Asianet Suvarna News Asianet Suvarna News

Anti Conversion Bill: ಮತಾಂತರ ನಿಷೇಧ, ಭಯಪಡುವ ಅಗತ್ಯವಿಲ್ಲ: ಸತೀಶ ಜಾರಕಿಹೊಳಿ

*  ನಾವು ಎಂದಿಗೂ ಕನ್ನಡದ ಪರವಾಗಿಯೇ ಇದ್ದೇವೆ
*  ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮಕೈಗೊಳ್ಳಬೇಕು
*  ಕಾಂಗ್ರೆಸ್ ಪರ ಸತೀಶ ಮತಯಾಚನೆ
 

No Need to Fear about Anti Conversion Bill in Karnataka Says Satish Jarkiholi grg
Author
Bengaluru, First Published Dec 25, 2021, 11:15 AM IST
  • Facebook
  • Twitter
  • Whatsapp

ಅಥಣಿ(ಡಿ.25):  ಬಿಜೆಪಿ ಸರ್ಕಾರ(BJP Government) ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆ ಮತಾಂತರ ನಿಷೇಧ ಕಾನೂನು ಜಾರಿಗೆ ತಂದಿದೆ. ಇದರಿಂದ ಜನರು ಭಯಪಡುವ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ(Satish Jarkiholi) ಹೇಳಿದರು.

ಅಥಣಿ ಪುರಸಭೆ ಚುನಾವಣೆ ಅಂಗವಾಗಿ ಶುಕ್ರವಾರ ಕಾಂಗ್ರೆಸ್(Congress) ಅಭ್ಯರ್ಥಿಗಳ ಪರವಾಗಿ ಆಯೋಜಿಸಿದ್ದ ಪ್ರಚಾರಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿ, ಮತಾಂತರ ನಿಷೇಧ ಕಾಯ್ದೆಯನ್ನು(Anti Conversion Bill) ಅಲ್ಪಸಂಖ್ಯಾತರನ್ನು(Minorities) ಮಾತ್ರ ಗುರಿಯಾಗಿ ಇಟ್ಟುಕೊಂಡು ಜಾರಿಗೆ ತರಲಾಗಿದೆ ಎಂಬುದು ನನ್ನ ಅನಿಸಿಕೆ. ಆದರೆ, ಇದು ಒಂದು ಸಮಾಜಕ್ಕೆ ಸೀಮಿತವಾದ ಕಾನೂನು ಆಗಿಲ್ಲ. ಇದು ಎಲ್ಲ ಸಮಾಜದವರಿಗೂ ಅನ್ವಯ ಆಗುತ್ತದೆ ಎಂದು ಹೇಳಿದರು. 

Anti Conversion Bill: ಓದದೇ ಸಹಿ ಹಾಕಿದೆ ಎನ್ನುವ ಸಿದ್ದು ಹೆಬ್ಬೆಟ್ಟಿನವರಾ?: ಸಿ.ಟಿ.ರವಿ ಪ್ರಶ್ನೆ

ನೆರೆಯ ಮಹಾರಾಷ್ಟ್ರದಲ್ಲಿ(Maharashtra) ಕನ್ನಡ ಬಾವುಟಕ್ಕೆ(Kannada Flag) ಅವಮಾನ ಮಾಡುತ್ತಿರುವ ದುಷ್ಕೃತ್ಯಕ್ಕೆ ನಾವೇನೂ ಮಾಡಲು ಸಾಧ್ಯವಿಲ್ಲ. ನಮ್ಮ ರಾಜ್ಯದಲ್ಲಿ(Karnataka) ನಡೆದ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕಾನೂನು ಕ್ರಮ ಕೈಗೊಂಡಿದೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ದಹಿಸಿದವರ ವಿರುದ್ಧ ಅಲ್ಲಿನ ಸರ್ಕಾರ ಕ್ರಮ ಕೈಗೊಳ್ಳಬೇಕು. ನಾವು ಎಂದಿಗೂ ಕನ್ನಡದ(Kannada) ಪರವಾಗಿಯೇ ಇದ್ದೇವೆ. ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಹಂಚಿಕೆ ಕುರಿತು ಇರುವ ಅಸಮಾಧಾನವನ್ನು ಸರಿಪಡಿಸುತ್ತೇವೆ. ಮುಂದಿನ ದಿನಗಳಲ್ಲಿ ಟಿಕೆಟ್‌ ವಂಚಿತರಿಗೆ ಯೋಗ್ಯ ಸ್ಥಾನ-ಮಾನಗಳನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು. ಇದಕ್ಕೂ ಮುನ್ನ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ(Central Government), ರಾಜ್ಯ ಸರ್ಕಾರಗಳೆರಡೂ ಬಡವರ ಪರವಾದ ಕಾನೂನುಗಳನ್ನು ಜಾರಿಗೊಳಿಸುತ್ತಿಲ್ಲ. ಕಾಂಗ್ರೆಸ್ ಜನ ಸಾಮಾನ್ಯರ ಪರವಾಗಿ ಕಾಳಜಿ ಹೊಂದಿರುವ ಪಕ್ಷವಾಗಿದೆ. ಈ ಬಾರಿ ಅಥಣಿ ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ(Lakshmi Hebbalkar) ಮಾತನಾಡಿ, ಅಥಣಿ ಶಾಸಕ ಮಹೇಶ ಕುಮಠಳ್ಳಿ(Mahesh Kumatalli) ಅವರನ್ನು ಮಂತ್ರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಬಿಜೆಪಿ ಸರ್ಕಾರ ಈಗ ಅವರನ್ನು ಮುಳ್ಳಿನ ಹಾಸಿಗೆಯ ಮೇಲೆ ಕೂರಿಸಿದೆ ಎಂದು ಲೇವಡಿ ಮಾಡಿದರು. ಚನ್ನರಾಜ ಹಟ್ಟಿಹೊಳಿ ಅವರು ವಿಧಾನ ಪರಿಷತ್ತ ಚುನಾವಣೆಗೆ ಆಯ್ಕೆ ಆಗಿರುವುದು ರಾಜ್ಯದ ಜನರು ಕಾಂಗೆಸ್ ಪರ ಇದ್ದಾರೆ ಎಂಬುದನ್ನು ಸೂಚಿಸಿದೆ ಎಂದು ಹೇಳಿದರು.
ಮಾಜಿ ಸಚಿವ ವೀರಕುಮಾರ ಪಾಟೀಲ, ಗಜಾನನ ಮಂಗಸೂಳಿ, ಎಸ್.ಕೆ.ಬುಟಾಳೆ, ಸುರೇಶ ಪಾಟೀಲ (ಶೇಗಣುಸಿ), ಬಸವರಾಜ ಬುಟಾಳೆ ಉಪಸ್ಥಿತರಿದ್ದರು. 

