Asianet Suvarna News Asianet Suvarna News

ಹೆಚ್ಚುತ್ತಲೇ ಇದೆ ಸೋಂಕು : 30 ಸಾವಿರಕ್ಕೂ ಹೆಚ್ಚು ಮಂದಿ ಕ್ವಾರಂಟೈನಲ್ಲಿ

ದೇಶದಲ್ಲಿ ಕೊರೋನಾಸೋಂಕು ದಿನದಿನಕ್ಕೂ ಹೆಚ್ಚಾಗುತ್ತಲೇ ಇದೆ. ಮೈಸೂರಲ್ಲಿಯೂ ಕೂಡ ಸೋಂಕಿತರ ಸಂಖ್ಯೆ ದಿನದಿನಕ್ಕೂ ಹೆಚ್ಚಾಗುತ್ತಿದ್ದು, ಸಾವಿರಾರು ಮಂದಿ ಕ್ವಾರಂಟೈನ್ ನಲ್ಲಿದ್ದಾರೆ.

Number Of Corona Cases Rise In Mysore
Author
Bengaluru, First Published Aug 16, 2020, 1:44 PM IST

 ಮೈಸೂರು (ಆ.16) :  ಜಿಲ್ಲೆಯಲ್ಲಿ ಶನಿವಾರ ಸಹ ಹೊಸದಾಗಿ 635 ಮಂದಿಗೆ ಕೋವಿಡ್‌ ಇರುವುದು ದೃಢವಾಗಿದೆ. ಕೋವಿಡ್ ಸೋಂಕಿನಿಂದ 10 ಮಂದಿ ಮೃತಪಟ್ಟಿದ್ದಾರೆ. ಈಗಾಗಲೇ ಸೋಂಕಿತರ ಪೈಕಿ 259 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆಯು 9915ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 294ಕ್ಕೆ ಹೆಚ್ಚಳವಾಗಿದೆ. ಸೋಂಕಿತರ ಪೈಕಿ 6089 ಮಂದಿ ಗುಣಮುಖರಾಗಿದ್ದಾರೆ. ಸರಿ ಪ್ರಕರಣದಲ್ಲಿ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 42 ವರ್ಷದ ವ್ಯಕ್ತಿ, 68 ವರ್ಷದ ವೃದ್ಧೆ , 70 ವರ್ಷದ ವೃದ್ಧ, 63 ವರ್ಷದ ವೃದ್ಧ, 54 ವರ್ಷದ ಮಹಿಳೆ, 39 ವರ್ಷದ ವ್ಯಕ್ತಿ, 61 ವರ್ಷದ ವೃದ್ಧ, 59 ವರ್ಷದ ವ್ಯಕ್ತಿ ಹಾಗೂ 45 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಕೊರೋನಾ ಭೀತಿ ಮಧ್ಯೆ ಕಂಟೈನ್ಮೆಂಟ್‌ ಹೆಸರಲ್ಲಿ ಕೋಟ್ಯಂತರ ರು. ಅಕ್ರಮ?

ಹಾಗೆಯೇ 48 ವರ್ಷದ ಮಹಿಳೆ ಆಸ್ಪತ್ರೆ ಕರೆದುಕೊಂಡು ಬರುವಾಗಲೇ ಮೃತಪಟ್ಟಿದ್ದಾರೆ. ಕೊರೋನಾ ಸೋಂಕಿತರ ಸಂಪರ್ಕದಿಂದ 279, ಅಂತರ ಜಿಲ್ಲಾ ಮತ್ತು ರಾಜ್ಯ ಪ್ರವಾಸದಿಂದ 220, ಐಎಲ್ಐ ಪ್ರಕರಣ 126, ಸರಿ ಪ್ರಕರಣ 10 ಸೇರಿದಂತೆ ಒಟ್ಟು 635 ಮಂದಿಗೆ ಸೋಂಕು ಇರುವುದು ದೃಢವಾಗಿದೆ.

ಕೊರೋನಾ ಅಟ್ಟಹಾಸದ ಮಧ್ಯೆ ಸಮಾಧಾನಕರ ಸುದ್ದಿ: ಸಾವಿನ ಪ್ರಮಾಣದಲ್ಲಿ ಇಳಿಕೆ..!.

ಸೋಂಕಿತರ ಪೈಕಿ 12 ಮಂದಿಯನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಸ ಸೋಂಕಿತರಿಂದ ಜಿಲ್ಲೆಯಲ್ಲಿ ಹೊಸದಾಗಿ 96 ಕಂಟೈನ್ಮೆಂಚ್‌ ಜೋನ್ ಮಾಡಲಾಗಿದೆ.

29229 ಮಂದಿ ಹೋಂ ಕ್ವಾರಂಟೈನ್‌

ಕೋವಿಡ್-19 ಸಂಬಂಧ ಜಿಲ್ಲೆಯಲ್ಲಿ ಶನಿವಾರದವರೆಗೂ ಒಟ್ಟು 66496 ಮಂದಿ ಮೇಲೆ ನಿಗಾ ವಹಿಸಲಾಗಿದ್ದು, ಇದರಲ್ಲಿ 27352 ಮಂದಿ 14 ದಿನಗಳ ಐಸೋಲೇಶನ್ ಮುಗಿಸಿದ್ದಾರೆ. ಇನ್ನೂ 29229 ಮಂದಿಯನ್ನು 14 ದಿನಗಳ ಹೋಂ ಐಸೋಲೇಶನ್ನಲ್ಲಿ ಇರಿಸಲಾಗಿದೆ.

Follow Us:
Download App:
  • android
  • ios