ರಾಯಚೂರು ಜಿಲ್ಲೆಗೆ ಬರಲು ಅಧಿಕಾರಿಗಳ ಹಿಂದೇಟು : ಬಂದವರೂ ನಿಲ್ಲುತ್ತಿಲ್ಲ
- ಅಕ್ರಮ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಷ್ಠಾವಂತ, ಖಡಕ್ ಅಧಿಕಾರಿಗಳಿಗೆ ಇಲ್ಲಿ ಜಾಗವಿಲ್ಲ
- ಪದೇ ಪದೆ ಡಿಸಿಗಳ ವರ್ಗಾವಣೆ, ಖಡಕ್ ಅಧಿಕಾರಿಗಳ ನಿಯುಕ್ತಿಗೊಳಿಸಿದರೂ ಅವರು ಬಾರದಂತೆ ಅಡ್ಡಗಟ್ಟುವ ಕಾಣದಕೈಗಳು
ರಾಯಚೂರು (ಅ.19): ಅಕ್ರಮ, ಭ್ರಷ್ಟಾಚಾರಕ್ಕೆ (Corruption) ಕಡಿವಾಣ ಹಾಕುವ ನಿಷ್ಠಾವಂತ, ಖಡಕ್ ಅಧಿಕಾರಿಗಳಿಗೆ (Officers) ಇಲ್ಲಿ ಜಾಗವಿಲ್ಲ ಎನ್ನುವಂತಹ ರಾಜಕೀಯ (Politics) ಒತ್ತಡ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಪದೇ ಪದೆ ಡಿಸಿಗಳ (DC) ವರ್ಗಾವಣೆ, ಖಡಕ್ ಅಧಿಕಾರಿಗಳ ನಿಯುಕ್ತಿಗೊಳಿಸಿದರೂ ಅವರು ಬಾರದಂತೆ ಅಡ್ಡಗಟ್ಟುವ ಕಾಣದಕೈಗಳು ಕೆಲಸ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿವೆ.
ಇದರಿಂದಾಗಿ ಹೊಸದಾಗಿ ಜಿಲ್ಲೆಗೆ ಬರಬೇಕು ಎಂದರೆ ಹಿಂದೇಟು ಹಾಕುತ್ತಿದ್ದು, ಬಂದವರು ಸಹ ಬಹುದಿನಗಳ ಕಾಲ ನಿಲ್ಲದೇ ಬೇರೆಡೆ ಹೋಗುವಂತಹ ವಾತಾವರಣ ಬೆಳೆಯುತ್ತಿರುವುದು ಅಭಿವೃದ್ಧಿಗೆ ಕಂಟಕವಾಗಿ ಮಾರ್ಪಟ್ಟಿದೆ.
ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಮತ್ತೆ ಶುರು : ಸಚಿವ ಅಶೋಕ್
ಇದಕ್ಕೆ ಉದಾಹಾರಣೆ ಎಂಬಂತೆ ಜಿಲ್ಲಾಧಿಕಾರಿ ವರ್ಗಾವಣೆಗೊಂಡು ವಾರ ಕಳೆದರೂ ನೂತನ ಅಧಿಕಾರ ಸ್ವೀಕರಿಸದೇ ಇರುವುದು, ಇಲ್ಲಿ ಕೆಲಸ ಮಾಡಿದಂತಹ ಡಿಸಿ ಕೇವಲ 78 ದಿನಗಳಲ್ಲಿಯೇ ಜಾಗ ಖಾಲಿ ಮಾಡಿರುವ ಘಟನೆಗಳು ಪುಷ್ಟಿನೀಡುತ್ತಿವೆ. ದೊಡ್ಡ ಪ್ರಮಾಣದ ಅಕ್ರಮ, ಭ್ರಷ್ಟಾಚಾರ , ಹಲವು ವರ್ಗಗಳಿಂದ ಪರಿಹಾರ ಕಾಣದ ಸ್ವಲಂತ ಸಮಸ್ಯೆಗಳು, ಅಕ್ರಮ ಮರಳುಗಾರಿಕೆ (Illegal Sand Mining), ಟಿಎಲ್‌ಬಿಸಿ (TLBC), ಎನ್‌ಆರ್‌ಬಿಸಿಯ (NRBC) ರೈತರ ತೊಂದರೆಗಳ ಪರಿಹಾರಕ್ಕಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಇಲ್ಲಿನ ರಾಜಕೀಯ ಒತ್ತಡ, ಸರ್ಕಾರದಿಂದ ಹಿಡಿತ ಸಾಧಿಸಿ ಮುನ್ನಡೆಸುವ ಜಿಲ್ಲೆಯ ಮಂತ್ರಿಗಳು ಇಲ್ಲದೇ ಇರುವುದು ಈ ದುಸ್ಥಿತಿ ಒದಗಿ ಬಂದಿದೆ.
