ಬೆಂಗಳೂರು(ಆ.16): ಮಹಾಮಾರಿ ಕೊರೋನಾ ವೈರಸ್‌ ತನ್ನ ಅಟ್ಟಹಾಸ ಮೆರೆಯುತ್ತಿರುವಾಗಲೇ ಸಮಾಧಾನಕರ ಸುದ್ದಿಯೊಂದು ಬಂದಿದೆ. ಹೌದು, ರಾಜ್ಯದ ರಾಜಧಾನಿ ಬೆಂಗಳೂರು ಹಾಗೂ ರಾಜ್ಯಾದ್ಯಂತ ಕೊರೋನಾ ಪಾಸಿಟಿವ್‌ ಸಂಖ್ಯೆ ಹೆಚ್ಚುತ್ತಿದ್ದರೂ ಕೂಡ ಆಗಸ್ಟ್‌ ತಿಂಗಳಲ್ಲಿ ಕೊರೋನಾದಿಂದ ಸಾವನ್ನಪ್ಪಿದ್ದವರ ಸಂಖ್ಯೆ ಕಡಿಮೆಯಾಗಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಗಿರಿಧರ್ ಬಾಬು ಅವರು ತಿಳಿಸಿದ್ದಾರೆ. 

"

ಈ ಬಗ್ಗೆ ಅನಾಲಿಸಿಸ್ ಗ್ರಾಫ್‌ವೊಂದನ್ನ ಬಿಡುಗಡೆ ಮಾಡಿರುವ ಗಿರಿಧರ್ ಬಾಬು ಅವರು, ಜುಲೈನಲ್ಲಿ ಸಾವಿನ ಸಂಖ್ಯೆಯಲ್ಲಿ ಸಿಕ್ಕಾಪಟ್ಟೆ ಏರಿಕೆಯಾಗಿತ್ತು. ಆದರೆ, ಆಗಸ್ಟ್‌ನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಸಾವಿನ ಸಂಖ್ಯೆಯಲ್ಲಿ ಇಳಿತವಾಗಿದೆ. ಜುಲೈ 15 ರಿಂದ 31 ರವರವರೆಗೆ ರಾಜ್ಯದಲ್ಲಿ 1386 ಮಂದಿ ಸಾವನ್ನಪ್ಪಿದರು. ಬೆಂಗಳೂರಿನಲ್ಲಿ ಜುಲೈ 15 ರಿಂದ 31 ರವರವರೆಗೆ 592 ಮಂದಿ ಮೃತಪಟ್ಟಿದ್ದರು. ಆದ್ರೆ ಆಗಸ್ಟ್ 1 ರಿಂದ 14 ರವರೆಗೂ ರಾಜ್ಯದಲ್ಲಿ 1403 ಮಂದಿ ಕೊರೋನಾಗೆ ಉಸಿರು ಚೆಲ್ಲಿದ್ದಾರೆ. ಬೆಂಗಳೂರಿನಲ್ಲಿ ಆಗಸ್ಟ್ 1 ರಿಂದ 14 ರವರಗೆ 331 ಮಂದಿ ಬಲಿಯಾಗಿದ್ದಾರೆ ಎಂದು ವಿವರವಾಗಿ ಮಾಹಿತಿ ನೀಡಿದ್ದಾರೆ. 

ರಾಜ್ಯದಲ್ಲಿ ಒಂದೇ ದಿನ ದಾಖಲೆಯ 8818 ಕೇಸ್‌, 6629 ಜನ ಡಿಸ್ಚಾರ್ಜ್!

ಸದ್ಯ ಪ್ರತಿನಿತ್ಯ ರಾಜ್ಯದಲ್ಲಿ 7 ರಿಂದ  7ವರೆ ಸಾವಿರದವರೆಗೂ ಕೊರೋನಾ ಕೇಶ್‌ಗಳು ಪತ್ತೆಯಾಗುತ್ತಿವೆ. ಆದರೆ, ಸಾವಿನ ಗ್ರಾಫ್ ಏರಿಕೆಯಾಗದಿರುವುದು ಸಮಾಧಾನಕರ ವಿಚಾರವಾಗಿದೆ. ಅದರಲ್ಲೂ ಬೆಂಗಳೂರನಲ್ಲಿ ಡೆತ್ ರೇಷಿಯೋ ನಾಲ್ಕು ಪಟ್ಟು ಕಡಿಮೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಡೆತ್ ರೇಷಿಯೋ ಕಡಿಮೆಯಾಗಿದೆ. ಸೋಂಕಿತರು ಹೆಚ್ಚಾಗಿದ್ದರೂ ಸಾಯುವವರ ಸಂಖ್ಯೆ ಕಡಿಮೆಯಾಗಿದೆ. ತಜ್ಞರ ಅನಾಲಿಸಿಸ್ ಪ್ರಕಾರ ಬೆಂಗಳೂರಿನಲ್ಲಿ ಟೆಸ್ಟಿಂಗ್ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ಸಾರ್ವಜನಿಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸುತ್ತಿದ್ದಾರೆ. ಬೇಗ ಟೆಸ್ಟಿಂಗ್ ಮಾಡಿಸಿ ಆಸ್ಪತ್ರೆಗೆ ಬೇಗ ದಾಖಲಾಗುತ್ತಿದ್ದಾರೆ. ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರು ಕೂಡ ಸಾಕಷ್ಟು ಎಚ್ಚರ ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕೊರೋನಾ ಆರಂಭದಲ್ಲಿ ಇತರೆ ಆರೋಗ್ಯ ಸಮಸ್ಯೆ ಇರುವ ರೋಗಿಗಳಿಗೆ ಮಾರಕವಾಗಿ ಬಲಿ ಪಡೆದಿತ್ತು. ಸದ್ಯ ಕಾಯಿಲೆ ಬಂದರು ಬದುಕುಳಿಯುವ ಸಾಮರ್ಥ್ಯ ಜನರಲ್ಲಿ ಬಂದಿದೆ. ಇನ್ನು ರಾಜ್ಯದಲ್ಲೂ ಕೆಲ ಜಿಲ್ಲೆಗಳಲ್ಲಿಯೂ ಕೂಡ ಡೆತ್ ರೇಷಿಯೋ ಕಡಿಮೆಯಾಗುತ್ತಿದೆ. ಸೋಂಕಿತರು ಹೆಚ್ಚಾಗುತ್ತಿದ್ದರೂ ಸಾವನ್ನಪ್ಪುವವರ ಸಂಖ್ಯೆ ಕಡಿಮೆಯಾಗಿದ್ದಾರೆ. ಇದು ಖುಷಿಯ ವಿಚಾರವಾಗಿದೆ. ಸಾಮಾಜಿಕ ಅಂತರ ಮಾಸ್ಕ್ ಧರಿಸಿವುದು, ಬೇಗ ವೈದ್ಯರನ್ನ ಸಂಪರ್ಕಿಸಿದರೆ  ಕಾಯಿಲೆ ಕಂಟಕವಲ್ಲ ಎಂದು ಸಾಂಕ್ರಮಿಕ ರೋಗಶಾಸ್ತ್ರಜ್ಞ ಗಿರಿಧರ್ ಬಾಬು ಅವರು ತಿಳಿಸಿದ್ದಾರೆ.