ಬೆಳಗಾವಿ(ಸೆ.01): ಶಾಸಕ ಉಮೇಶ ಕತ್ತಿ ಅವರನ್ನು ಸಾಕಷ್ಟುಬಾರಿ ಭೇಟಿಯಾಗಿದ್ದೇವೆ. ಆಗಾಗ ಭೇಟಿ​ಯಾ​ಗು​ತ್ತೇವೆ, ಮಾತನಾಡುತ್ತೇವೆ. ಸಚಿವ ಸ್ಥಾನ ಸಿಕ್ಕಿಲ್ಲ. ಜಮೀನು ನೋಡಿಕೊಂಡು ಹೋಗುತ್ತೇನೆಂದು ಕತ್ತಿ ಅವರು ನನ್ನ ಮುಂದೆ ಹೇಳಿದ್ದಾರೆ ಎಂದರು.

ಅನರ್ಹ ಶಾಸಕ ರಮೇಶ ಜಾರಕಿಹೊಳಿ ದೆಹಲಿ ವಾಸ್ತವ್ಯ ವಿಚಾರದ ಪ್ರಶ್ನೆಗೆ ಉತ್ತರಿಸಿದ ಶಾಸಕ ಸತೀಶ, ರಮೇಶ ಯಾವಾಗ ಬಿಜೆಪಿಗೂ ಯೂಟರ್ನ್‌ ಹೊಡೆಯುತ್ತಾರೆ ಹೇಳುವುದಕ್ಕೆ ಬರುವುದಿಲ್ಲ. ರಮೇಶಗೆ ಜನರ ಬಗ್ಗೆ ಕಾಳಜಿ ಮೊದಲಿನಿಂದಲೂ ಕಡಿಮೆ ಇದೆ. ಪ್ರತಿ ಬಾರಿ ಚುನಾವಣೆ ರಾಜಕೀಯ ಮಾಡುತ್ತಾರೆ. ಜನ ಸಂಕಷ್ಟದಲ್ಲಿದ್ದಾರೆ ಜನರ ಮಧ್ಯ ಬರಬೇಕು. ತಿಂಗಳುಗಟ್ಟಲೇ ದೆಹಲಿಯಲ್ಲಿ ಕುಳಿ​ತಿ​ದ್ದಾರೆ ಎಂದ ಅವರು, ನಾನು ಚುನಾವಣೆ ಗಮನದಲ್ಲಿಟ್ಟು ಜನರಿಗೆ ಸಹಾಯ ಮಾಡುತ್ತಿಲ್ಲ ಎಂದರು.

'ಸರ್ಕಾರ ಒಂದೇ ತಿಂಗಳು ಎಂದು BJPಯವರೇ ಹೇಳ್ತಿದ್ದಾರೆ'

ಹಸ್ತ​ಕ್ಷೇಪ ಊಹಾ​ಪೋ​ಹ:

ಗೋಕಾಕಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಸಂದರ್ಭದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಬಂದಿದ್ದರು. ಅವ​ರಷ್ಟೇ ಅಲ್ಲದೆ ಅನೇಕ ನಾಯಕರೂ ಬಂದಿ​ದ್ದರು. ಗೋಕಾಕ ಕ್ಷೇತ್ರ​ದ​ಲ್ಲಿ ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಇಲ್ಲ. ಸಂತ್ರಸ್ತರ ನೆರವಿಗೆ ಯಾರು ಎಲ್ಲಿ ಬೇಕಾದರೂ ಸಹಾಯ ಮಾಡಬಹುದು. ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಗೋಕಾಕ ಕ್ಷೇತ್ರ​ದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವುದು ಕೇವಲ ಊಹಾಪೋಹ ಎಂದರು.

'ರಮೇಶ ಜಾರಕಿಹೊಳಿ ಯಾವಾಗ ಯೂಟರ್ನ್ ಹೊಡೆಯುತ್ತಾರೆ ಹೇಳೊಕೆ ಬರಲ್ಲ'