Asianet Suvarna News Asianet Suvarna News

ಮಕ್ಕಳಿಗೆ ವಾಹನ ಕೊಟ್ಟ ಪೋಷಕರ ವಿರುದ್ಧ ಜಾಮೀನು ರಹಿತ ಕೇಸ್‌: ಬಿ.ದಯಾನಂದ್

ವಾಹನ ಚಾಲನೆಗೆ 18 ವರ್ಷ ಮೇಲ್ಪಟ್ಟದ ವಯಸ್ಸು ನಿಗದಿಗೂ ಸಹ ವೈಜ್ಞಾನಿಕ ಕಾರಣವಿದೆ ಎಂಬುದನ್ನು ಪೋಷಕರು ಅರಿತುಕೊಳ್ಳಬೇಕು. ತಮ್ಮ ಮಕ್ಕಳಷ್ಟೆ ಬುದ್ದಿವಂತರಾಗಿದ್ದರೂ ಸಹ 18 ವರ್ಷಕ್ಕೆ ಅವರ ಮೆದುಳು ಸಂಪೂರ್ಣವಾಗಿ ಬೆಳವಣಿಗೆ ಆಗಿರುವುದಿಲ್ಲ. ಹೀಗಾಗಿಯೇ ವಾಹನಗಳ ಚಾಲನೆಗೆ. ವಯಸಿನವರಿಗೆ ನಿರ್ಬಂಧವಿದೆ: ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ 

Non Bailable Case against Parents who gave Vehicle to Children says B Dayanand grg
Author
First Published May 26, 2024, 9:32 AM IST

ಬೆಂಗಳೂರು(ಮೇ.26):  ವಾಹನಗಳನ್ನು ಅಪ್ರಾಪ್ತ ಮಕ್ಕಳಿಗೆ ನೀಡುವ ಪೋಷಕರ ವಿರುದ್ಧ ಬಾಲಾಪರಾಧಿ ನ್ಯಾಯಿಕ ಕಾಯ್ದೆ (ಜೆಜೆ ಆಕ್ಟ್)ಯಡಿ ಜಾಮೀನು ರಹಿತ ಪ್ರಕರಣ ದಾಖಲಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಎಚ್ಚರಿಕೆ ನೀಡಿದ್ದಾರೆ. 

ನಗರದ ಹೊಸೂರು ರಸ್ತೆಯ ಆಫ್ ಇನ್ಫೋರ್ಮೇಷನ್ ಟೆಕ್ನಾಲಜಿ ಸಭಾಂಗಣದಲ್ಲಿ ಶನಿವಾರ ಆಯೋಜಿ ಸಿದ್ದ ಮಾಸಿಕ ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಸಾರ್ವಜನಿಕರ ಆಹ ಆಯುಕ್ತರು ಮಾತನಾಡಿದರು. 
ರಸ್ತೆಯಲ್ಲಿ ಅತಿವೇಗವಾಗಿ ಮನಬಂದಂತೆ ಮಕ್ಕಳು ವಾಹನ ಚಾಲನೆ ಮಾಡುವ ಬಗ್ಗೆ ಕೋರಮಂಗಲದ ನಿವಾಸಿ ಪಾರ್ವತಿ ಪ್ರಶ್ನೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಆಪ್ರಾಪ್ತ ಮಕ್ಕಳ ಪೋಷಕರಿಗೆ ಕಾನೂನಿನ ಪಾಠ ಮಾಡಿದರು. 

ದೇಶದಲ್ಲಿ ಜೂ.1ರಿಂದ ಬದಲಾಗಲಿದೆ ಪೊಲೀಸ್‌ ಕಾಯ್ದೆ! ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದ್ದೇನು?

