Asianet Suvarna News Asianet Suvarna News

ಹರಪನಹಳ್ಳಿ ಜಿಲ್ಲಾ ಕೇಂದ್ರವಾಗುವವರೆಗೂ ಹೋರಾಟ ಬಿಡೆವು

ಜಿಲ್ಲಾ ಹೋರಾಟಕ್ಕೆ ನಿವೃತ್ತ ನೌಕರರ ಬೆಂಬಲ| ಹೆಚ್ಚು ಗ್ರಾಮಗಳಿಂದಲೇ ಕೂಡಿರುವ ಹರಪನಹಳ್ಳಿ ತಾಲೂಕು ಭೌಗೋಳಿಕವಾಗಿ ಹಾಗೂ ಶೈಕ್ಷಣಿಕವಾಗಿ ಜಿಲ್ಲಾ ಕೇಂದ್ರಕ್ಕೆ ಸೂಕ್ತ| ನಿತ್ಯದ ಕಾರ್ಯಗಳಿಗೆ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರಲು ಹಣ ಹಾಗೂ ಸಮಯ ವ್ಯರ್ಥ|  ನಿವೃತ್ತ ನೌಕರರಿಗಂತೂ ಕ್ಲಿಷ್ಟಕರ ಸಮಸ್ಯೆ|

Officers of the Association of Government Retired Employees Demand for Harapanahalli District
Author
Bengaluru, First Published Dec 6, 2019, 9:13 AM IST

ಹರಪನಹಳ್ಳಿ(ಡಿ.06): ತಾಲೂಕಿನ ಸರ್ಕಾರಿ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರ ಮಾಡುವಂತೆ ಒತ್ತಾಯಿಸಿ ತಹಸೀಲ್ದಾರರಿಗೆ ಗುರುವಾರ ಮನವಿ ಸಲ್ಲಿಸಿ ನಂತರ ಪ್ರವಾಸಿ ಮಂದಿರ ವೃತ್ತದಲ್ಲಿ ಆಯೋಜಿಸಿರುವ ಜಿಲ್ಲಾ ಹೋರಾಟ ಸಮಿತಿಯ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಸಂಘದ ಅಧ್ಯಕ್ಷ ಶೇಖರಗೌಡ ಪಾಟೀಲ್‌ ಮಾತನಾಡಿ, ಹೆಚ್ಚು ಗ್ರಾಮಗಳಿಂದಲೇ ಕೂಡಿರುವ ಹರಪನಹಳ್ಳಿ ತಾಲೂಕು ಭೌಗೋಳಿಕವಾಗಿ ಹಾಗೂ ಶೈಕ್ಷಣಿಕವಾಗಿ ಜಿಲ್ಲಾ ಕೇಂದ್ರಕ್ಕೆ ಸೂಕ್ತವಾಗಿದೆ. ಹಿಂದುಳಿದ ತಾಲೂಕಿನಿಂದ ಬಳ್ಳಾರಿ ಜಿಲ್ಲೆ ಅತ್ಯಂತ ದೂರದ ದಾರಿಯಾಗಿರುವುದರಿಂದ ನಿತ್ಯದ ಕಾರ್ಯಗಳಿಗೆ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರಲು ಹಣ ಹಾಗೂ ಸಮಯ ವ್ಯರ್ಥವಾಗುತ್ತಿದೆ. ನಿವೃತ್ತ ನೌಕರರಿಗಂತೂ ಕ್ಲಿಷ್ಟಕರ ಸಮಸ್ಯೆಯಾಗಿ ಕಾಡುತ್ತಿರುವುದರಿಂದ ಕೂಡಲೇ ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ತಾಲೂಕಿನಲ್ಲಿ ಒಟ್ಟು 1100 ನಿವೃತ್ತ ನೌಕರರು ಸಂಘದಲ್ಲಿ ನೋಂದಣಿಯಾಗಿದ್ದು, ಎಲ್ಲ ಸದಸ್ಯರು ಹರಪನಹಳ್ಳಿ ಜಿಲ್ಲಾ ಕೇಂದ್ರ ಘೋಷಣೆಯಾಗುವವರೆಗೂ ಜಿಲ್ಲಾ ಹೋರಾಟ ಸಮಿತಿ ಜೊತೆಯಲ್ಲಿ ಸಹಕರಿಸಲು ಸಿದ್ಧರಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಸಿ. ಅರ್ಜುನ್‌, ಉಪಾಧ್ಯಕ್ಷ ಡಿ. ಅಬ್ದುಲ್‌ ಸಲಾಂ, ಎಂ. ಬನ್ನೆಪ್ಪ, ಬಿ. ಶೇಖರಪ್ಪ, ಜಿ. ಮಹಾದೇವಪ್ಪ, ಆರ್‌. ಅಶೋಕ್‌, ಕೆ. ಕೊಟ್ರಪ್ಪ, ಎಚ್‌. ಶಿವಪ್ಪ, ಬಿ. ಭೀಮಪ್ಪ, ಎನ್‌. ಜಯಪ್ಪ, ಯು.ದುರುಗಪ್ಪ, ನಿಚ್ಚವ್ವನಹಳ್ಳಿ ಭೀಮಪ್ಪ ಸೇರಿದಂತೆ ಜಿಲ್ಲಾ ಹೋರಾಟ ಸಮಿತಿಯ ಶೃಂಗಾರ ತೋಟದ ಬಸವರಾಜ್‌, ಬಾಷಾ ಇತರರು ಭಾಗವಹಿಸಿದ್ದರು.
 

Follow Us:
Download App:
  • android
  • ios