ಪರಿಹಾರ ಕೇಂದ್ರದಲ್ಲಿ ಹಸುಗೂಸಿಗೆ ಎಣ್ಣೆ ಸ್ನಾನ ಮಾಡಿಸಿದ ಅಧಿಕಾರಿ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇಲ್ಲಿರುವ ಜನರಿಗೆ ಅಧಿಕಾರಿಗಳು ನಿರಂತರವಾಗಿ ನೆರವಾಗುತ್ತಿದ್ದಾರೆ.
ಬಾಗಲಕೋಟೆ [ಆ.12]: ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ.
ಪ್ರವಾಹ ಹಿನ್ನೆಲೆಯಲ್ಲಿ ಜನರನ್ನು ಪರಿಹಾರ ಕೇಂದ್ರದಲ್ಲಿ ಇರಿಸಲಾಗಿದ್ದು, ಸಾವಿರಾರು ಜನರು ಇಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ಜಿಲ್ಲೆಯ ಜಮಖಂಡಿ ತಾಲೂಕಿನ ಕಂಕನವಾಡಿವಾಡಿಯ ಪರಿಹಾರ ಕೇಂದ್ರ ಒಂದರಲ್ಲಿ ಎರಡು ತಿಂಗಳ ಹಸುಗೂಸೊಂದಕ್ಕೆ ಎಣ್ಣೆ ಸ್ನಾನ ಮಾಡಿಸಲು ಅಧಿಕಾರಿಯೋರ್ವರು ನೆರವಾಗಿದ್ದಾರೆ.
ಜಿಲ್ಲಾ ಆಯುಷ್ ಕೇಂದ್ರದ ಅಧಿಕಾರಿ ಡಾ.ರಾಜಶೇಖರ್ ಮೇತ್ರಿ ಮಗುವಿಗೆ ಅಜ್ಜಿಯೋರ್ವರು ಸ್ನಾನ ಮಾಡಿಸುವ ವೇಳೆ ಮಗುವಿಗೆ ನೀರೆರೆಯಲು ನೆರವಾದರು.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಂಕನವಾಡಿವಾಡಿಯ ಪರಿಹಾರ ಕೇಂದ್ರದಲ್ಲಿ ಮೂವರು ಬಾಣಂತಿಯರು ಆಶ್ರಯ ಪಡೆದಿದ್ದು, ಇವರಿಗೆ ಅಧಿಕಾರಿಗಳು ನೆರವಾಗುತ್ತಿದ್ದಾರೆ. ಅಲ್ಲದೇ ನೆಲೆ ಕಳೆದುಕೊಂಡಿರುವ ಜನರಿಗೆ ಧೈರ್ಯ ಹೇಳುತ್ತಿದ್ದಾರೆ.
ನೆರೆಯಿಂದ ನರಳುತ್ತಿರುವ ಮಂದಿಗೆ ನಿರಂತರವಾಗಿ ಬೆನ್ನೆಲುಬಾಗಿರುವ ಅಧಿಕಾರಿಗಳ ಮಾತೃ ಹೃದಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.