ವಾಹನ ಚಾಲನೆಗೆ 18 ವರ್ಷ ಮೇಲ್ಪಟ್ಟದ ವಯಸ್ಸು ನಿಗದಿಗೂ ಸಹ ವೈಜ್ಞಾನಿಕ ಕಾರಣವಿದೆ ಎಂಬುದನ್ನು ಪೋಷಕರು ಅರಿತುಕೊಳ್ಳಬೇಕು. ತಮ್ಮ ಮಕ್ಕಳಷ್ಟೆ ಬುದ್ದಿವಂತರಾಗಿದ್ದರೂ ಸಹ 18 ವರ್ಷಕ್ಕೆ ಅವರ ಮೆದುಳು ಸಂಪೂರ್ಣವಾಗಿ ಬೆಳವಣಿಗೆ ಆಗಿರುವುದಿಲ್ಲ. ಹೀಗಾಗಿಯೇ ವಾಹನಗಳ ಚಾಲನೆಗೆ. ವಯಸಿನವರಿಗೆ ನಿರ್ಬಂಧವಿದೆ ಎಂದು ನುಡಿದರು. ಇತ್ತೀಚೆಗೆ ಅಪಘಾತ ಪ್ರಕರಣದಲ್ಲಿ ಜೆ.ಜೆ. ಕಾಯ್ದೆಯಡಿ ಪುಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅದೇ ರೀತಿ ಮುಂದಿನ ದಿನಗಳಲ್ಲಿ ಬೆಂಗಳೂರು ನಗರ ವ್ಯಾಪ್ತಿ ಕೂಡಾ ವಾಹನಗಳನ್ನು ಚಲಾಯಿಸಲು ಅಪ್ರಾಪ್ತ ಮಕ್ಕಳಿಗೆ ನೀಡುವ ಪೋಷಕರ ಮೇಲೆ ಜಿಜೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತದೆ ಆಯುಕ್ತರು ಸ್ಪಷ್ಟಪಡಿಸಿದರು. ಎಂದು
ಆಗ್ನೆಯ ವಿಭಾಗದ ಡಿಸಿಪಿ ಡಾ। ಸಿ.ಕೆ.ಬಾಬಾ, ದಕ್ಷಿಣ ವಿಭಾಗ (ಸಂಚಾರ) ಡಿಸಿಪಿ ಶಿವಪ್ರಕಾಶ್ ಇದ್ದರು. 

ಜೈಲು ಬಳಿ ಜಾಮ‌ರ್ ಸಮಸ್ಯೆಗೆ ಪರಿಹಾರ: ಆಯುಕ್ತರಿಂದ ಅಭಯ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೊಬೈಲ್ ಜಾಮರ್ ಅಳವಡಿಕೆ ಯಿಂದ ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆ ಶೀಘ್ರದಲ್ಲೇ ಪರಿಹಾರ ವಾಗಲಿದೆ ಎಂದು ಆಯುಕ್ತ ದಯಾನಂದ್ ಭರವಸೆ ನೀಡಿದರು. ಸಭೆಯಲ್ಲಿ ಸೆಂಟ್ರಲ್ ಜೈಲ್‌ನ ಜಾಮರ್ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದ ಚನ್ನಕೇಶದ ನಗರದ ನಿವಾಸಿ ನಾಗೇಶ್, ಸೆಂಟ್ರಲ್ ಜೈಲ್‌ನಲ್ಲಿ ಜಾಮರ್ ಅಳವಡಿಕೆಯಿಂದ ಸುತ್ತಮತ್ತ ಪ್ರದೇಶಗಳಲ್ಲಿ ನೆಲೆಸಿರುವ ಜನರಿಗೆ ಮೊಬೈಲ್ ಸಂಪರ್ಕಕ್ಕೆ ಅಡಚಣೆಯಾಗಿದೆ. ಇದರಿಂದ ತುರ್ತು ಸಂದರ್ಭದಲ್ಲಿ ಆ್ಯಂಬು ಲೆನ್ಸ್‌ ಗಳನ್ನು ಸಹ ಬರಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು. ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

Latest Videos
Follow Us:
Download App:
  • android
  • ios