'ಸೋಂಕಿತರಿಗೆ ಹಾಸಿಗೆ ಮೀಸಲಿಡದ ಖಾಸಗಿ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ’
ವಿಕ್ರಮ್, ಶಿಫಾ, ಎಚ್‌ಬಿಎಸ್ ಆಸ್ಪತ್ರೆಗಳಿಗೆ ನೋಟಿಸ್| ಈವರೆಗೂ ಹಾಸಿಗೆ ನೀಡದ ಕುರಿತು ಸಮಜಾಯಿಷಿ ಕೂಡಾ ಕೊಡುವಂತೆ ತಿಳಿಸಲಾಗಿದೆ: ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ|
ಬೆಂಗಳೂರು(ಏ.25): ರಾಜ್ಯ ಸರ್ಕಾರದ ಆದೇಶದಂತೆ ಕೋವಿಡ್ ಸೋಂಕಿತರ ಚಿಕಿತ್ಸೆ ಶೇಕಡ 50ರಷ್ಟುಹಾಸಿಗೆ ಮೀಸಲಿಡದ ವಿಕ್ರಮ್ ಆಸ್ಪತ್ರೆ ಸೇರಿದಂತೆ ಮೂರು ಆಸ್ಪತ್ರೆಗಳಿಗೆ ನೋಟಿಸ್ ನೀಡಿದ್ದು, 24 ಗಂಟೆಯೊಳಗೆ ನಿಗದಿತ ಹಾಸಿಗೆಗಳನ್ನು ನೀಡುವಂತೆ ಸೂಚಿಸಿದ್ದೇವೆ ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಶನಿವಾರ ಅವರು, ಬಿಬಿಎಂಪಿ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆ ಮೀಸಲಿಟ್ಟಿರುವ ಸಂಬಂಧ ವಿಕ್ರಂ ಆಸ್ಪತ್ರೆ, ಶಿಫಾ ಆಸ್ಪತ್ರೆ, ಎಚ್‌ಬಿಎಸ್ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
'ಕೋವಿಡ್ ಕೇರ್ ಸೆಂಟರ್‌ನಲ್ಲೂ ಆಕ್ಸಿಜನ್ ಬೆಡ್ ವ್ಯವಸ್ಥೆ’
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ಶೇ.50ರಷ್ಟು ಹಾಸಿಗೆ ಮತ್ತು ಐಸಿಯು ಹಾಸಿಗೆ ನೀಡದ ಮೂರು ಆಸ್ಪತ್ರೆಗಳಿಗೆ ನೋಟಿಸ್ ನೀಡಿದ್ದು, 24 ಗಂಟೆಯೊಳಗೆ ಹಾಸಿಗೆ ಕೊಡುವಂತೆ ಸೂಚನೆ ನೀಡಿದ್ದೇವೆ. ಜತೆಗೆ ಈವರೆಗೂ ಹಾಸಿಗೆ ನೀಡದ ಕುರಿತು ಸಮಜಾಯಿಷಿ ಕೂಡಾ ಕೊಡುವಂತೆ ತಿಳಿಸಲಾಗಿದೆ ಎಂದರು.
ವಲಯ ಆಯುಕ್ತ ಮನೋಜ್ ಜೈನ್, ವಲಯ ಜಂಟಿ ಆಯುಕ್ತ ಪಲ್ಲವಿ, ಡಿಸಿಪಿ ಶರಣಪ್ಪ, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ಆರೋಗ್ಯಾಧಿಕಾರಿ ಸಿದ್ದಪ್ಪಾಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.