ಸೋಂಕಿತರ ಪತ್ತೆಗೆ ವಾಸನೆ ಗ್ರಹಿಕೆ ಟೆಸ್ಟ್!
ಬೆಂಗಳೂರು ನಗರದಲ್ಲಿ ಕೊರೋನಾ ಸೋಂಕಿತರ ಪತ್ತೆಗೆ ಬಿಬಿಎಂಪಿ ವಾಸನೆ ಗ್ರಹಿಕೆ ಪರೀಕ್ಷೆಗೆ ಚಿಂತನೆ ಮಾಡಿದೆ. ಸೋಂಕು ಇರುವ ವ್ಯಕ್ತಿಗೆ ರುಚಿ ಹಾಗೂ ವಾಸನೆ ಗ್ರಹಿಕೆ ಸಾಮರ್ಥ್ಯ ಇರುವುದಿಲ್ಲ ಎಂದು ಅಧ್ಯಯನವೊಂದು ಹೇಳಿದೆ.
ಬೆಂಗಳೂರು(ಜು.29): ನಗರದಲ್ಲಿ ಕೊರೋನಾ ಸೋಂಕಿತರ ಪತ್ತೆಗೆ ಬಿಬಿಎಂಪಿ ವಾಸನೆ ಗ್ರಹಿಕೆ ಪರೀಕ್ಷೆಗೆ ಚಿಂತನೆ ಮಾಡಿದೆ. ಸೋಂಕು ಇರುವ ವ್ಯಕ್ತಿಗೆ ರುಚಿ ಹಾಗೂ ವಾಸನೆ ಗ್ರಹಿಕೆ ಸಾಮರ್ಥ್ಯ ಇರುವುದಿಲ್ಲ ಎಂದು ಅಧ್ಯಯನವೊಂದು ಹೇಳಿದೆ.
ಹೀಗಾಗಿ, ದೆಹಲಿಯಲ್ಲಿ ಈಗಾಗಲೇ ವಾಸನೆ ಗ್ರಹಿಕೆ ಪರೀಕ್ಷೆ ಆರಂಭಿಸಲಾಗಿದೆ. ಈ ರೀತಿ ವಾಸನೆ ಗ್ರಹಿಕೆಯಲ್ಲಿ ವಿಫಲವಾದ ಶೇ.90ರಷ್ಟುಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ, ನಗರದಲ್ಲಿಯೂ ಸಹ ವಾಸನೆ ಗ್ರಹಿಕೆ ಪರೀಕ್ಷೆಗೆ ಬಿಬಿಎಂಪಿ ಚಿಂತನೆ ನಡೆಸಿದೆ.
ಬಿಗ್ ಬಾಸ್ ಜಯಶ್ರೀ ಕೇಶ ಮುಂಡನಕ್ಕೇನು ಕಾರಣ? ಹೊಸ ಬಾಳಿಗೆ ಹೆಜ್ಜೆ ಇಟ್ಟ ನಟಿ!
ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ದೆಹಲಿಯಲ್ಲಿನ ಸಾರ್ವಜನಿಕ ಪ್ರದೇಶಗಳಲ್ಲಿ ಸೋಂಕು ಪತ್ತೆಗೆ ವಿವಿಧ ಪದಾರ್ಥಗಳ ವಾಸನೆ ಗ್ರಹಿಕೆ ಪರೀಕ್ಷೆ ಮಾಡಲಾಗುತ್ತಿದೆ. ಇದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತಂದು ಬೆಂಗಳೂರಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದರು.
ಸಾರ್ವಜನಿಕರು ಪ್ರವೇಶಿಸುವ ಸ್ಥಳಗಳಲ್ಲಿ ನಿಂಬೆಹಣ್ಣು, ಕಿತ್ತಳೆ ಸೇರಿದಂತೆ ವಿವಿಧ ವಾಸನೆಗಳ ಪರೀಕ್ಷೆ ಮಾಡಲಾಗುವುದು. ಪ್ರಮುಖವಾಗಿ ಹೋಟೆಲ್, ಮಾರುಕಟ್ಟೆಪ್ರದೇಶ, ಸರ್ಕಾರಿ ಕಚೇರಿ ಪ್ರವೇಶಕ್ಕೂ ಮುನ್ನ ಪರೀಕ್ಷಿಸಲಾಗುವುದು, ಥರ್ಮಲ್ ಸ್ಕ್ರೀನಿಂಗ್ ನಂತರ ವಾಸನೆ ಗ್ರಹಿಕೆ ಪರೀಕ್ಷೆ ಮಾಡಲಾಗುತ್ತದೆ. ಇದರಿಂದ ಮೊದಲ ಹಂತದಲ್ಲೇ ಕೊರೊನಾ ಸೋಂಕಿತರನ್ನು ಪತ್ತೆ ಮಾಡಿ ಅವರಿಗೆ ಚಿಕಿತ್ಸೆ ನೀಡಬಹುದಾಗಿದೆ ಎಂದು ತಿಳಿಸಿದರು.