Asianet Suvarna News Asianet Suvarna News

ಒಡಿಶಾ ರೈಲು ದುರಂತ ದುಃಖದ ಸಂಗತಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಒಡಿಶಾದಲ್ಲಿ ನಡೆದ ರೈಲು ದುರಂತ ಅತ್ಯಂತ ದುಃಖದ ಸಂಗತಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬೇಸರ ವ್ಯಕ್ತಪಡಿಸಿದರು.

Odisha train accident case Very saddened by the tragedy says pralhad joshi union minister at hubballi rav
Author
First Published Jun 4, 2023, 8:11 AM IST

ಹುಬ್ಬಳ್ಳಿ (ಜೂ.4) : ಒಡಿಶಾದಲ್ಲಿ ನಡೆದ ರೈಲು ದುರಂತ ಅತ್ಯಂತ ದುಃಖದ ಸಂಗತಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬೇಸರ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ರೈಲ್ವೆ ಬಹುತೇಕ ಅಪಘಾತ ರಹಿತವಾಗಿತ್ತು. ಆದರೆ, ಈಗ ಬಹುದೊಡ್ಡ ಅವಘಡ ನಡೆದಿರುವ ವಿಷಯ ಕೇಳಿ ತುಂಬಾ ನೋವಾಗಿದೆ. ಅಪಘಾತ ನಡೆದ ಸ್ಥಳದಲ್ಲಿ ಈಗಾಗಲೇ ಪರಿಹಾರ ಕಾರ್ಯಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ. ಮುಂದೆ ಈ ರೀತಿ ಆಗದಂತೆ ಸಂಪೂರ್ಣ ತನಿಖೆ ಮಾಡಿ ಎಚ್ಚರಿಕೆ ವಹಿಸಲಾಗುವುದು. ಝೀರೋ ಎರರ್‌ ವ್ಯವಸ್ಥೆಗೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೇಂದ್ರ ಸರ್ಕಾರವು ಮೃತ ಕುಟುಂಬದವರಿಗೆ ಅಗತ್ಯ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಹಾಗೆಯೇ ಈ ದುರಂತದಲ್ಲಿ ರಾಜ್ಯದ ಜನತೆ ಸಿಲುಕಿರುವ ಕುರಿತು ಇಲ್ಲಿಯವರೆಗೂ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ. ರಕ್ಷಣಾ ತಂಡದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ರಾಜ್ಯದವರು ಏನಾದರೂ ಸಂಕಷ್ಟಅನುಭವಿಸುತ್ತಿದ್ದರೆ ಅವರಿಗೆ ತಕ್ಷಣವೇ ಬೇಕಾದ ಅಗತ್ಯ ಸಹಕಾರ ನೀಡಲು ಸೂಚಿಸಲಾಗಿದೆ. ಮೃತರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

 

ಗ್ಯಾರಂಟಿ ಯೋಜನೆ ಹೆಸರಲ್ಲಿ ಕಾಂಗ್ರೆಸ್ಸಿಂದ ಮೋಸ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆ ಮುಂದೂಡಿಕೆ

ಧಾರವಾಡ: ಭಾನುವಾರ ಸಂಜೆ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಧಾರವಾಡ ಗಣೇಶನಗರ ಮತ್ತು ಶ್ರೀನಗರ ಕೆಯುಡಿ ಸರ್ಕಲ್‌ ಹತ್ತಿರದ ಲೆವೆಲ್‌ ಕ್ರಾಸಿಂಗ್‌ ನಂ.300 ಹಾಗೂ 299ಗಳ ರಸ್ತೆ ಕೆಳ ಸೇತುವೆಗಳ ಶಂಕುಸ್ಥಾಪನೆ ಹಾಗೂ ಕಲ್ಯಾಣನಗರದ ಲೆವೆಲ್‌ ಕ್ರಾಸಿಂಗ್‌ ಗೇಟ್‌ ನಂ.297ಕ್ಕೆ ನಿರ್ಮಿಸಲಾದ ರಸ್ತೆ ಮೇಲ್ಸೇತುವೆ ಉದ್ಘಾಟನೆಯನ್ನು ಒಡಿಶಾ ರೈಲು ಅಪಘಾತ ದುರಂತದ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ.

ರೈಲ್ವೆ ಇಲಾಖೆಗೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳನ್ನು ಮುಂದಿನ ಒಂದು ವಾರದವರೆಗೆ ಮುಂದೂಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಜುಲೈನಲ್ಲಿ ಧಾರವಾಡ-ಬೆಂಗಳೂರು ವಂದೇ ಭಾರತ್‌ ರೈಲಿಗೆ ಚಾಲನೆ: ಸಚಿವ ಜೋಶಿ

Follow Us:
Download App:
  • android
  • ios