ಯಾದಗಿರಿಯಲ್ಲಿ ಅನ್ನಭಾಗ್ಯ ಸಾಗಾಟದ ಲಾರಿಗಳಿಗಿಲ್ಲ ಭದ್ರತೆ..!
ಅನ್ನಭಾಗ್ಯ ಇದು ಪಕ್ಕಾ ಬಡವರ ಯೋಜನೆಯಾಗಿದೆ. ಇದರಿಂದಾಗಿ ಹಲವು ಬಡ ಕುಟುಂಬಗಳು ಮೂರು ಹೊತ್ತು ಹೊಟ್ಟೆ ತುಂಬಾ ಊಟ ಮಾಡಿ ನೆಮ್ಮದಿಯ ಬದುಕು ನಡೆಸುತ್ತಿವೆ. ಆದ್ರೆ ಯಾದಗಿರಿಯ ಆಹಾರ ಪೊರೈಕೆ ಮತ್ತು ನಾಗರಿಕ ಪೊರೈಕೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸಾಮಾನ್ಯವಾಗಿ ಪಡಿತರ ಅಕ್ಕಿ ಸಾಗಾಟಕ್ಕೆ ತನ್ನದೆಯಾದ ನೀತಿ-ನಿಯಮಗಳಿವೆ. ಆದ್ರೆ ಅವೆಲ್ಲಾ ನಿಯಮಗಳನ್ನು ಆಹಾರ ಮತ್ತು ನಾಗರಿಕ ಪೊರೈಕೆ ಇಲಾಖೆ ಅಧಿಕಾರಿಗಳು ಗಾಳಿಗೆ ತೂರಿರುವುದು ದುರಂತ.
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ
ಯಾದಗಿರಿ(ಆ.01): ಬಡವರು ಹಸಿವಿನಿಂದ ಬಳಲಬಾರದು ಎಂಬ ಮಹತ್ವಾಕಾಂಕ್ಷೆ ಉದ್ದೇಶ ಇಟ್ಟುಕೊಂಡು ಸರ್ಕಾರ ಬಡತನ ರೇಖೆಗಳಿಗಿಂತ ಕಡಿಮೆಯಿರುವ (BPL) ಕಾರ್ಡ್ ದಾರರಿಗೆ ಉಚಿತ ಅಕ್ಕಿಯನ್ನು ನೀಡಲಾಗುತ್ತದೆ. ಆದ್ರೆ ಯಾದಗಿರಿಯಲ್ಲಿ ಬಡವರ ಹೊಟ್ಟೆ ಸೇರಬೇಕಾದ ಅಕ್ಕಿ ಕಳ್ಳರ ಪಾಲಾಗುತ್ತಿರುವುದು ದುರಂತ. ಅದಕ್ಕೆ ಅಹಾರ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯತನವೇ ಕಾರಣವಾಗಿದೆ. ಯಾಕಂದ್ರೆ ಯಾದಗಿರಿಯಲ್ಲಿ ಪಡಿತರ ಅಕ್ಕಿ ಸಾಗಾಟ ಮಾಡುವ ಹಲವು ಲಾರಿಗಳಿಗೆ ಜಿಪಿಎಸ್ ಅಳವಡಿಕೆ ಮಾಡಿಲ್ಲ. ಇದರಿಂದಾಗಿ ಕಳ್ಳತನಕ್ಕೆ ದಾರಿ ಮಾಡಿಕೊಟ್ಟಂತಾಗಿದೆ.
ಅನ್ನಭಾಗ್ಯ ಅಕ್ಕಿ ಸಾಗಾಟದ ಲಾರಿಗಳಿಗಿಲ್ಲ ಭದ್ರೆತೆ..!
ಅನ್ನಭಾಗ್ಯ ಇದು ಪಕ್ಕಾ ಬಡವರ ಯೋಜನೆಯಾಗಿದೆ. ಇದರಿಂದಾಗಿ ಹಲವು ಬಡ ಕುಟುಂಬಗಳು ಮೂರು ಹೊತ್ತು ಹೊಟ್ಟೆ ತುಂಬಾ ಊಟ ಮಾಡಿ ನೆಮ್ಮದಿಯ ಬದುಕು ನಡೆಸುತ್ತಿವೆ. ಆದ್ರೆ ಯಾದಗಿರಿಯ ಆಹಾರ ಪೊರೈಕೆ ಮತ್ತು ನಾಗರಿಕ ಪೊರೈಕೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸಾಮಾನ್ಯವಾಗಿ ಪಡಿತರ ಅಕ್ಕಿ ಸಾಗಾಟಕ್ಕೆ ತನ್ನದೆಯಾದ ನೀತಿ-ನಿಯಮಗಳಿವೆ. ಆದ್ರೆ ಅವೆಲ್ಲಾ ನಿಯಮಗಳನ್ನು ಆಹಾರ ಮತ್ತು ನಾಗರಿಕ ಪೊರೈಕೆ ಇಲಾಖೆ ಅಧಿಕಾರಿಗಳು ಗಾಳಿಗೆ ತೂರಿರುವುದು ದುರಂತ. ಯಾಕಂದ್ರೆ ಕಳೆದ ಮೇ ತಿಂಗಳು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಪಡಿತರ ಅಕ್ಕಿ ತುಂಬಿದ ಲಾರಿ ಕಳ್ಳತನವಾಗಿತ್ತು. ನಂತರ ಲಾರಿ ಪತ್ತೆ ಹಚ್ಚಲು ಪೋಲಿಸರಿಗೆ ಬಹಳ ತೊಂದ್ರೆ ಆಯ್ತು. ಕಳ್ಳತನವಾಗಿದ್ದ ಲಾರಿಗೆ ಜಿಪಿಎಸ್ ಅಳವಡಿಕೆ ಮಾಡಿರಲಿಲ್ಲ. ಹಾಗಾಗಿ ಕೇವಲ ಲಾರಿ ಸಿಕ್ತು, ಆದ್ರೆ ಲಾರಿಯಲ್ಲಿನ ಅಕ್ಕಿ ಮಾಯವಾಗಿತ್ತು. ಇದಕ್ಕೆಲ್ಲಾ ಕಾರಣ ಆಹಾರ ಮತ್ತು ನಾಗರಿಕ ಪೊರೈಕೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ. ಆಹಾರ ಇಲಾಖೆಯ ಆಹಾರ ಧಾನ್ಯಗಳ ಸಾಗಾಟ ಮಾಡುವ ಯಾವುದೇ ಅಧಿಕೃತ ಸಾಗಾಟ ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಮಾಡಬೇಕು ಅಂತ ನಿಯಮವಿದೆ. ಆದ್ರೆ ಯಾದಗಿರಿಯಲ್ಲಿ ಮಾತ್ರ ಅದು ಪಾಲನೆಯಾಗುತ್ತಿಲ್ಲ.
ಶಹಾಪುರ: ಮೊಹರಂ ದಿನವೇ ಎರಡು ಗಂಪಿನ ನಡುವೆ ಗಲಾಟೆ: ಐವರಿಗೆ ಗಾಯ!
ಯಾದಗಿರಿ ಜಿಲ್ಲೆಯ 56 ಲಾರಿಗಳಿಗಿಲ್ಲ ಜಿಪಿಎಸ್
ಯಾದಗಿರಿ ಜಿಲ್ಲೆಯಲ್ಲಿ 6 ತಾಲೂಕುಗಳಿವೆ. ಆಯಾ ತಾಲೂಕಿಗೆ ಪ್ರತಿ ತಿಂಗಳು ಪಡಿತರ ಧವಸ-ಧಾನ್ಯಗಳನ್ನು ಆಹಾರ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ ಸಾಗಾಟ ಹಾಗೂ ಪೊರೈಕೆ ಮಾಡಲಾಗ್ತದೆ. ಆಹಾರ ಧಾನ್ಯ ಸಂಗ್ರಹಿಸುವ ಗೋದಾಮಿನಿಂದ ಹೋಲ್ ಸೇಲ್, ರಿಟೈಲ್ ಸಾಗಾಟವನ್ನು ಸಾಗಾಟಗಾರರು ಮಾಡ್ತಾರೆ. ಪಡಿತರ ಆಹಾರ ಧಾನ್ಯ ಸಾಗಾಣಿಕೆಗೆ ಉಪಯೋಗಿಸುವ ವಾಹನಗಳಿಗೆ ಕಡ್ಡಾಯವಾಗಿ ಟ್ಯಾಂಪಲ್ ಪ್ರೂಪ್ ಜಿಪಿಎಸ್ ಸಾಧನವನ್ನು ಅಳವಡಿಕೆ ಮಾಡಬೇಕು. ಅದು ಕೂಡಾ ಆಹಾರ ಮತ್ತು ನಾಗರಿಕ ಪೊರೈಕೆ ಇಲಾಖೆಯಿಂದಲೇ ಮಾಡಬೇಕು. ಆದ್ರೆ ಇದುವರೆಗೂ ಹಲವು ಪಡಿತರ ಅಹಾರ ಧಾನ್ಯ ಸಾಗಾಟ ಮಾಡುವ 56 ಲಾರಿಗಳಿಗೆ ಜಿಪಿಎಸ್ ಅಳವಡಿಕೆ ಮಾಡುವ ಗೋಜಿಗೇ ಹೋಗಿಲ್ಲ. ಆಹಾರ ಧಾನ್ಯ ಸಾಗಾಟ ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಮಾಡಿದ್ರೆ ಆ ವಾಹನ ಮೇಲೆ ಸಂಪೂರ್ಣ ನಿಗಾ ವಹಿಸಬಹುದಾಗಿದೆ. ಅಕ್ಕಿ ಸಾಗಾಟ ಮಾಡುವಾಗ ಮಾರ್ಗ ಮಧ್ಯೆ ವಾಹನ ನಿಲ್ಲಿಸಲು ಸಹ ಚಾಲಕರು ಹಿಂದೇಟು ಹಾಕುವಂತಾಗಿದೆ. ಜಿಪಿಎಸ್ ಅಳವಡಿಕೆ ಮಾಡದ ಇಲಾಖೆಯ ನಡೆ ಹಲವು ಅನುಮಾನಗಳಿಗೀಡು ಮಾಡಿದೆ.
ಆಹಾರ ಇಲಾಖೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಕಳೆದ ಮೇ ತಿಂಗಳಿನಲ್ಲಿ ಪಡಿತರ ಅಕ್ಕಿ ತುಂಬಿದ ಲಾರಿ ಕಳ್ಳತನವಾಗಿತ್ತು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಬಡವರ ಹೊಟ್ಟೆ ತುಂಬಿಸಬೇಕಾದ ಅಕ್ಕಿ ಕಳ್ಳರ ಪಾಲಾಗಿತ್ತು, ಇನ್ನು ಸಹ ಕೇವಲ ಲಾರಿ ಸಿಕ್ಕಿದೆ ಮಾತ್ರ ಅಕ್ಕಿ ಸಿಕ್ಕಿಲ್ಲ. ಒಂದು ವೇಳೆ ಆ ಕಳ್ಳತನವಾಗಿದ್ದ ಲಾರಿಗೆ ಜಿಪಿಎಸ್ ಅಳವಡಿಕೆ ಮಾಡಿದ್ರೆ ಕಳ್ಳರು ಲಾರಿಯನ್ನು ಕಳ್ಳತನ ಮಾಡಿ ಎಲ್ಲಿಗೆ ತೆಗೆದುಕೊಂಡು ಹೋಗಿದ್ರು ಅಂತ ಪೋಲಿಸರಿಗೆ ಪತ್ತೆ ಹಚ್ಚಲು ಸಹಾಯವಾಗ್ತಿತ್ತು. ಜಿಪಿಎಸ್ ಅಳವಡಿಕೆಗೆ ನಿರ್ಲಕ್ಷ್ಯ ಮಾಡಿದ್ದರಿಂದ ಇಂತಹ ಕೃತ್ಯ ನಡೆದಿದೆ. ಇದನ್ನು ಯಾದಗಿರಿ ಜಿಲ್ಲಾಡಳಿತ ಬಹಳ ಗಂಭೀರವಾಗಿ ಪರಿಗಣಿಸಿ ಕೂಡಲೇ 56 ಅಹಾರ ಧಾನ್ಯ ಸಾಗಾಟ ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಸಬೇಕು. ಕಳ್ಳರ ಪಾಲಾಗುತ್ತಿರುವ ಅಕ್ಕಿಯನ್ನು ತಡೆಯಬೇಕೆಂದು ಸಾಮಾಜಿಕ ಕಾರ್ಯಕರ್ತ ಉಮೇಶ.ಕೆ.ಮುದ್ನಾಳ ಒತ್ತಾಯಿಸಿದರು.