Asianet Suvarna News Asianet Suvarna News

ಬೆಂಗಳೂರಿನ ತಿರುಪತಿ ತಿಮ್ಮಪ್ಪನಿಗಿಲ್ಲ ಲಾಕ್ ಡೌನ್ ಎಫೆಕ್ಟ್, 5 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ

ಬೆಂಗಳೂರಿನ ತಿರುಪತಿ ತಿಮ್ಮಪ್ಪನಿಗೆ ಲಾಕ್ ಡೌನ್ ಎಫೆಕ್ಟ್ ಆಗಿಲ್ಲ. ಎಂದಿನಂತೆ ಭಕಾದಿಗಳು ಆಗಮಿಸುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತು ದರ್ಶನಕ್ಕಾಗಿ ಕಾಯುತ್ತಿರುವ ಭಕ್ತರು ಮಧ್ಯಾಹ್ನ 12 ಗಂಟೆಯಾದ್ರು ದೇವರ ದರ್ಶನಕ್ಕೆ ಕಾಯುತ್ತಿದ್ದಾರೆ.

No lockdown effect to bengaluru thirupathi temple
Author
Bangalore, First Published Jun 13, 2020, 2:52 PM IST

ಬೆಂಗಳೂರು(ಜೂ.13): ಬೆಂಗಳೂರಿನ ತಿರುಪತಿ ತಿಮ್ಮಪ್ಪನಿಗೆ ಲಾಕ್ ಡೌನ್ ಎಫೆಕ್ಟ್ ಆಗಿಲ್ಲ. ಎಂದಿನಂತೆ ಭಕಾದಿಗಳು ಆಗಮಿಸುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತು ದರ್ಶನಕ್ಕಾಗಿ ಕಾಯುತ್ತಿರುವ ಭಕ್ತರು ಮಧ್ಯಾಹ್ನ 12 ಗಂಟೆಯಾದ್ರು ದೇವರ ದರ್ಶನಕ್ಕೆ ಕಾಯುತ್ತಿದ್ದಾರೆ.

ಸಾವಿರಾರು ಭಕ್ತರು ತಿಮ್ಮಪ್ಪನ ದರ್ಶನಕ್ಕಾಗಿ ಆಗಮಿಸುತ್ತಿದ್ದು, ಟಿ.ಟಿ.ಡಿ. ಸಿಬ್ಬಂದಿ ಬರುವ ಭಕ್ತರಿಗೆಲ್ಲರಿಗೂ ಸ್ಯಾನಿಟೈಸ್ ಹಾಗೂ ಟೆಂಪರೇಚರ್ ಚೆಕ್ ಮಾಡುತ್ತಿದ್ದಾರೆ. ಈ ಸಂಬಂಧ ಟಿಟಿಡಿ ಕಾರ್ಯದರ್ಶಿ ಕೆಟಿ ರಾಮರಾಜು ಮಾತನಾಡಿದ್ದು, ಬೆಳಗ್ಗೆ ಇಂದ ಇದುವರೆಗೂ 5 ಸಾವಿರ ಭಕ್ತರು ಭೇಟಿ ಕೊಟ್ಟಿದ್ದಾರೆ. ಇನ್ನೂ ಸಂಜೆ 5 ಗಂಟೆ ವರೆಗೂ ದರ್ಶನಕ್ಕೆ ಅವಕಾಶ ಇದೆ. ಇನ್ನೂ‌ ಭಕ್ತರು ಬರುತ್ತಿರೋದ್ರಿಂದ 10 ಸಾವಿರ ಭಕ್ತರು ಬರುವ ನಿರೀಕ್ಷೆ ಇದೆ ಎಂದಿದ್ದಾರೆ.

ಕಾಶ್ಮೀರಿ ಪಂಡಿತರ ಕೈಯಲ್ಲಿನ್ನು ಗನ್..? ಜಮ್ಮು ಮಾಜಿ ಡಿಜಿಪಿ ಹೇಳಿದ್ದಿಷ್ಟು..!

ಬರುವ ಭಕ್ತರಿಗೆಲ್ಲರಿಗೂ ಸ್ಯಾನಿಟೈಜೇಷನ್ ಹಾಗೂ ಸಾಮಾಜಿಕ ಅಂತರ ಬಗ್ಗೆ ಮನವರಿಕೆ ಮಾಡಲಾಗುತ್ತಿದೆ. ಟೆಂಪರೇಚರ್ ಚೆಕ್ ಮಾಡಿಯೇ ದೇವಸ್ಥಾನದ ಒಳಗೆ ಪ್ರವೇಶಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಟಿಟಿಡಿ ಸಿಬ್ಬಂದಿಗೆ ಸೋಂಕು ಹಿನ್ನೆಲೆ: ತಿಮ್ಮಪ್ಪನ ದರ್ಶನ 2 ದಿನ ಮುಂದೂಡಿಕೆ

ಪ್ರಸಿದ್ದ  ದೇವಾಲಯಗಳಿಗೂ ಕೊರೋನಾ ಎಫೆಕ್ಟ್ ತಟ್ಟಿದೆ. ಲಾಕ್ ಡೌನ್ ಸಡಲಿಕೆ ಬಳಿಕ ದೇವಾಲಯದ ಬಾಗಿಲು ತೆರೆದರೂ ಭಕ್ತರು ಬರುತ್ತಿಲ್ಲ. ಪ್ರತಿ ಶನಿವಾರ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದ ಭಕ್ತರು ಸದ್ಯ ಕೇವಲ ಬೆರಳೆಣಿಕೆ ಭಕ್ತರು ಮಾತ್ರ ಆಗಮಿಸುತ್ತಿದ್ದಾರೆ.

ಇಬ್ಬರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರಿಗೆ ಸೋಂಕು, ಬೆಂಗಳೂರಿನ ಮೂಲೆ-ಮೂಲೆಗೂ ಕೊರೋನಾ!

ದೇವಾಲಯಕ್ಕೆ ಬರುವ ಪ್ರತಿಯೊಬ್ಬ ಭಕ್ತರಿಗೂ ಸ್ಯಾನಿಟೈಸರ್ ಹಾಗೂ ಟೆಂಪರೇಚರ್ ಚೆಕ್ ಮಾಡಿಯೇ ಪ್ರವೇಶ ನೀಡಲಾಗುತ್ತಿದೆ. ಮಲ್ಲೇಶ್ವರಂ ನಲ್ಲಿರುವ ಕಾಡು ಮಲ್ಲೇಶ್ವರ, ಗಂಗಮ್ಮ, ಲಕ್ಮೀ ನರಸಿಂಹ ಹಾಗೂ ತಿರುಪತಿ ತಿಮ್ಮಪ್ಪ ದೇವಾಲಯಗಳಲ್ಲೂ ಭಕ್ತರ ಸಂಖ್ಯೆ ಇಳಿ ಮುಖವಾಗಿದೆ.

Follow Us:
Download App:
  • android
  • ios