ಬೆಳಗಾವಿ, [ಆ.31]:  ಅನರ್ಹ ಶಾಸಕ ರಮೇಶ ಜಾರಕಿಹೊಳಿ ದೆಹಲಿ ವಾಸ್ತವ್ಯ ವಿಚಾರವಾಗಿ ಪ್ರತಿಕ್ರಯಿಸಿದ ಸತೀಶ್ ಜಾರಕಿಹೊಳಿ, ರಮೇಶ ಯಾವಾಗ ಯೂಟರ್ನ್ ಹೊಡೆಯುತ್ತಾರೆ ಹೇಳೊಕೆ ಬರಲ್ಲ. ರಮೇಶಗೆ ಜನರ ಬಗ್ಗೆ ಕಾಳಜಿ ಮೊದಲಿನಿಂದಲೂ ಕಡಿಮೆ ಇದೆ ಎಂದು ಹೇಳಿದರು.

ಪ್ರತಿ ಭಾರೀ ಚುನಾವಣೆ ಬಂದಾಗ ರಾಜಕೀಯ ಮಾಡುತ್ತಾರೆ. ಜನ ಸಂಕಷ್ಟದಲ್ಲಿ ಇದ್ದಾರೆ ಜನರ ಮಧ್ಯೆ ಬರಬೇಕು. ತಿಂಗಳುಗಟ್ಟಲೇ ದೆಹಲಿಯಲ್ಲಿ ಕುಳಿದ್ದಾರೆ ಎಂದು ಸಮಾಧಾನ ವ್ಯಕ್ತಪಡಿಸಿದರು.

ಇನ್ನು ಶಾಸಕ ಉಮೇಶ ಕತ್ತಿಗೆ ಸಚಿವ ಸ್ಥಾನ ಕೈತಪ್ಪಿದ ಬಗ್ಗೆ ಮಾತನಾಡಿರುವ ರಮೇಶ್ ಜಾರಕಿಹೊಳಿ, ಉಮೇಶ ಕತ್ತಿ ಅವರನ್ನು ಸಾಕಷ್ಟ ಭಾರಿ ಭೇಟಿಯಾಗಿದ್ದೇವೆ.  ಆಗಾಗ ಸಿಕ್ತಾನೆ ಇರ್ತಿವಿ ಜತೆಗೆ ಮಾತನಾಡುತ್ತಲೇ ಇರುತ್ತೇವೆ. ಸಚಿವ ಸ್ಥಾನ ಸಿಕ್ಕಿಲ್ಲ ಜಮೀನು ನೋಡಿಕೊಂಡು ಹೋಗುತ್ತೆನೆ ಎಂದಿದ್ದಾರೆ ಎಂದು ನನ್ನ ಮುಂದೆ ಕತ್ತಿ ಹೀಗೆ ಹೇಳಿದ್ದಾರೆ ಎಂದು ಹೇಳಿದರು.