ಸಂಡೂರು: ಕೊರೋನಾಗೆ ನಾಟಿ ಔಷಧಿ ವಿತರಣೆ, ಅಧಿಕಾರಿಗಳ ದಾಳಿ
* ಕೊರೋನಾ ಸೋಂಕಿತರಿಗೆ ಉಚಿತವಾಗಿ ಔಷಧಿ ತಯಾರಿಸಿ ವಿತರಣೆ
* ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹಳೆ ದರೋಜಿ ಗ್ರಾಮದಲ್ಲಿ ನಡೆದ ಘಟನೆ
* ಎಚ್ಚರಿಕೆ ನೀಡಿ ಮುಚ್ಚಳಿಕೆಯನ್ನ ಬರೆಸಿಕೊಂಡ ಅಧಿಕಾರಿಗಳು
ಸಂಡೂರು(ಮೇ.30): ಕೊರೋನಾ ಸೋಂಕಿಗೆ ನಾಟಿ ಔಷಧಿ ನೀಡುತ್ತಿದ್ದ ಮನೆಯ ಮೇಲೆ ದಾಳಿ ಮಾಡಿದ ಅಧಿಕಾರಿಗಳ ತಂಡ, ಔಷಧಿ ನೀಡದಂತೆ ಎಚ್ಚರಿಕೆ ನೀಡಿರುವ ಘಟನೆ ತಾಲೂಕಿನ ಹಳೆ ದರೋಜಿ ಗ್ರಾಮದಲ್ಲಿ ನಡೆದಿದೆ.
ಆಂಧ್ರಪ್ರದೇಶ ಮೂಲದ ವೆಂಕಟಲಕ್ಷ್ಮಿ ಕಳೆದ 20-30ವರ್ಷಗಳಿಂದ ಸ್ಥಳೀಯರಿಗೆ ಹಾವು, ಚೇಳು ಕಚ್ಚಿದವರಿಗೆ, ಪಾರ್ಶ್ವವಾಯು ಪೀಡಿತರಿಗೆ ಗಿಡಮೂಲಿಕೆಗಳಿಂದ ಔಷಧಿ ತಯಾರಿಸಿ ಕೊಡುತ್ತಿದ್ದರು. ಇದೀಗ ಕೊರೋನಾ ಸೋಂಕಿತರಿಗೂ ಉಚಿತವಾಗಿ ಔಷಧಿ ತಯಾರಿಸಿ ಕೊಡಲಾರಂಭಿಸಿದ್ದರು. ಮಾಹಿತಿ ತಿಳಿದ ಅಧಿಕಾರಿಗಳ ತಂಡ ದಾಳಿ ನಡೆಸಿ ಅನಧಿಕೃತವಾಗಿ ಔಷಧ ನೀಡದಂತೆ ಎಚ್ಚರಿಕೆ ನೀಡಿ ಮುಚ್ಚಳಿಕೆಯನ್ನೂ ಬರೆಸಿಕೊಂಡಿದೆ.
ಬಳ್ಳಾರಿ: ಹಳ್ಳಿಗಳಲ್ಲಿ ಹೆಚ್ಚಾಯಿತು ಕೊರೋನಾ ಮೌಢ್ಯಾಚಾರಣೆ
ತಹಸೀಲ್ದಾರ್ ಎಚ್.ಜೆ. ರಶ್ಮಿ ಅವರು ಔಷಧಿ ತಯಾರಿಕೆಗೆ ನೀವು ಬಳಸುವ ಸಾಮಗ್ರಿ, ತಯಾರಿಸುವ ವಿಧಾನಗಳ ಸಮೇತ ಆಯೂಷ್ ಇಲಾಖೆಗೆ ಅರ್ಜಿ ಸಲ್ಲಿಸಿ ಅವರ ಅನುಮತಿ ಪಡೆದು ವಿತರಿಸಬೇಕು ಎಂದು ವೆಂಕಟಲಕ್ಷ್ಮಿಗೆ ಎಚ್ಚರಿಕೆ ನೀಡಿದರು. ತಾಲೂಕು ಪ್ರಭಾರ ವೈದ್ಯಾಧಿಕಾರಿ ಡಾ. ಕುಶಾಲರಾಜ್, ಡಾ. ನವೀನ್‌ಕುಮಾರ, ಪ್ರಭಾರ ಕಂದಾಯ ನಿರೀಕ್ಷಕ ಕೆ.ಮಂಜುನಾಥ ಇತರರಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona