ನಲಪಾಡ್ ಬ್ರಿಗೇಡ್ ಅಧ್ಯಕ್ಷೆಯಿಂದ ಮಾಜಿ ಸಚಿವರಿಗೆ ಹನಿಟ್ರ್ಯಾಪ್: ₹ 20 ಲಕ್ಷ ಕೇಳಿ ತಗ್ಲಾಕೊಂಡ ಲೇಡಿ!

ರಾಜ್ಯದ ಮಾಜಿ ಸಚಿವರೊಬ್ಬರಿಗೆ ಹನಿಟ್ರ್ಯಾಪ್ ಮಾಡಿ 20 ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದ ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ಮಂಜುಳಾ ಪಾಟೀಲ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಾಟ್ಸಾಪ್ ಮೂಲಕ ಸೆಕ್ಸ್ ಚಾಟ್, ವಿಡಿಯೋ ಕರೆ ಮಾಡಿ ಖಾಸಗಿ ದೃಶ್ಯಗಳನ್ನು ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದ ಮೇಲೆ ಬಂಧನವಾಗಿದೆ.

Nalapad Brigade President Arrested for Honeytrap Ex Minister and Demanding Rs 20 Lakh sat

ಬೆಂಗಳೂರು (ಅ.26): ರಾಜ್ಯದ ಮಾಜಿ ಸಚಿವರೊಬ್ಬರಿಗೆ ಹನಿಟ್ರ್ಯಾಪ್ ಮಾಡಿ, ಸಂಬಂಧಿತ ವಿಡಿಯೋವನ್ನು ಇಟ್ಟುಕೊಂಡು ಬರೋಬ್ಬರಿ 20 ಲಕ್ಷ ರೂ. ನೀಡುವಂತೆ ಡಿಮ್ಯಾಂಡ್ ಮಾಡಿದ್ದ ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ಮಂಜುಳಾ ಪಾಟೀಲ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ಕರ್ನಾಟಕ ರಾಜ್ಯದ ಕಲಬುರಗಿ ಸೇರಿದಂತೆ ವಿವಿಧೆಡೆ ರಾಜಕೀಯ ನಾಯಕರು, ಸ್ವಾಮೀಜಿಗಳು, ಉದ್ಯಮಿಗಳಿಗೆ ಹನಿಟ್ರ್ಯಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡುವ ಪ್ರಕರಣಗಳು ಹೆಚ್ಚಾಗಿವೆ. ಇತ್ತೀಚೆಗೆ ಕಲಬುರಗಿಯಲ್ಲಿ ಈ ಹನಿಟ್ರ್ಯಾಪ್ ಗ್ಯಾಂಗ್‌ ಅನ್ನು ಪೊಲೀಸರು ಹೆಡೆಮುರಿಕಟ್ಟಿದ್ದರು. ಇಷ್ಟಾದರೂ ಎಚ್ಚೆತ್ತುಕೊಳ್ಳದೇ ಕುತಂತ್ರದಿಂದ ಮಾಜಿ ಸಚಿವರಿಗೆ ಹನಿಟ್ರ್ಯಾಪ್ ಮಾಡಿ, ಬರೋಬ್ಬರಿ 20 ಲಕ್ಷ ರೂ. ಹಣವನ್ನು ಡಿಮ್ಯಾಂಡ್ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರ ದೂರಿನ ಅನ್ವಯ ಹನಿಟ್ರ್ಯಾಪ್ ಮಾಡಿದ ಆರೋಪದಲ್ಲಿ ಕಲಬುರಗಿ ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ಮಂಜುಳಾ ಪಾಟೀಲ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಅಕ್ಕನ ಗಂಡನೊಂದಿಗೆ ಅಕ್ರಮ ಸಂಬಂಧಕ್ಕೆ ಗಂಡನಿಗೆ ಗುಂಡಿ ತೋಡಿದ ಸುಪನಾತಿ ಹೆಂಡತಿ!

