ಶಿವಮೊಗ್ಗ (ಫೆ.15): ದೇಹದ ಜೀವಕೋಶಗಳನ್ನು ಇನ್ನಷ್ಟುಆರೋಗ್ಯಪೂರ್ಣವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದು ಆಯುರ್ವೇದ ಶಾಸ್ತ್ರ ಹೇಳುವ ಪ್ರಕೃತಿದತ್ತ ಔಷಧಯುಕ್ತ ನೋನಿ ಹಣ್ಣಿನಿಂದ ಸಂಸ್ಕರಿತ ಆರೋಗ್ಯಪೇಯ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೃತ್‌ ನೋನಿ ಸಂಸ್ಥೆ ದೇಶದಲ್ಲಿ ಮೊದಲ ಬಾರಿಗೆ ‘ನೋನಿ ಟೀ’ ಹೊರತರಲು ಸಿದ್ಧತೆ ನಡೆಸಿದೆ.

ಇಲ್ಲಿನ ನವುಲೆಯ ಕೃಷಿ ಮತ್ತು ತೋಟಗಾರಿಕಾ ವಿವಿ ಮತ್ತು ವ್ಯಾಲ್ಯೂ ಪ್ರೊಡಕ್ಟ್ ಪ್ರೈವೇಟ್‌ ಲಿ. ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಸಹ್ಯಾದ್ರಿ ನೋನಿ ಟೀ ತಂತ್ರಜ್ಞಾನವನ್ನು ಕೃಷಿ ಮತ್ತು ತೋಟಗಾರಿಕಾ ವಿವಿಯು ಫೆ.17ರಂದು ಅಮೃತ್‌ ನೋನಿ ತಯಾರಿಕಾ ಸಂಸ್ಥೆಯಾದ ವ್ಯಾಲ್ಯೂ ಪ್ರೊಡಕ್ಟ್ ಪ್ರೈವೇಟ್‌ ಲಿ. ಸಂಸ್ಥೆಗೆ ಮುಖ್ಯಮಂತ್ರಿ ಉಪಸ್ಥಿತಿಯಲ್ಲಿ ಹಸ್ತಾಂತರಿಸಲಿದ್ದು, ಬಳಿಕ ಇದು ‘ಅಮೃತ್‌ ನೋನಿ ಟೀ‘ ಹೆಸರಿನಲ್ಲಿ ಹೊರಬರಲಿದೆ.

ನೋನಿ ಹಣ್ಣಿನ ವಿಶಿಷ್ಟಗುಣಗಳ ಕುರಿತು ಆಯುರ್ವೇದ ಶಾಸ್ತ್ರ, ಪುರಾಣ ಎಲ್ಲದರಲ್ಲಿಯೂ ಹೇಳಲಾಗಿದೆ. ಇದೊಂದು ಪ್ರಕೃತಿದತ್ತ ಸಿಗುವ ದಿÊೌ್ಯಷಧ ಎಂದೇ ಪ್ರಸಿದ್ಧವಾಗಿದೆ. ಆದರೆ, ಆಧುನಿಕ ವ್ಯವಸ್ಥೆಯಲ್ಲಿ ಇದರ ಸಂಸ್ಕರಣೆ ಇತ್ತೀಚಿನ ದಶಕದಲ್ಲಷ್ಟೇ ಸಾಧ್ಯವಾಗಿದ್ದು, ಆ ಬಳಿಕ ಇದು ವಿಶ್ವಾದ್ಯಂತ ಜನಪ್ರಿಯವಾಗಿದೆ. ಆದರೆ, ಈ ನೋನಿ ಹಣ್ಣನ್ನು ಚಹಾ ರೂಪದಲ್ಲಿ ಹೊರತಂದಿರುವುದು ಮಾತ್ರ ದೇಶದಲ್ಲಿ ಇದೇ ಮೊದಲ ಬಾರಿ.

ಊಟದ ನಂತ್ರ ಬಿಸಿ ಬಿಸಿ ಟೀ, ಕಾಫಿ: ನಾಲಗೆಗೆ ರುಚಿ, ಆರೋಗ್ಯಕ್ಕೆ..?

ವ್ಯಾಲ್ಯೂ ಪ್ರೊಡಕ್ಟ್ ಸಂಸ್ಥೆಯ ಮ್ಯಾನೇಜಿಂಗ್‌ ಡೈರೆಕ್ಟರ್‌ ಡಾ.ಶ್ರೀನಿವಾಸ ಮೂರ್ತಿ ಹೇಳುವ ಪ್ರಕಾರ ‘ಅಮೃತ್‌ ನೋನಿ ಔಷದಯುಕ್ತ ಪೇಯ ಜನಪ್ರಿಯ ಮಾತ್ರವಲ್ಲ, ಇದರ ಪರಿಣಾಮವನ್ನು ಜನರು ಅನುಭವಿಸಿ ಪ್ರತಿಕ್ರಿಯಿಸಿದ ಬಳಿಕ ಇದರ ಇನ್ನೊಂದು ರೂಪವಾಗಿ ‘ಚಹಾ’ ಮೂಲಕ ಹೊರತರಬೇಕೆಂಬ ಕನಸು ಬಹಳ ದಿನಗಳಿಂದ ಇತ್ತು. ಈ ಸಂಬಂಧ ನಮ್ಮ ಸಂಸ್ಥೆ ಸಾಕಷ್ಟುಸಂಶೋಧನೆ ಮಾಡಿತು. ಬಳಿಕ ನವುಲೆ ಕೃಷಿ ಮತ್ತು ತೋಟಗಾರಿಕಾ ವಿ.ವಿ.ಯಲ್ಲಿ ಇದರ ತಂತ್ರಜ್ಞಾನಕ್ಕಾಗಿ ಅರ್ಜಿ ಸಲ್ಲಿಸಿದ್ದೆ. ವಿ.ವಿ. ಒಪ್ಪಿಗೆ ನೀಡಿದ ಬಳಿಕ ಸುಮಾರು ಒಂದು ವರ್ಷ ಸಂಶೋಧನೆ ನಡೆದು ಅಂತಿಮವಾಗಿ ಚಹಾ ತಂತ್ರಜ್ಞಾನ ಸಿದ್ಧವಾಯಿತು. ಕೃಷಿ ವಿವಿ ಸಂಶೋಧಿಸಿದ ಈ ಟೀ ನಮಗೆ ಒಪ್ಪಿಗೆಯಾಗಿದ್ದು, ಜನರು ಕೂಡ ಇದನ್ನು ಖಂಡಿತವಾಗಿಯೂ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಎನ್ನುತ್ತಾರೆ.

ಅಮೃತ್‌ ನೋನಿ ಟೀ ಸೇವನೆಯಿಂದ ಆರೋಗ್ಯ ಸುಧಾರಣೆಯ ಜೊತೆಗೆ ಮಾನಸಿಕ ಸ್ಥಿಮಿತತೆ ಹೆಚ್ಚುತ್ತದೆ. ಮಾನಸಿಕ ಉದ್ವೇಗ ಕಡಿಮೆ ಮಾಡಿ ಶಾಂತಯುತ ಮನಸ್ಸನ್ನು ರೂಢಿಸುತ್ತದೆ. ದೇಹದಲ್ಲಿನ ಸುಸ್ತು ನಿವಾರಣೆಯಾಗಿ ಲವಲವಿಕೆ ಮೂಡುತ್ತದೆ. ಮುಂಜಾನೆ ಬೇರೆ ಪೇಯ ಸೇವಿಸುವುದರ ಬದಲಿಗೆ ನೋನಿ ಚಹಾ ಸೇವನೆ ಉತ್ತಮವಾಗಿರುತ್ತದೆ ಎನ್ನುತ್ತಾರೆ.

ಇದರಲ್ಲಿ ಶೇ.20 ರಷ್ಟುನೋನಿ ಅಂಶವಿದ್ದು, ಉಳಿದಂತೆ ಮಲೆನಾಡಿನಲ್ಲಿ ಸಿಗುವ ಅಮೂಲ್ಯ ಮತ್ತು ಆರೋಗ್ಯದಾಯಕ ಗಿಡಮೂಲಿಕೆಗಳು, ಚಕ್ಕೆ, ಕಾಳುಮೆಣಸು ಇತ್ಯಾದಿ ಬಳಸಲಾಗಿದೆ. ರುಚಿಯ ಜೊತೆಗೆ ಘಮಘಮಿಸುವುದು ಕೂಡ ಮುಖ್ಯ. ಇದರೊಂದಿಗೆ ಆರೋಗ್ಯ ಇನ್ನೂ ಮುಖ್ಯ ಎನ್ನುತ್ತಾರೆ.

ಈ ಚಹಾಕ್ಕೆ ಯಾವುದೇ ರೀತಿಯ ರಾಸಾಯನಯುಕ್ತ ಬಣ್ಣ, ಸುಗಂಧ, ಪ್ರಿಸರ್‌ವೇಟೀವ್‌ ಯಾವುದನ್ನೂ ಸೇರಿಸಿಲ್ಲ. ಬದಲಾಗಿ ಎಲ್ಲವೂ ಪ್ರಕೃತಿದತ್ತವಾದ ಸಹಜ ಅಂಶಗಳೇ ಇವೆ. ಸ್ಯಾಚೆಟ್‌ ಮಾದರಿಯಲ್ಲಿ ಇದನ್ನು ಮಾರುಕಟ್ಟೆಗೆ ತರಲು ಸಿದ್ಧತೆ ನಡೆಸಲಾಗಿದೆ. ಬಿಸಿನೀರು ಇರುವ ಕಪ್‌ನಲ್ಲಿ ಸ್ಯಾಚೆಟ್‌ ಇಳಿಬಿಟ್ಟು ಚಹಾ ತಯಾರಿಸುವ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಬರಲಿದೆ. ಸಾಧಾರಣ ಜನರಿಗೂ ಇದು ಕೈಗೆ ಸಿಗುವಂತೆ ದರ ನಿಗದಿಪಡಿಸಲಾಗುತ್ತದೆ

- ಡಾ.ಶ್ರೀನಿವಾಸಮೂರ್ತಿ, ವ್ಯವಸ್ಥಾಪಕ ನಿರ್ದೇಶಕ, ಅಮೃತ್‌ ನೋನಿ ಚಹಾ ತಯಾರಿಕಾ ಕಂಪನಿ