ವಾರ ಕಳೆದರು ಬಾರದ ಡಿಸಿ:
ಕಳೆದ ಅ.11ರಂದು ರಾಯಚೂರು (Raichur) ಜಿಲ್ಲಾಧಿಕಾರಿ ಡಾ.ಸತೀಶ (Dr Satish) ಅವರನ್ನು ಕೊಡಗು (Kodagu) ಜಿಲ್ಲೆಯ ಡಿಸಿ (DC) ಯನ್ನಾಗಿಸಿ ವರ್ಗಾವಣೆ ಮಾಡಿ ಅಲ್ಲಿದ್ದ ಡಿಸಿ ಚಾರುಲತಾ ಸೋಮಲ್ (Charulatha somul) ಅವರನ್ನು ಹೊಸ ಡಿಸಿಯಾಗಿ ರಾಯಚೂರಿಗೆ (Raichur) ವರ್ಗಾವಣೆ ಮಾಡಲಾಗಿತ್ತು. ಮೂರೇ ತಿಂಗಳಲ್ಲಿ ಡಿಸಿಯನ್ನು ಬದಲಿಸಿದ್ದಕ್ಕೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವರ್ಗಾವಣೆ ಆದೇಶ ಹೊರಬಿದ್ದು ವಾರ ಕಳೆದರೂ ಹೊಸ ಡಿಸಿ ಚಾರುಲತಾ ಸೋಮಲ್ ಅಧಿಕಾರ ಸ್ವೀಕರಿಸಿಲ್ಲ. ಬಲ್ಲ ಮೂಲಗಳ ಪ್ರಕಾರ ಅವರಿಗೆ ರಾಯಚೂರು ಜಿಲ್ಲೆಗೆ ಬರಲು ಆಸಕ್ತಿಯೇ ಇಲ್ಲವೆಂದು ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ಅವರು ಆರ್‌ಡಿಪಿಆರ್‌ಗೆ ತೆರಳಿ ವರದಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಹೆಣ್ಣು ಸಿಗುತ್ತಿಲ್ಲ- ನಮಗೆ ಮದುವೆ ಮಾಡಿಸಿ : ಡಿಸಿಗೆ ಪತ್ರ ಬರೆದ 7 ಯುವಕರು
ಮೂರು ತಿಂಗಳ ಕಾಲ ಉತ್ತಮ ಕೆಲಸ ಮಾಡಿದ್ದ ಡಿಸಿ ಡಾ.ಸತೀಶ ವರ್ಗಾವಣೆ ಆದೇಶದ ಬಳಿಕವೂ ಒಂದು ವಾರ ಕೆಲಸ ಮಾಡಿದರು, ಗ್ರಾಮ ವಾಸ್ತವ್ಯಸ ನಡೆಸಿದರು. ಆದರೆ ಏಕಾಏಕಿ ಕಳೆದ ಶನಿವಾರ ರಾತ್ರಿ ಜಿಲ್ಲೆಯಿಂದ ಹೊರಟು ಸೋಮವಾರ ಕೊಡಗು ಡಿಸಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಅಲ್ಲಿನ ಡಿಸಿ ಸೋಮಲ್ ಬಾರದ ಕಾರಣಕ್ಕೆ ಜಿಪಂ ಸಿಇಒ (CEO) ಶೇಖ್ ತನ್ವೀರ್ ಆಸೀಫ್ (Shaikh Tanveer Asif) ಅವರಿಗೆ ಡಿಸಿ ಪ್ರಭಾರಿಯ ಹೊಣೆ ನೀಡಲಾಗಿದೆ.
ಇದೇ ಮೊದಲಲ್ಲ:
ಡಿಸಿ, ಇತರೆ ಇಲಾಖೆಗಳ ಅಧಿಕಾರಿಗಳು ಜಿಲ್ಲೆಗೆ ಬರುವುದಕ್ಕೆ ಹಿಂದೇಟು ಹಾಕುವ ಪದ್ಧತಿ ಇದೇ ಮೊದಲೇನಲ್ಲ. ಕಳೆದ ವರ್ಷ ಡಿಸಿ ಶರtf (Sharath) ಅವರನ್ನು ಏಕಾಏಕಿ ಬದಲಿಸಿ ಕಲಬುರಗಿಗೆ (Kalaburagi) ವರ್ಗಾಹಿಸಿ ಅಲ್ಲಿಯ ಡಿಸಿ ವೆಂಕಟೇಶ ಕುಮಾರ (Venkatesh Kumar) ಅವರನ್ನು ರಾಯಚೂರಿಗೆ ನೇಮಿಸಿದ್ದ ಸರ್ಕಾರವು ಎರಡು ವರ್ಷ ಮುಗಿಯುವುದರೊಳಗೆ ಐಎಎಸ್ (IAS) ಅಧಿಕಾರಿ ವೆಂಕಟರಾಜು (Venkataraju) ಅವರನ್ನು ರಾಯಚೂರು ಡಿಸಿಯಾಗಿ ವರ್ಗಾವಣೆಗೊಳಿಸಿತ್ತು. ಆದರೆ ಅವರು ಜಿಲ್ಲೆಯ ದುಸ್ಥಿತಿಯನ್ನು ಕಂಡು ಇಲ್ಲಿಗೇ ಬರಲೇ ಇಲ್ಲ. ಇದೀಗ ಡಿಸಿ ಸತೀಶ ವರ್ಗಾವಣೆಗೊಂಡು ಆ ಜಾಗಕ್ಕೆ ಚಾರುಲತಾ ಸೋಮಲ್ ಅವರನ್ನು ನಿಯುಕ್ತಿಗೊಳಿಸಿದ್ದರೂ ಜಿಲ್ಲೆಯಲ್ಲಿರುವಂತಹ ಅಸಹಕಾರ, ಕಾಣದಕೈಗಳ ಚೆಲ್ಲಾಟವನ್ನು ಅರಿತ ಅವರು ಸಹ ರಾಯಚೂರು ಜಿಲ್ಲೆಯಲ್ಲಿ ಕೆಲಸ ಮಾಡಲು ಒಲವು ತೋರಿಸಿಲ್ಲ ಎಂದು ಹೇಳಲಾಗುತ್ತಿದೆ.