್ ಅಹಮದ್ ಕ್ಷಮೆ ಯಾಚಿಸಬೇಕೆಂದು ಆಗ್ರಹ

  • ಶಾಸಕ ಜಮೀರ್ ಅಹಮದ್ ವಿರುದ್ಧ ಅಸಮಾಧಾನ
  • ಕುಮಾರಸ್ವಾಮಿ ವಿರುದ್ಧ ಅಸಂಬದ್ಧ ಪದ ಬಳಸಿದ್ದಕ್ಕೆ ಆಕ್ರೋಶ
  • ಜಮೀರ್ ಅಹಮದ್ ಕ್ಷಮೆ ಕೇಳಬೇಕೆಂದು ಆಗ್ರಹ 

 

okkaligara sanga leader VP Nagesh Slams Zameer Ahmed snr
Author
Bengaluru, First Published Jun 16, 2021, 2:07 PM IST
  • Facebook
  • Twitter
  • Whatsapp

ಮಳವಳ್ಳಿ (ಜೂ.16): ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಎಚ್. ಡಿ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ಮತ್ತು ಅಸಂಬದ್ಧ ಪದಗಳಿಂದ ಮಾತನಾಡಿರುವ  ಜಮೀರ್ ಅಹಮದ್ ಕೂಡಲೇ ಕ್ಷಮೆಯಾಚನೆ ಮಾಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಒಕ್ಕಲಿಗರ ಸಂಘದ    ಅಧ್ಯಕ್ಷ ವಿಪಿ ನಾಗೇಶ್ ಎಚ್ಚರಿಸಿದರು.

ತಾಲೂಕು ಒಕ್ಕಲಿಗರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಪದೇ ಪದೇ ಅಸಂಬಂದ್ಧ ಪದ  ಬಳಕೆ ಮಾಡಿದರೆ ದೊಡ್ಡ ಪ್ರಚಾರ ಸಿಗಬಹುದೆಂದು ಭಾವಿಸಿದ್ದಾರೆ. ಇದೇ ರೀತಿ ವರ್ತನೆ ಮುಂದುವರೆದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು. 

ಗೆಸ್ಟ್‌ಹೌಸ್‌ ವಿಷಯಕ್ಕೆ ಎಚ್‌ಡಿಕೆ-ಜಮೀರ್‌ ಜಟಾಪಟಿ, ಮಾಜಿ ಮಿತ್ರರ ನಡುವೆ ಏನಿದು ಮುನಿಸು.?...

ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕ ರವಿ ಕಂಸಾಗರ  ಮಾತನಾಡಿ ಜಾತ್ಯಾತೀತ ರಾಷ್ಟ್ರವಾದ ಭಾರತದಲ್ಲಿ ಎಲ್ಲಾ ಧರ್ಮಗಳು ಒಂದೇ ಎಂದು ಸಾಗುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಎಚ್ ಡಿ ದೇವೇಗೌಡರು ಕುಮಾರಸ್ವಾಮಿ ಡಿಕೆ ಶಿವಕುಮಾರ್, ಸದಾನಂದಗೌಡ, ಮಲ್ಲಿಕಾರ್ಜುನ ಖರ್ಗೆ, ನಿಜಲಿಂಗಪ್ಪ, ಬಿ ಎಸ್ ಯಡಿಯೂರಪ್ಪ ಅವರ ನಾಯಕತ್ವವನ್ನು ಒಂದೊಂದು ಸಮುದಾಯದ ಜನರು ಒಪ್ಪಿಕೊಂಡಿದ್ದಾರೆ. ಜನರು ಅವರ ಆಡಳಿತ ವೈಖರಿಯನ್ನು ಮೆಚ್ಚಿದ್ದಾರೆ. ಇಂತಹ ವ್ಯವಸ್ಥೆಯಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಒಬ್ಬ ನಾಯಕನ ಬಗ್ಗೆ ಹಗುರವಾಗಿ ಮಾತನಾಡುವುದು ಅವರಿಗೆ ಶೋಭೆಯಲ್ಲ ಎಂದರು. 

Follow Us:
Download App:
  • android
  • ios