ಬೆಂಗಳೂರು[ಆ. 09]  ಅನಾರೋಗ್ಯವಿದ್ದರೂ, ರಾಜ್ಯದ ಜನರು ನೆರೆಯಿಂದ ನಲುಗುತ್ತಿರುವುದು ಕಂಡು ನನ್ನ ಮನಸ್ಸು ತುಡಿಯುತ್ತಿದೆ. ನಾಳೆ (10/8/19) ಬೆಳಗ್ಗೆ ಬೆಳಗಾವಿ, ಸಂಕೇಶ್ವರ, ಚಿಕ್ಕೋಡಿ, ನರಗುಂದ, ನವಲಗುಂದ ಹಾಗೂ ಹುಬ್ಬಳ್ಳಿ-ಧಾರವಾಡಕ್ಕೆ ಭೇಟಿ ನೀಡಿ ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

ಜ್ವರದಿಂದ ಬಳಲುತ್ತಿರುವ ನಾನು ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು. ಆದರೆ ಈಗ ಪ್ರವಾಸ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

ಮಹಾರಾಷ್ಟ್ರದಿಂದ ಬಿಡುಗಡೆಯಾಗಿರುವ ನೀರು ಮತ್ತು ಉತ್ತರ ಕರ್ನಾಕದ  ಮಳೆ ಬೆಳಗಾವಿ ಜಿಲ್ಲೆಯ ಶೇ. 70 ರಷ್ಟು ಪ್ರದೇಶವನ್ನು ಜಲಾವೃತ ಮಾಡಿದ್ದು ಸೇನಾ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.