ಆರಂಭದಲ್ಲಿ ತಾನು ಕಾಂಗ್ರೆಸ್ ನಾಯಕ ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ಮಂಜುಳಾ ಪಾಟೀಲ್ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರ ಮೊಬೈಲ್ ನಂಬರ್ ಪಡೆದು ವಾಟ್ಸಾಪ್‌ನಲ್ಲಿ ತನ್ನ ಪರಿಚಯ ಮಾಡಿಕೊಂಡಿದ್ದಾಳೆ. ನಂತರ, ವಾಟ್ಸಾಪ್‌ನಲ್ಲಿ ಹಾಯ್, ಬಾಯ್.. ಚಾಟ್ ಮಾಡಿದ್ದಾಳೆ. ನಂತರ, ಸಲುಗೆಯಿಂದ ಚಾಟಿಂಗ್ ಮಾಡುತ್ತಾ, ತೀರಾ ಆಪ್ತತೆಯನ್ನು ಬೆಳೆಸಿಕೊಂಡು ಸೆಕ್ಸ್ ಚಾಟ್ ಆರಂಭಿಸಿದ್ದಾಳೆ. ಇದಾದ ನಂತರ ಇಬ್ಬರ ನಡುವೆ ವಾಟ್ಸಾಪ್ ವಿಡಿಯೋ ಕರೆ ಮೂಲಕ ಖಾಸಗಿಯಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಖಾಸಗಿಯಾಗಿ ಕಾಣಿಸಿಕೊಂಡ ಮಾಜಿ ಸಚಿವರ ದೃಶ್ಯಗಳನ್ನು ವಿಡಿಯೋ, ಫೋಟೋಗಳನ್ನು ಸಂಗ್ರಹ ಮಾಡಿಕೊಂಡು, ನಂತರ ಈ ವಿಡಿಯೋವನ್ನು ಮಾಜಿ ಸಚಿವರಿಗೆ ಕಳುಹಿಸಿ ಬೆದರಿಕೆ ಹಾಕಲು ಶುರು ಮಾಡಿದ್ದಾಳೆ.

ಮುಂದುವರೆಗೆ ನನಗೆ ನೀವು 20 ಲಕ್ಷ ರೂ. ಹಣವನ್ನು ಕೊಡದಿದ್ದರೆ ನಿಮ್ಮ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವೈರಲ್ ಮಾಡುವುದಾಗಿ ಹೇಳುತ್ತಾಳೆ.  ಆಗ ಮಾಜಿ ಸಚಿವರಿಗೆ ತನ್ನ ಮಾನ ಮರ್ಯಾದೆ ಹಾಲಾಗುತ್ತದೆ ಎಂದು ಭಯಗೊಳ್ಳುತ್ತಾರೋ ಈ ವಿಚಾರವನ್ನು ತನ್ನ ಪುತ್ರನ ಬಳಿ ಹೇಳಿಕೊಳ್ಳುತ್ತಾರೆ. ಆಗ ಇದಕ್ಕೆಲ್ಲಾ ಹೆದರಬೇಡಿ ಎಂದು ತಂದೆಗೆ ಅಭಯ ನೀಡಿದ ಪುತ್ರ ಸಂಬಂಧಪಟ್ಟ ಮಹಿಳೆಯ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಜೊತೆಗೆ, ಹಣ ಕೊಡುವುದಾಗಿ ಮಹಿಳೆಯನ್ನು ಬೆಂಗಳೂರಿಗೆ ಕರೆಸಿ, ಆಕೆ ಹಣ ಪಡೆಯಲು ಬಂದಾಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಹೆಂಡತಿ 'ಕರಿಮಣಿ ಮಾಲೀಕ ನೀನಲ್ಲ' ಎಂದು ರೀಲ್ಸ್ ಮಾಡಿದರೆ ಗಂಡಂದಿರೇ ಹುಷಾರ್!

ಮಾಜಿ ಸಚಿವ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಆರೋಪಿಗಳನ್ನು ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ವಿಚಾರಣೆ ನಡೆಸಿದ್ದ ನ್ಯಾಯಾಲಯ ಆರೋಪಿಗಳನ್ನು 8 ದಿನ ಸಿಸಿಬಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಆರೋಪಿತೆ ಮಂಜುಳ ಪಾಟೀಲ್ ಹಾಗೂ ಆಕೆಯ ಗಂಡ ಶಿವರಾಜ್ ಪಾಟೀಲ್ ಸಿಸಿಬಿ  ವಶಕ್ಕೆ ಪಡೆಯಲಾಗಿದೆ.

Latest Videos
Follow Us:
Download App:
  • android
  • ios