ಕಾಂಗ್ರೆಸ್ ಪರ ಸತೀಶ ಮತಯಾಚನೆ

ಮುನವಳ್ಳಿ(Munavalli):  ಪಟ್ಟಣದ ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಡಿ.24ರಂದು ಪಟ್ಟಣದ ಗಾಂಧಿ ನಗರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಸಭೆ ನಡೆಸಿದರು.

ಅಧಿವೇಶನ ಮುಕ್ತಾಯ, ವಿಧಾನ ಪರಿಷತ್ತಿನಲ್ಲಿ ಮಂಡನೆಯಾಗದ ಮತಾಂತರ ಮಸೂದೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಅದರದ್ದೇ ಆದ ಇತಿಹಾಸ ಇದೆ. ಸ್ವಾತಂತ್ರ್ಯ(Freedom) ಬಂದಾಗಿನಿಂದಲೂ ದೇಶ ಕಟ್ಟಿ ಬೆಳೆಸುವಲ್ಲಿ ಕಾಂಗ್ರೆಸ್ ಶ್ರಮಿಸಿದೆ. ಆದರೆ, ಈಗ ಬಂದಿರುವ ಬಿಜೆಪಿ ಸುಳ್ಳಿನ ಕಂತೆ ಕಟ್ಟಿ ದೇಶವನ್ನು ಪಾತಾಳಕ್ಕೆ ತಳ್ಳುವ ಕಾರ್ಯ ಮಾಡುತ್ತಿದೆ. ಆದ್ದರಿಂದ ಜನರು ಜಾಗೃತರಾಗಿ ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸಬೇಕು. ಎಲ್ಲರನ್ನೂ ಒಗ್ಗೂಡಿಸಿಕೊಂಡು ದೇಶ ಕಟ್ಟುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಇದೆ ಎಂದರು.

ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ದೇಶದಲ್ಲಿ ಬೆಲೆ ಏರಿಕೆಯಿಂದ ಬಡವರ ಹಾಗೂ ಜನಸಾಮಾನ್ಯರ ಬದುಕು ಅತಂತ್ರವಾಗಿದೆ. ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಹೀಗಾಗಿ, ಎಲ್ಲ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ತಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಬೇಕು ಎಂದು ಮತಯಾಚನೆ ಮಾಡಿದರು. ಕಾಂಗ್ರೆಸ್ ಮುಖಂಡರಾದ ಪಂಚನಗೌಡ ದ್ಯಾಮನಗೌಡರ, ವಿಶ್ವಾಸ ವೈದ್ಯ, ರವೀಂದ್ರ ಯಲಿಗಾರ ಹಾಗೂ ಉಮೇಶ ಬಾಳಿ, ಸೌರಭ ಚೋಪ್ರಾ ಮಾತನಾಡಿದರು. 

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಕಗಟ್ಟಿ, ಮುಖಂಡರಾದ ಪಂಚಪ್ಪ ಮಲ್ಲಾಡ, ಮಾಜಿ ಶಾಸಕ ಆರ್.ವಿ.ಪಾಟೀಲ, ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಡಿ.ಡಿ.ಟೋಪೋಜಿ, ಮಲ್ಲು ಜಕಾತಿ, ಫಕೀರಪ್ಪ ಹದ್ದನ್ನವರ, ಅಂಬರೀಷ ಯಲಿಗಾರ, ಗೌತಮ ದ್ಯಾಮನಗೌಡರ, ಯಶವಂತ ಯಲಿಗಾರ, ಡಾ.ಬಸೀರ್ ಭೈರಕದಾರ, ಸಿ.ಬಿ.ಬಾಳಿ, ಕಾಂಗ್ರೆಸ್ ಅಭ್ಯರ್ಥಿಗಳು, ಕಾರ್ಯಕರ್ತರು ಇದ್ದರು.
 

Follow Us:
Download App:
  • android
  • ios