ಭ್ರಷ್ಟಾಚಾರವಿಲ್ಲದೆ ರಾಜಕಾರಣ ಇಲ್ಲ: ಪ್ರೊ.ಭಗವಾನ್‌

ದೇಶದ ಬಹುತೇಕ ರಾಜಕಾರಣಿಗಳು, ಅಧಿಕಾರಿಗಳು ರೈತ ಕುಲದಿಂದಲೇ ಬಂದಿದ್ದರೂ ರೈತರ ಪರ ನಿಲ್ಲದಿರುವುದು ಸಾಮಾಜಿಕ ದುರಂತ ಎಂದು ವಿಚಾರವಾದಿ ಪ್ರೊ.ಕೆ.ಎಸ್‌.ಭಗವಾನ್‌ ಬೇಸರ ವ್ಯಕ್ತಪಡಿಸಿದರು.

No politics without corruption  Prof  Bhagwan snr

 ಕೆ.ಆರ್‌.ಪೇಟೆ (ಜ.16):  ದೇಶದ ಬಹುತೇಕ ರಾಜಕಾರಣಿಗಳು, ಅಧಿಕಾರಿಗಳು ರೈತ ಕುಲದಿಂದಲೇ ಬಂದಿದ್ದರೂ ರೈತರ ಪರ ನಿಲ್ಲದಿರುವುದು ಸಾಮಾಜಿಕ ದುರಂತ ಎಂದು ವಿಚಾರವಾದಿ ಪ್ರೊ.ಕೆ.ಎಸ್‌.ಭಗವಾನ್‌ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಗ್ರಾಮಭಾರತಿ ವಿದ್ಯಾಸಂಸ್ಥೆಯ ಎಸ್‌.ಸಿ.ಚಿಕ್ಕಣ್ಣಗೌಡ ಸಭಾಭವನದಲ್ಲಿ ಉದಯರವಿ ಟ್ರಸ್ಟ್‌ ಆಯೋಜಿಸಿದ್ದ ಸಾಹಿತಿ ಎನ್‌.ಎಂ.ತಿಮ್ಮೇಗೌಡ ವಿರಚಿತ ಏಳು ಪುಸ್ತಕಗಳ ಲೋಕಾರ್ಪಣೆಗೊಳಿಸಿ ಮಾತನಾಡಿ, ನಾನೊಬ್ಬ ರೈತನ ಮಗ. ಹೊಲವನ್ನು ಉತ್ತು ಭಿತ್ತಿದ ಅನುಭವ ನನಗಿದೆ. ನಾನು ಈಗಲೂ ರೈತ ಚಳವಳಿಯ ಬೆಂಬಲಿಗ. ಆದರೆ, ದೇಶದ ರಾಜಕಾರಣಿಗಳೂ ಮತ್ತು ಅಧಿಕಾರಿಗಳು ರೈತ ಕುಲದಿಂದಲೇ ಬಂದಿದ್ದರೂ ಅವರಾರ‍ಯರೂ ರೈತರ ಪರ ಇಲ್ಲದಿರುವುದು ಬೇಸರ ತರಿಸಿದೆ ಎಂದರು.

ಪ್ರಸ್ತುತ ಭ್ರಷ್ಟಾಚಾರವಿಲ್ಲದೆ ರಾಜಕಾರಣ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಯುವ ಜನಾಂಗದ ಮೇಲೆ ಪರಿಣಾಮ ಬೀರುತ್ತಿದೆ. ಜನರನ್ನು ಸರಿಯಾದ ದಾರಿಯಲ್ಲಿ ನಾವು ತೆಗೆದುಕೊಂಡು ಹೋಗುತ್ತಿಲ್ಲ. ಇದರ ಪರಿಣಾಮವಾಗಿಯೇ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮೊಟ್ಟಮೊದಲು ಮಾನವ ಕುಲ ತಾನೊಂದು ಎಂದು ಜಗತ್ತಿಗೆ ಸಾರಿದವನು ಗೌತಮ ಬುದ್ಧ. ಬುದ್ಧನ ತತ್ವಗಳಲ್ಲಿ ಪ್ರಪಂಚಕ್ಕೆ ಬೆಳಕಿದೆ. ಆದರೆ, ಬುದ್ಧನ ಇತಿಹಾಸವನ್ನು ತಪ್ಪಾಗಿ ಬರೆಯಲಾಗಿದೆ ಎಂದರು.

ರೋಗಿ, ಮುಪ್ಪು ಮತ್ತು ಶವವನ್ನು ನೋಡಿದ ಕಾರಣಕ್ಕೆ ಬುದ್ಧ ಅರಮನೆ ತ್ಯಜಿಸಿ ವಿರಾಗಿಯಾಗಲಿಲ್ಲ. ಬದಲಾಗಿ ಅಂದು ಶಾಕ್ಯರು ಮತ್ತು ಪೋಳಿಯರ ನಡುವೆ ಜಲ ವಿವಾದವಿತ್ತು. ಇದರ ಪರಿಹಾರಕ್ಕೆ ಬುದ್ಧನ ತಂದೆ ಶಾಕ್ಯ ವಂಶದ ಶುದ್ದೋದನ ಪೋಲಿಯರ ಜೊತೆ ಯುದ್ಧಕ್ಕೆ ನಿಂತ. ಯುದ್ಧವನ್ನು ವಿರೋಧಿಸಿ ಬುದ್ಧ ಅರಮನೆ ತ್ಯಜಿಸಿದ. ಇದು ಪಾಳಿ ಭಾಷೆಯ ಬೌದ್ಧ ಕೃತಿಗಳಲ್ಲಿಯೇ ದಾಖಲಾಗಿದೆ ಎಂದರು.

ಬುದ್ಧನ ತಂದೆ ಶುದ್ದೋದನ ರೈತ ಕುಲಕ್ಕೆ ಸೇರಿದವನು. ಶುದ್ದೋದನ ವಪ್ರಮಂಗಲ (ಭೂಮಿಪೂಜೆ) ಎನ್ನುವ ಹಬ್ಬ ಆಚರಿಸುತ್ತಿದ್ದ. ಹಬ್ಬದ ದಿನ 1 ಸಾವಿರ ನೇಗಿಲು ಕಟ್ಟಿಹೊಲ ಉಳುಮೆ ಮಾಡಲಾಗುತ್ತಿತ್ತು. ಶುದ್ದೋದನ ಚಿನ್ನದ ಗುಳದಿಂದ ಹೊಲ ಉಳುತ್ತಿದ್ದ. ಬುದ್ಧನ ಕಾಲದಿಂದಲೇ ನಮ್ಮ ರೈತರಲ್ಲಿ ಹೊನ್ನಾರು ಕಟ್ಟುವ ಸಾಂಪ್ರದಾಯಿಕ ಹಬ್ಬ ಆಚರಣೆಗೆ ಬಂದಿದೆ ಎಂದರು.

ಈ ವೇಳೆ ಎನ್‌.ಎಂ.ತಿಮ್ಮೇಗೌಡ ವಿರಚಿತ ಅವರ್‌ ಇಂಡಿಯಾ, ಲಾರ್ಡ್‌ ಕೃಷ್ಣ ದಿ ಬ್ಲಾಕ್‌ ಹೋಲ್  ಪ್ರಾಗ್ರೆನ್ಸ್ ಆಫ್‌ ಫ್ರೀ ವಿಲ್ ,  ಸಾಂಗ್ಸ್ ಆಫ್‌ ಲವ್‌, ಸಾಂ‌ಗ್ಸ್  ಆಫ್‌ ಲವ್‌ ಭಾಗ 2, ಆರಿಜಿನ್‌ ಆಫ್‌ ದಿ ಯೂನಿವರ್ಸ್‌ ಮತ್ತು ಆಧ್ಯಾತ್ಮ ಎನ್ನುವ ಏಳು ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಉದಯರವಿ ಟ್ರಸ್ಟಿನ ಅಧ್ಯಕ್ಷ ಕೆ.ಎಸ್‌.ಸೋಮಶೇಖರ್‌ ಅಧ್ಯಕ್ಷತೆ ವಹಿಸಿದ್ದರು ಲೇಖಕ ಎನ್‌.ಎಂ.ತಿಮ್ಮೇಗೌಡ, ಬರಹಗಾರ ಕೆ.ಮಾಯಿಗೌಡ, ನಿವೃತ್ತ ಉಪನ್ಯಾಸಕ ಟಿ.ಎ.ತಮ್ಮೇಗೌಡ, ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಕೆ.ಎಸ್‌.ಶಿವಕುಮಾರ್‌ ಉಪಸ್ಥಿತರಿದ್ದರು.

