* ಬೇವಿ​ನ​ಮ​ರಕ್ಕೆ ಭಕ್ಷ್ಯ ಭೋಜ​ನ​ಗಳ ನೈವೇ​ದ್ಯ* ಕೊರೋನಾ ದೇವಿಯಲ್ಲಿ ಪ್ರಾರ್ಥ​ನೆ* ಕುಟುಂಬ ಸಮೇ​ತ​ರಾಗಿ ಹೋಮ 

ಬಳ್ಳಾ​ರಿ(ಮೇ.30): ಕೊರೋನಾ ಸಾವು ನೋವಿ​ನಿಂದ ಆತಂಕ​ಗೊಂಡಿ​ರುವ ಹಳ್ಳಿ​ಗರು ಇದೀಗ ಮೌಢ್ಯ​ಚಾ​ರ​ಣೆಗೆ ಶರ​ಣಾ​ಗಿ​ದ್ದಾರೆ. ವಿಭಿನ್ನ ರೀತಿಯ ಆಚರಣೆಗಳು ಕೇಳಿ ಬರುತ್ತಿವೆ. ಕೊರೋನಾ ದೇವಿ ನಿರ್ಮಿಸಿ ಅದಕ್ಕೆ ಭಕ್ಷ್ಯ ಭೋಜ​ನ​ಗಳ ನೈವೇದ್ಯ ಮಾಡಿ ತಮ್ಮೂ​ರಿಗೆ ಕೊರೋನಾ ಸುಳಿ​ಯ​ದಂತೆ ನೋಡಿ​ಕೊ​ಳ್ಳ​ಬೇಕು ಎಂದು ಪ್ರಾರ್ಥಿ​ಸು​ತ್ತಿ​ದ್ದಾ​ರೆ. ಕೆಲ​ವೆಡೆ ಹೋಮ ಹವ​ನ​ಗಳು ನಡೆಯುತ್ತಿವೆ.

ಕೂಡ್ಲಿಗಿ ತಾಲೂ​ಕಿನ ಚಂದ್ರೇ​ಶೇ​ಖರಪುರ​ದಲ್ಲಿ ಊರಿನ ಹೊರ​ಗಿನ ಬೇವಿನ ಮರ​ದಡಿ ಮೊಸರು ಅನ್ನದ ಎಡೆ ಮಾಡಿ ಪ್ರಾರ್ಥಿ​ಸಿ​ದ್ದಾರೆ. ಇದ​ರಿಂದ ಕೊರೋನಾ ತಮ್ಮೂ​ರಿಗೆ ಬರು​ವು​ದಿಲ್ಲ ಎಂದು ಪ್ರತಿ​ಯೊಂದು ಮನೆ​ಯ​ವರು ಬೇವಿನ ಮರಕ್ಕೆ ಎಡೆ ಸಲ್ಲಿ​ಸಿ​ದ್ದಾ​ರೆ.

ಕೊಟ್ಟೂರು ತಾಲೂ​ಕಿನ ಸುಟ್ಟಕೋಡಿಹಳ್ಳಿ, ಗಂಗಮ್ಮನಹಳ್ಳಿ ಮತ್ತಿತತರ ಹಳ್ಳಿಗಳಲ್ಲಿ ಮಹಿಳೆಯರು ಶುಕ್ರವಾರ ದಿನವಿಡೀ ಕೊರೋನಾ ದೇವಿಗೆ ಪೂಜಿಸಿ ಹೋಳಿಗೆ ತಯಾರಿಸಿ ಊರ ಹೊರಗಿನ ಪ್ರದೇಶಕ್ಕೆ ತೆರಳಿ ಹೋಳಿಗೆ ಮತ್ತಿತರ ಪದಾರ್ಥ ಎಡೆಕೊಟ್ಟು ತಮ್ಮ ಗ್ರಾಮಗಳನ್ನು ಈ ಸೋಂಕಿನಿಂದ ದೂರಮಾಡಿ ಪಾರು ಮಾಡುವಂತೆ ಪ್ರಾರ್ಥಿಸಿದ್ದಾರೆ.

ಎಡಗಾಲಿನಲ್ಲಿ ಮಾತ್ರ ಒಂಭತ್ತು ಬೆರಳುಳ್ಳ ಮಗು ಜನನ

ಕುಟುಂಬ ಸಮೇ​ತ​ರಾಗಿ ಹೋಮ:

ಹರಪನಹಳ್ಳಿ ತಾಲೂಕಿನ ಹೊಂಬಳಗಟ್ಟಿಯಲ್ಲಿ ಕುಟುಂಬವೊಂದು 20 ದಿನಗಳಿಂದ ವಿವಿಧ ಹೋಮ, ಹವನ ಮಾಡುತ್ತಿದೆ. ಹೊಂಬಳಗಟ್ಟಿಯ ವಿಶ್ವಾರಾಧ್ಯ ಮಠದಲ್ಲಿ ಸುರಪುರ ಹಿರೇಮಠದ ಹೊಳಿಬಸಯ್ಯ ಶಾಸ್ತ್ರಿಗಳು ತಮ್ಮ ಕುಟುಂಬ ಸಮೇತರಾಗಿ ಮೃತ್ಯುಂಜಯ ಹೋಮ, ಗಣ ಹೋಮ, ಧನ್ವಂತರಿ ಹೋಮ, ನವಗ್ರಹ ಹೋಮ ಸೇರಿ ವಿವಿಧ ಹೋಮಗಳನ್ನು ಮಾಡುತ್ತಿದ್ದಾರೆ. ಪ್ರತಿದಿನ ಸಂಜೆ 5ರಿಂದ ರಾತ್ರಿ 8.30ರ ವರೆಗೆ ಪ್ರಾರ್ಥಿಸುತ್ತಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona