ಕ್ಯಾಬಿನೆಟ್ ಸಭೆ ಮುಗಿಯುತ್ತಿದ್ದಂತೆಯೇ ಪತ್ರ ಹಿಡಿದು ಸಿಎಂ ಕಚೇರಿಗೆ ಹೋದ ವಲಸಿಗ ಸಚಿವರು
* ಸಚಿವ ಸಂಪುಟ ಮುಗಿಯುತ್ತಿದ್ದಂತೆಯೇ ಸಿಎಂ ಕಚೇರಿಗೆ ತೆರಳಿದ ವಲಸಿಗ ಸಚಿವರು
* ಕೈಯಲ್ಲಿ ಪತ್ರ ಹಿಡಿದು ಯಡಿಯೂರಪ್ಪನವರ ಕಚೇರಿಗೆ ತೆರಳಿದ ಮಿತ್ರಮಂಡಳಿ
* ಕುತೂಹಲ ಕೆರಳಿಸಿದ ವಲಸಿಗ ಸಚಿವರ ನಡೆ
ಬೆಂಗಳೂರು, (ಜು.22): ಸಿಎಂ ಬದಲಾವಣೆ ಖಚಿತ ಎನ್ನಲಾಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಮತ್ತೊಂದು ದಿಢೀರ್ ಬೆಳವಣೆ ನಡೆಯುತ್ತಿದೆ.
ಇಂದು (ಗುರುವಾರ) ಸಂಜೆ ಸಚಿವ ಸಂಪುಟ ಮುಗಿದ ಬಳಿಕ ಬಿಜೆಪಿಗೆ ವಿವಿಧ ಪಕ್ಷಗಳಿಂದ ರಾಜ್ಯದಲ್ಲಿ ಸರ್ಕಾರ ಅಸ್ಥಿತ್ವಕ್ಕೆ ಬರಲು ಕಾರಣರಾಗಿದ್ದ ಮಿತ್ರಮಂಡಳಿ ಸದಸ್ಯರು ಕೈಯಲ್ಲಿ ಪತ್ರ ಹಿಡಿದು ಸಿಎಂ ಕಚೇರಿಗೆ ತೆರಳಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ನಾಯಕತ್ವ ಬದಲಾವಣೆ: ದೇಶಕ್ಕೆ ಮೋದಿ, ರಾಜ್ಯಕ್ಕೆ ಸವದಿ
ಸಚಿವ ಸಂಪುಟ ಸಭೆ ಮುಕ್ತಾಯಗೊಳ್ಳುತ್ತಿದ್ದಂತೆ ವಿಧಾನಸೌಧದಲ್ಲಿ ಸಚಿವ ಬಿಸಿ ಪಾಚೀಲ್, ಭೈರತಿ ಬಸವರಾಜ್, ಕೆ.ಗೋಪಾಲಯ್ಯ, ಡಾ.ಕೆ.ಸುಧಾಕರ್, ಶಿವರಾಂ ಹೆಬ್ಬಾರ್, ಎಸ್ ಟಿ ಸೋಮಶೇಖರ್ ಸೇರಿದಂತೆ 7 ಸಚಿವರು ಕೈಯಲ್ಲಿ ಪತ್ರವೊಂದನ್ನು ಹಿಡಿದುಕೊಂಡು ಯಡಿಯೂರಪ್ಪನವರಿಗೆ ಭೇಟಿಗೆ ಹೋಗಿದ್ದಾರೆ.
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದದರಿಂದ ಇದನ್ನ ಬೆಂಬಲಿಸಿ ಮಿತ್ರಮಂಡಳಿಯ ಏಳು ಜನ ಸಚಿವರು ಸಹ ರಾಜೀನಾಮೆಗೆ ಮುಂದಾಗಿದ್ದಾರಾ ಎನ್ನುವ ಅನುಮಾನಗಳು ಹುಟ್ಟುಕೊಂಡಿವೆ. ಆದ್ರೆ, ತಮ್ಮ ರಾಜಕೀಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಸಿಎಂ ಭೇಟಿಗೆ ಹೋಗಿದ್ದಾರೆ ಎನ್ನವುದು ಸ್ಪಷ್ಟವಾಗಿದೆ.
ಸಿಎಂ ಯಡಿಯೂರಪ್ಪ ಬದಲಾವಣೆ ನಂತರ ತಮ್ಮ ಸಚಿವ ಸ್ಥಾನಕ್ಕೆ ಯಾವುದೇ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಬೇಕು. ನಿಮ್ಮನ್ನು ನಾವು ನಂಬಕೊಂಡು ಬಂದಿದ್ದೇವೆ. ಮುಂದಿ ಸಿಎಂ ನಮ್ಮನ ಕ್ಯಾಬಿನೆಟ್‌ನಲ್ಲಿ ಉಳಿಸಿಕೊಳ್ಳುತ್ತಾರಾ? ಹೀಗೆ ಹಲವು ತಮ್ಮ ಮುಂದಿನ ರಾಜಕೀಯ ವಿಚಾರಗಳನ್ನ ಚರ್ಚಿಸಲು ಸಿಎಂ ಜೊತೆಗೆ ಚರ್ಚಿಸಲು ಯಡಿಯೂರಪ್ಪ ಕಚೇರಿಗೆ ಹೋಗಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಯಡಿಯೂರಪ್ಪನವರ ರಾಜೀನಾಮೆ ಸುದ್ದಿ ಬೆನ್ನಲ್ಲೇ ಫುಲ್ ಸೈಲೆಂಟ್ ಆಗಿದ್ದ ವಲಸಿಗ ಸಚಿವರ ನಡೆ ಸದ್ಯ ತೀವ್ರ ಕುತೂಹಲ ಮೂಡಿಸಿದೆ.