ಶಿವಮೊಗ್ಗ :  ವಿವಾದಿತ ಸಾಹಿತಿ ಕೆ.ಎಸ್‌. ಭಗವಾನ್‌ಗೆ ಸಾಗರ ಜೆಎಂಎಫ್‌ಸಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಭಗವಾನ್‌ರನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಲು ಮೈಸೂರು ಎಸ್ಪಿಗೆ  ಸಾಗರ JMFC ನ್ಯಾಯಾಲಯ ಆದೇಶಿಸಿದೆ. ಸಾಗರ ಪೇಟೆ ಪೋಲಿಸರು ನೋಟಿಸ್ ಜಾರಿ ಮಾಡದ ಹಿನ್ನೆಲೆಯಲ್ಲಿ ನ್ಯಾಯಾದೀಶರಾದ ಶ್ರೀಶೈಲ ಬೀಮಸೇನ್ ಭಗಾಡೆ ಅವರು ಮಹತ್ವದ ಆದೇಶ ನೀಡಿದ್ದಾರೆ.  ಮೈಸೂರು ಎಸ್‌ಪಿ ಖುದ್ದು ಸಮನ್ಸ್ ಜಾರಿ ಮಾಡಿ  ನ. 2 ರಂದು ನ್ಯಾಯಾಲಯಕ್ಕೆ ಆರೋಪಿ ಕೆ.ಎಸ್‌. ಭಗವಾನ್‌ರನ್ನು ಹಾಜರು ಪಡಿಸುವಂತೆ ಆದೇಶ ನೀಡಿದೆ. 

ರಾಮ ಮಂದಿರ ಏಕೆ ಬೇಡ? ಕೃತಿ ವಿವಾದ

ರಾಮ ಮಂದಿರದ ಬಗ್ಗೆ ಮೈಸೂರಿನ ಸಾಹಿತಿ ಭಗವಾನ್ ಅವರು ವಿವಾದಾತ್ಮಕ ಕೃತಿ ಬರೆದಿದ್ದರು. ಈ ಸಂಬಂಧ ಭಗವಾನ್ ವಿರುದ್ಧ ಇಕ್ಕೇರಿಯ ಮಹಾಬಲೇಶ್ವರ ಎಂಬುವವರು ನ್ಯಾಯಾಲಯದಲ್ಲಿ ಖಾಸಗಿ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಶಿವಮೊಗ್ಗ ಜಿಲ್ಲೆಯ ಸಾಗರ JMFC ನ್ಯಾಯಾಲಯದಲ್ಲಿ ವಿವಾದಾತ್ಮಕ ಸಾಹಿತಿ ಭಗವಾನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. 

ಪ್ರೊ.ಭಗವಾನ್‌ಗೆ ಮಸಿ ಬಳಿದ ವಕೀಲೆಯ ಪತಿ ವಿರುದ್ಧವೂ FIR

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯ ಭಗವಾನ್ ವಿರುದ್ಧ IPC ಸೆಕ್ಷನ್ 295(a) ರಡಿಯಲ್ಲಿ ಧಾರ್ಮಿಕ ಭಾವನೆಗೆ ದಕ್ಕೆ ಸಂಬಂಧ ಪ್ರಕರಣ ದಾಖಲಿಸಿತ್ತು. ಆ. 30 ರ ಇಂದು(ಮಂಗಳವಾರ)  ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಆದರೆ, ಇಂದೂ ಕೂಡ ಸಾಹಿತಿ ಭಗವಾನ್ ಕೋರ್ಟ್‌ಗೆ ಹಾಜರಾಗಿಲ್ಲ. ಹೀಗಾಗಿ ಭಗವಾನ್‌ರನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಲು ಮೈಸೂರು ಎಸ್ಪಿಗೆ  ಸಾಗರ JMFC ನ್ಯಾಯಾಲಯ ಆದೇಶಿಸಿದೆ. ದೂರುದಾರರ ಪರ ವಕೀಲ ಕೆ.ವಿ.ಪ್ರವೀಣ ಕುಮಾರ್ ವಾದಿಸಿದ್ದರು.

Latest Videos
Follow Us:
Download App:
  • android
  • ios