ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕದ ಮೊದಲ ಕಾರ್ಗೋ ಸೇವೆ: ಕೃಷ್ಯುತ್ಪನ್ನ ಸಾಗಾಟ

*   ಕೃಷಿ ಉಡಾನ್‌ 2.0 ಯೋಜನೆಯಡಿ ಹುಬ್ಬಳ್ಳಿ ವಿಮಾನ ನಿಲ್ದಾಣ ಆಯ್ಕೆ
*   ಯೋಜನೆಯಡಿ ವಿಮಾನದಲ್ಲಿ ನೆರೆ ರಾಜ್ಯಗಳಿಗೆ ಕೃಷಿ ಉತ್ಪನ್ನ ರಫ್ತು
*   ಪೂರಕವಾಗಿ ನಿರ್ಮಾಣವಾಗಿದೆ ಕಾರ್ಗೋ ಟರ್ಮಿನಲ್‌
 

North Karnataka First Cargo Service at Hubballi Airport grg

ಮಯೂರ ಹೆಗಡೆ

ಹುಬ್ಬಳ್ಳಿ(ನ.02):  ಕೃಷಿ ಉಡಾನ್‌ 2.0(Krishi UDAN 2.0) ಯೋಜನೆಯಡಿ ಹುಬ್ಬಳ್ಳಿ ವಿಮಾನ ನಿಲ್ದಾಣ(Hubballi Airport) ಆಯ್ಕೆಯಾಗಿದೆ. ಉತ್ತರ ಕರ್ನಾಟಕ ಭಾಗದ ಕೃಷಿ ಉತ್ಪನ್ನಗಳ ಸಾಗಾಟ, ವ್ಯಾಪಾರಕ್ಕೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.

ಕೇಂದ್ರ ವಿಮಾನಯಾನ ಸಚಿವಾಲಯ(Central Aviation Ministry) ಈಚೆಗೆ ಕೃಷಿ ಉಡಾನ್‌ 2.0 ಯೋಜನೆಯಡಿ 53 ವಿಮಾನ ನಿಲ್ದಾಣಗಳನ್ನು(Airport) ಆಯ್ಕೆ ಮಾಡಿದೆ. ಅದರಲ್ಲಿ ಹುಬ್ಬಳ್ಳಿಯನ್ನು(Hubballi) ಕೂಡ ಸೇರ್ಪಡೆ ಮಾಡಲಾಗಿದೆ. ಪ್ರಸ್ತುತ ಉತ್ತರ ಕರ್ನಾಟಕ(North Karnataka) ಭಾಗದ ಮೊದಲ ಕಾರ್ಗೋ ಟರ್ಮಿನಲ್‌(Cargo Terminal) (ಸರಕು ಸಾಗಣೆ ನಿಲ್ದಾಣ) ಇಲ್ಲಿನ ವಿಮಾನ ನಿಲ್ದಾಣದಲ್ಲಿ ತಲೆ ಎತ್ತಿದೆ. ಕೈಗಾರಿಕಾ ಉತ್ಪನ್ನಗಳ(Industrial Products) ಸರಕು ಸಾಗಣೆಗೆ ಇದರಿಂದ ಉದ್ಯಮಿಗಳಿಗೆ ಸಾಕಷ್ಟು ನೆರವಾಗುವ ನಿರೀಕ್ಷೆ ಹೊಂದಲಾಗಿದೆ. ಅದರ ಜತೆಗೆ ಈಗ ಕೃಷಿ ಉಡಾನ್‌ ಕೂಡ ಸೇರಿರುವುದು ಹೆಚ್ಚಿನ ಬಲ ಬಂದಂತಾಗಿದೆ.

ಹುಬ್ಬಳ್ಳಿ ಏರ್‌ಪೋರ್ಟ್‌ ಬಳಿಯೆ ಹೆಲಿಪೋರ್ಟ್‌!

