Asianet Suvarna News Asianet Suvarna News

ಲಾಕ್‌ಡೌನ್‌ ನಂತರ ವಾಯವ್ಯ ಸಾರಿಗೆ ಸಂಸ್ಥೆಯ ಎಲ್ಲ ಬಸ್‌ಗಳ ಪುನಾರಂಭ

ವಾಯವ್ಯ ಸಾರಿಗೆ ಸಂಸ್ಥೆಯು 6 ಜಿಲ್ಲೆಗಳ 9 ವಿಭಾಗಗಳು, 51 ಘಟಕಗಳನ್ನು ಹೊಂದಿದ್ದು, ಒಟ್ಟು 3754 ಅನುಸೂಚಿಗಳಿಂದ ಕಾರ್ಯ ನಿರ್ವಹಣೆ| ಅನ್‌ಲಾಕ್‌ ನಂತರ ಸಂಪೂರ್ಣ ಕಾರ್ಯಾಚರಣೆ| ಅಂತಾರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಬಸ್‌ ಸಂಚಾರ ಪುನಾರಂಭ| 

NWKRTC All Bus Routes Resume After Lockdown grg
Author
Bengaluru, First Published Oct 16, 2020, 12:37 PM IST
  • Facebook
  • Twitter
  • Whatsapp

ಹುಬ್ಬಳ್ಳಿ(ಅ.16): ಕೋವಿಡ್‌ ಲಾಕ್‌ಡೌನ್‌ ನಂತರ ಪುನಾರಂಭಗೊಂಡ ನಂತರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 3754 ಬಸ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಅಂತಾರಾಜ್ಯಗಳಿಗೂ ಬಸ್‌ ಸಂಚಾರ ಪುನಾರಂಭಿಸಲಾಗಿದೆ. ಇದರಿಂದಾಗಿ ಎಲ್ಲ ಕಾರ್ಯಸೂಚಿಗಳ ಬಸ್‌ ಸಂಚಾರ ಆರಂಭವಾದಂತಾಗಿದೆ. ಸಂಸ್ಥೆಯು 6 ಜಿಲ್ಲೆಗಳ 9 ವಿಭಾಗಗಳು, 51 ಘಟಕಗಳನ್ನು ಹೊಂದಿದ್ದು, ಒಟ್ಟು 3754 ಅನುಸೂಚಿಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಅನ್‌ಲಾಕ್‌ ನಂತರ ಸಂಪೂರ್ಣ ಕಾರ್ಯಾಚರಣೆ ಮಾಡಲಾಗುತ್ತಿದೆ.

ಸಂಸ್ಥೆಯಲ್ಲಿ ಮೊದಲು ಪ್ರಯಾಣಿಕರ ಆಸನಗಳಲ್ಲಿ ಕೇವಲ ಅರ್ಧದಷ್ಟು ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಪ್ರಸ್ತುತವಾಗಿ ಬಸ್ಸಿನಲ್ಲಿರುವ ಎಲ್ಲ ಪ್ರಯಾಣಿಕರ ಆಸನಗಳನ್ನು ಕುಳಿತುಕೊಳ್ಳಲು ಅನುಮತಿ ನೀಡಲಾಗಿದೆ. ಕೋವಿಡ್‌- 19 ರೋಗದ ಭಯದಿಂದ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸುರಕ್ಷತೆ ಇಲ್ಲ ಎನ್ನುವ ಭಾವನೆ ಬಂದಿರಬಹುದು. ಆದರೆ ಪ್ರಯಾಣಿಕರಿಗೆ ಅವಶ್ಯಕವಿರುವ ಎಲ್ಲ ಸುರಕ್ಷತಾ ಕ್ರಮಗಳನ್ನು ಸಾರಿಗೆ ಸಂಸ್ಥೆ ಕೈಗೊಂಡಿದೆ.

ಅತ್ಯಾಚಾರಿಗಳ ಜನನಾಂಗ ಕತ್ತರಿಸಿ: ಬಸವ ಪ್ರಕಾಶ ಸ್ವಾಮೀಜಿ

ಪ್ರತಿ ಬಸ್‌ಗಳನ್ನು ಸ್ಯಾನಿಟೈಸಿಂಗ್‌ ಮಾಡಲಾಗುತ್ತಿದೆ. ಚಾಲಕರು, ನಿರ್ವಾಹಕರು ಮಾಸ್ಕ್‌ ಧರಿಸಿಯೇ ಪ್ರಯಾಣಿಕರೊಂದಿಗೆ ವ್ಯವಹರಿಸುತ್ತಾರೆ. ಪ್ರಯಾಣಿಕರಿಗೂ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. ಅಂತಾರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಬಸ್‌ ಸಂಚಾರ ಪುನಾರಂಭಿಸಲಾಗಿದೆ. ಬಸ್‌ಗಳು ಸುರಕ್ಷಿತವಾಗಿದ್ದು, ಪ್ರಯಾಣಿಕರು ಸಂಚರಿಸಬಹುದು ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Follow Us:
Download App:
  • android
  • ios