ಊಟದ ನಂತ್ರ ಬಿಸಿ ಬಿಸಿ ಟೀ, ಕಾಫಿ: ನಾಲಗೆಗೆ ರುಚಿ, ಆರೋಗ್ಯಕ್ಕೆ..?

First Published Feb 14, 2021, 2:12 PM IST

ಒಂದು ಕಪ್ ಟೀ ಅಥವಾ ಕಾಫಿಯ ದಿನದ ಎಲ್ಲಾ ಆಯಾಸವನ್ನು ದೂರವಿರಿಸುತ್ತದೆ. ಬಹಳಷ್ಟು ಜನರಿಗೆ ಚಹಾ ಕುಡಿಯುವ ಅಭ್ಯಾಸವಿದೆ. ಆದರೆ ಅವರು ಚಹಾ ಸೇವನೆಯ ನೆಪವನ್ನು ಹುಡುಕುತ್ತಲೇ ಇರುತ್ತಾರೆ. ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಟೀ, ಬೆಳಗಿನ ತಿಂಡಿಯೊಂದಿಗೆ ಚಹಾ, ಸಂಜೆ ಟೀ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟ ಮಾಡಿದ ನಂತರ, ಬಹಳಷ್ಟು ಜನರಿಗೆ ಟೀ ಅಥವಾ ಕಾಫಿ (ಊಟದ ನಂತರ ಟೀ) ಕುಡಿಯುವ ಅಭ್ಯಾಸವಿದೆ. ಆದರೆ ಊಟ ವಾದ ನಂತರ ಟೀ ಕುಡಿಯುವ ಅಭ್ಯಾಸ ನಿಮ್ಮಲ್ಲಿದ್ದರೆ, ಎಚ್ಚರವಹಿಸಿ.