ಕೃಷಿ ಉಡಾನ್‌

2021-22ನೇ ವರ್ಷದಲ್ಲೆ ಈ ಯೋಜನೆ ಜಾರಿಗೆ ಬರಲಿದೆ. ಜತೆಗೆ ಯೋಜನೆಯಡಿ ಎಎಐ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹಬ್‌ ಒಂದನ್ನು ಸ್ಥಾಪಿಸಲಿದೆ. ಉತ್ತರ ಕರ್ನಾಟಕ ಭಾಗದ ಉಳ್ಳಾಗಡ್ಡಿ, ತೊಗರಿ, ಕಡಲೆ, ಬೇಳೆಕಾಳು, ಮೆಣಸು ಸೇರಿ ಇತರೆ ಕೃಷಿ ಉತ್ಪನ್ನಗಳನ್ನು(Agricultural Products) ಬೇರೆ ರಾಜ್ಯಗಳಿಗೆ ಸಾಗಾಟಕ್ಕೆ ಅನುಕೂಲವಾಗಲಿದೆ. ಇದು ರೈತರಿಗೆ(Farmers) ಹೆಚ್ಚಿನ ಲಾಭದಾಯಕ ಆಗಲಿದೆ ಎನ್ನುತ್ತಾರೆ ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದಕುಮಾರ ಠಾಕರೆ.

ಇ-ಕುಶಲ್‌ ಪೋರ್ಟಲ್‌(E-Kaushal Portal) ಮೂಲಕ ಕೃಷಿ ಉತ್ಪನ್ನ ಸಾಗಾಟದ(Agricultural Product Shipping) ಮಾಹಿತಿಯನ್ನೂ ಸಚಿವಾಲಯ ಒದಗಿಸಲಿದೆ. ಕೃಷಿ ಉಡಾನ್‌ 2.0 ಅಡಿಯಲ್ಲಿ ವಿಮಾನಯಾನ ಇಂಧನ (ATF) ಮೇಲಿನ ಮಾರಾಟ ತೆರಿಗೆಯನ್ನು(Tax) ಶೇ. 1ಕ್ಕೆ ಇಳಿಸಲು ಸಚಿವಾಲಯವು ರಾಜ್ಯ ಸರ್ಕಾರಕ್ಕೆ(State Government) ಸೂಚಿಸಿದೆ. ಸಹಜವಾಗಿ ವಿಮಾನಯಾನ ಕಂಪನಿಗಳು(Airlines Companies) ಏರ್‌ ಕಾರ್ಗೋ ಮೂಲಕ ಕೃಷಿ ಉತ್ಪನ್ನ ಸಾಗಾಟಕ್ಕೆ ವಿಧಿಸುವ ಶುಲ್ಕವನ್ನು ಒಂದಿಷ್ಟು ಕಡಿಮೆ ಮಾಡುವ ನಿರೀಕ್ಷೆಯಿದೆ.

ಹೊಸ ಟರ್ಮಿನಲ್‌ ಪೂರಕ

ಹುಬ್ಬಳ್ಳಿ ವಿಮಾನ ನಿಲ್ದಾಣದ ಹಳೆ ಕಟ್ಟಡವನ್ನು 46.27ಲಕ್ಷ ವೆಚ್ಚದಲ್ಲಿ ಎಎಐ (Airports Authority of India) ಕಾರ್ಗೋ ಲಾಜಿಸ್ಟಿಕ್ಸ್‌ ಆ್ಯಂಡ್‌ ಅಲೈಡ್‌ ಸರ್ವೀಸಸ್‌ ಕಂಪನಿ ಲಿ. ಸಹಯೋಗದಲ್ಲಿ ಕಾರ್ಗೋ ಸೇವೆ ಆರಂಭವಾಗುತ್ತಿದೆ. ವಾರ್ಷಿಕ 15 ಸಾವಿರ ಮೆ.ಟನ್‌. ಸಂಗ್ರಹ ಸಾಮರ್ಥ್ಯದ ಟರ್ಮಿನಲ್‌(Terminal0 ಇದಾಗಿದೆ. ಪ್ರತಿ ತಿಂಗಳು 30-40 ಮೆ.ಟನ್‌. ಸರಕು ಸಾಗಣೆಯ ನಿರೀಕ್ಷೆ ಹೊಂದಲಾಗಿದೆ.

