Asianet Suvarna News Asianet Suvarna News

Bengaluru: ಭಾನುವಾರ ಮೆಟ್ರೋ ಸಂಚಾರ ಎರಡು ಗಂಟೆಗಳ ಕಾಲ ಸ್ಥಗಿತ

ಬೆಂಗಳೂರಿನಲ್ಲಿ ಟ್ರಾಫಿಕ್‌ ಮುಕ್ತ ಸೇವೆ ನೀಡುತ್ತಿರುವ ಮೆಟ್ರೋ ರೈಲು ಸಂಚಾರದಲ್ಲಿ ಜು.2ರ ಭಾನುವಾರ ಬೆಳಗ್ಗೆ 2 ಗಂಟೆಗಳ ಕಾಲ ಸಂಚಾರ ಸ್ಥಗಿತವಾಗಲಿದೆ.

No metro between baiyappanahalli and MG Road on Purple Line sunday sat
Author
First Published Jun 30, 2023, 3:12 PM IST

ಬೆಂಗಳೂರು (ಜೂ.30): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್‌ ಮುಕ್ತ ಸೇವೆ ನೀಡುತ್ತಿರುವ ಮೆಟ್ರೋ ರೈಲು ಸಂಚಾರದಲ್ಲಿ ಜು.2ರಂದು ಬೆಳಗ್ಗೆ 2 ಗಂಟೆಗಳ ಕಾಲ ಸಂಚಾರ ಸ್ಥಗಿತವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೇಲ್‌ ಕಾರ್ಪೋರೇಷನ್‌ ಲಿ. (ಬಿಎಂಆರ್‌ಸಿಎಲ್‌) ತಿಳಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್‌ ಸಂಸ್ಥೆಯು, ಜುಲೈ 2 ರಂದು ನೇರಳೆ ಮಾರ್ಗದಲ್ಲಿ 2 ಗಂಟೆಗಳ ಕಾಲ ಮೆಟ್ರೋ ಸೇವೆ ಸ್ಥಗಿತವಾಗಲಿದೆ ಎಂದು ಹೇಳಿದೆ. ನೇರಳೆ ಮಾರ್ಗದ ಟ್ರಿನಿಟಿ ಮತ್ತು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ನಿರ್ವಹಣೆ ಕಾಮಗಾರಿ ಹಿನ್ನಲೆಯಲ್ಲಿ ಎಂ.ಜಿ. ರಸ್ತೆ ಮೆಟ್ರೋ ನಿಲ್ಯಾಣದಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಸಂಚಾರ ಸ್ಥಗಿತವಾಗಲಿದೆ. ವಾಣಿಜ್ಯ ಸೇವೆಯನ್ನು ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ (ಎರಡು ಗಂಟೆಗಳ ಅವಧಿಗೆ) ತಾತ್ಕಾಲಿಕ ಸ್ಥಗಿತ ಮಾಡಲಾಗುತ್ತದೆ ಎಂದು ತಿಳಿಸಿದೆ.

Namma metro: ವರ್ಷಾಂತ್ಯಕ್ಕೆ ಯೆಲ್ಲೋ ಮೆಟ್ರೋ ಶುರು?

ಉಳಿದ ಮಾರ್ಗದಲ್ಲಿ ಸಾಮಾನ್ಯ ಸೇವೆ: ಉಳಿದಂತೆ ಕೆಂಗೇರಿ ಮತ್ತು ಎಂ.ಜಿ ರಸ್ತೆ, ನಾಗಸಂದ್ರ ಮತ್ತು ರೇಷ್ಮೆ, ಸಂಸ್ಥೆ, ಕೃಷ್ಣರಾಜಪುರ  ವೈಟ್ ಫೀಲ್ಡ್ (ಕಾಡುಗೋಡಿ) ವಿಭಾಗಗಳ ರೈಲುಗಳ ಸೇವೆಯು ಆಯಾ ಟರ್ಮಿನಲ್ ನಿಲ್ದಾಣಗಳಲ್ಲಿ ಬೆಳಿಗ್ಗೆ 7 ಗಂಟೆಗೆ ವೇಳಾಪಟ್ಟಿಯ ಪ್ರಕಾರ ಸಂಚರಿಸಲಿದೆ. ಉಳಿದಂತೆ ಬೇರೆ ಯಾವುದೇ ಮಾರ್ಗಗಳಲ್ಲಿ ಸಂಚಾರದಲ್ಲಿ ಸಮಸ್ಯೆ ಅಡಚಣೆ ಉಂಟಾಗುವುದಿಲ್ಲ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವರ್ಷಾಂತ್ಯಕ್ಕೆ ಹಳದಿ ಮಾರ್ಗ ಸಂಚಾರ ಆರಂಭ: ಬೆಂಗಳೂರು (ಜೂ.30) : ವರ್ಷಾಂತ್ಯಕ್ಕೆ ‘ನಮ್ಮ ಮೆಟ್ರೋ’ದ ಹಳದಿ ಮಾರ್ಗ ಸೇರಿದಂತೆ ವಿಸ್ತರಿತ ಮಾರ್ಗಗಳು ಜನ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆಯಿದ್ದು, ದಿನವೊಂದಕ್ಕೆ 8 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಮೆಟ್ರೋ ರೈಲುಗಳಲ್ಲಿ ಸಂಚರಿಸುವ ಸಾಧ್ಯತೆಯಿದೆ. ಪ್ರಸ್ತುತ ಬೆಂಗಳೂರು ಮೆಟ್ರೋ ರೈಲ್ವೇ ನಿಗಮವು 69.66 ಕಿ.ಮೀ. ಉದ್ದಕ್ಕೆ ತನ್ನ ಸೇವೆಯನ್ನು ಕಲ್ಪಿಸುತ್ತಿದೆ. ವರ್ಷಾಂತ್ಯದ ವೇಳೆಗೆ ಸುಮಾರು 30 ಕಿ.ಮೀ ಮಾರ್ಗವನ್ನು ಸೇರ್ಪಡೆ ಮಾಡಲು ಬಿಎಂಆರ್‌ಸಿಎಲ್‌ ಭರದಿಂದ ಕಾಮಗಾರಿ ನಡೆಸುತ್ತಿದೆ. ಆರ್‌.ವಿ.ರಸ್ತೆ-ಬೊಮ್ಮಾಪುರ ನಡುವಿನ ಹೊಸದಾದ ಹಳದಿ ಮಾರ್ಗ ಡಿಸೆಂಬರ್‌ಗೆ ಹಾಗೂ ಈಗಿನ ನೇರಳೆ ಮತ್ತು ಹಸಿರು ಮಾರ್ಗದ ವಿಸ್ತರಿತ ಮೆಟ್ರೋ ಸೆಪ್ಟೆಂಬರ್‌ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.

Bengaluru: ಮೆಟ್ರೋದೊಳಗೆ ಲೌಡ್‌ ಸ್ಪೀಕರ್‌ ಸಂಗೀತ ನಿಷೇಧ: ಬಿಎಂಆರ್‌ಸಿಎಲ್‌ ಸೂಚನೆ

2 ಕೋಟಿ ದಾಟುವ ಪ್ರಯಾಣಿಕರ ಸಂಖ್ಯೆ: ಒಟ್ಟಾರೆ ವಿಸ್ತರಿತ ಮಾರ್ಗದಿಂದ ನೇರಳೆ (43.5 ಕಿ.ಮೀ.) ಹಾಗೂ ಹಸಿರು ಮಾರ್ಗದ (30.5 ಕಿ.ಮೀ.) ಸ್ಟೆ್ರಚ್‌ ಪೂರ್ಣಗೊಂಡಂತಾಗಲಿದೆ. ಈ ಮಾರ್ಗಗಳ ಸೇರ್ಪಡೆಯಿಂದ ಪ್ರತಿದಿನ 8 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಲಿದ್ದಾರೆ. ಅದೇ ರೀತಿ ಡಿಸೆಂಬರ್‌ ವೇಳೆಗೆ ತಿಂಗಳಿಗೆ ಪ್ರಯಾಣಿಕರ ಸಂಖ್ಯೆ 2 ಕೋಟಿ ದಾಟುವ ಸಾಧ್ಯತೆಯಿದೆ ಎಂದು ಬಿಎಂಆರ್‌ಸಿಎಲ್‌ ಹೇಳಿದೆ. ಈಗಾಗಲೇ ಮೆಟ್ರೋದಲ್ಲಿ ಪ್ರತಿದಿನ ಸರಾಸರಿ 5.70 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಹೆಚ್ಚುವರಿ 7 ಲಕ್ಷ ಪ್ರಯಾಣಿಕರು ಮೆಟ್ರೋದತ್ತ ಮುಖ ಮಾಡುತ್ತಿದ್ದಾರೆ. ಫೆಬ್ರವರಿಯಲ್ಲಿ 1.46 ಕೋಟಿ, ಮಾಚ್‌ರ್‍ 1.60 ಕೋಟಿ ಹಾಗೂ ಏಪ್ರಿಲ್‌ನಲ್ಲಿ 1.71 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ. ಮೇ ತಿಂಗಳಲ್ಲಿ 1.74 ಪ್ರಯಾಣಿಕರು ಸಂಚರಿಸಿದ್ದು, .43.45 ಕೋಟಿ ಆದಾಯ ಬಂದಿದೆ. ಕಳೆದ ಮೇ 20ರಂದು ಒಂದೇ ದಿನ 7.3 ಲಕ್ಷ ಜನರು ಪ್ರಯಾಣಿಸಿದ್ದು, ಈವರೆಗಿನ ಗರಿಷ್ಠ ಎನ್ನಿಸಿದೆ.

Latest Videos
Follow Us:
Download App:
  • android
  • ios