ಕೃಷಿ ಉಡಾನ್‌ ಯೋಜನೆಗೆ ಪೂರಕವಾಗುವಂತೆ ಈಗಾಗಲೆ ಹೊಸ ಟರ್ಮಿನಲ್‌ನಲ್ಲಿ ಕೋಲ್ಡ್‌ ಸ್ಟೋರೆಜ್‌ ಘಟಕ(Cold Storage Unit) ನಿರ್ಮಾಣವಾಗಿದೆ. ಇದರಿಂದ ಕೃಷಿ ಉತ್ಪನ್ನಗಳ ದಾಸ್ತಾನಿಗೂ ಅನುಕೂಲವಾಗಿದೆ. ನ. 15ರ ಸುಮಾರಿಗೆ ಕಾರ್ಗೋ ಸೇವೆ ಬಹುತೇಕ ಆರಂಭವಾಗುವ ಸಾಧ್ಯತೆ ಇದೆ. ಈ ವಾರದಿಂದ ಪ್ರಾಯೋಗಿಕವಾಗಿ ಸರಕು ಸಾಗಣೆ ಮಾಡಲಾಗುವುದು. ಕೃಷಿ ಉಡಾನ್‌ ಯೋಜನೆ ಅನುಷ್ಠಾನ ಎಎಐ ಸೂಚನೆಯಂತೆ ಮುಂದಿನ ದಿನಗಳಲ್ಲಿ ಆರಂಭವಾಗಲಿದೆ.

ಗ್ರಾಹಕ ಸಂತೃಪ್ತಿ: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ 3ನೇ ರ‍್ಯಾಂಕ್

ಕಾರ್ಗೋ ಸೇವೆಗಾಗಿ ವರ್ಷಾಂತ್ಯಕ್ಕೆ ಹೊಸ ವಿಮಾನಯಾನ ಸಂಸ್ಥೆಯೊಂದು ಬೆಂಗಳೂರು-ಹುಬ್ಬಳ್ಳಿ-ಮಂಬೈ(Bengaluru-Hubballi-Mumbai) ನಡುವೆ ಸೇವೆ ಆರಂಭಿಸುವ ಸಾಧ್ಯತೆ ಇದೆ ಎಂದು ನಿಲ್ದಾಣದ ನಿರ್ದೇಶಕ ಠಾಕರೆ ತಿಳಿಸಿದ್ದಾರೆ.

ಅಹ್ಮದಾಬಾದ್‌ ಮಾರ್ಗ ಪುನರ್‌ ಆರಂಭ ನಿರೀಕ್ಷೆ

ಕೋವಿಡ್‌(Covid19) ಪೂರ್ವದಲ್ಲಿದ್ದ ಅಹ್ಮದಾಬಾದ್‌(Ahmedabad), ಮಂಗಳೂರ(Mangaluru) ವಿಮಾನಯಾನ ಇನ್ನೂ ಮರುಪ್ರಾರಂಭ ಆಗಿಲ್ಲ. ಇಂಡಿಗೋ(Indigo), ಸ್ಟಾರ್‌ ಏರ್‌ ಸಂಸ್ಥೆಗಳ ಜತೆ ಮಾತುಕತೆ ಮುಂದುವರಿದಿದೆ. ಕೆಲವು ತಾಂತ್ರಿಕ ಸಮಸ್ಯೆಗಳು ಅಡ್ಡಿಯಾಗಿದ್ದು, ವರ್ಷಾಂತ್ಯ, ಚಳಿಗಾಲ ಅಂತ್ಯದೊಳಗೆ ಸಂಸ್ಥೆಗಳು ಈ ಮಾರ್ಗದ ಸೇವೆಯನ್ನು ಪುನಃ ಆರಂಭಿಸುವ ನಿರೀಕ್ಷೆ ಇದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದಕುಮಾರ ಠಾಕರೆ ತಿಳಿಸಿದ್ದಾರೆ.

ಕೃಷಿ ಉಡಾನ್‌ ಯೋಜನೆಯಡಿ ಹುಬ್ಬಳ್ಳಿ ವಿಮಾನ ನಿಲ್ದಾಣ ಆಯ್ಕೆಯಾಗಿ ನೋಟಿಫಿಕೇಶನ್‌ ಆಗಿದೆ. ಉತ್ತರ ಕರ್ನಾಟಕ ಭಾಗದ ಕೃಷಿ ಉತ್ಪನ್ನ ಏರ್‌ ಕಾರ್ಗೋ ಮೂಲಕ ಸಾಗಾಟಕ್ಕೆ ಹೆಚ್ಚಿನ ನೆರವಾಗಲಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದಕುಮಾರ ಠಾಕರೆ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios