ಮೂರು ತಿಂಗ್ಳಿಂದ ಸಿಗ್ತಿಲ್ಲ ಸೀಮೆಎಣ್ಣೆ; ನಾಡ ದೋಣಿ ಮೀನುಗಾರರ ಸಂಕಷ್ಟ ಕೇಳೋರಿಲ್ಲ!
ಕಳೆದ ಮೂರು ತಿಂಗಳಿಂದ ಬಿಡುಗಡೆಯಾಗಬೇಕಿದ್ದ ಮೀನುಗಾರರ ಸೀಮೆಎಣ್ನೆ ಬಿಡುಗಡೆಯಾಗದೇ ಇದ್ದಲ್ಲಿ ನವೆಂಬರ್ 7ರಂದು ಉಟುಪಿ, ಮಂಗಳೂರು ಹಾಗೂ ಕಾರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಏಕಕಾಲದಲ್ಲಿ ಮೀನುಗಾರರು ಹಕ್ಕೊತ್ತಾಯ ಆಂದೋಲನ ನಡೆಸಲು ತೀರ್ಮಾನಿಸಿದ್ದಾರೆ.
ವರದಿ-ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಅ.30) : ಕಳೆದ ಮೂರು ತಿಂಗಳಿಂದ ಬಿಡುಗಡೆಯಾಗಬೇಕಿದ್ದ ಮೀನುಗಾರರ ಸೀಮೆಎಣ್ನೆ ಬಿಡುಗಡೆಯಾಗದೇ ಇದ್ದಲ್ಲಿ ನವೆಂಬರ್ 7ರಂದು ಉಟುಪಿ, ಮಂಗಳೂರು ಹಾಗೂ ಕಾರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಏಕಕಾಲದಲ್ಲಿ ಮೀನುಗಾರರು ಹಕ್ಕೊತ್ತಾಯ ಆಂದೋಲನ ನಡೆಸಲು ತೀರ್ಮಾನಿಸಿದ್ದಾರೆ. ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ಆನಂದ ಖಾರ್ವಿ ಉಪ್ಪುಂದ ಈ ಕುರಿತು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
Uttara Kannada: ಚಂಡಮಾರುತದಿಂದ ಮೀನುಗಾರಿಕೆ ಮತ್ತೆ ಸ್ಥಗಿತ!
ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರ ಒಕ್ಕೂಟ ವತಿಯಿಂದ ನಡೆದ ಹಕ್ಕೊತ್ತಾಯದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹಲವು ಬಾರಿ ಸಂಸದ ಹಾಗೂ ಸಚಿವರ ಮೂಲಕ ಮನವಿ ಮಾಡಿಕೊಳ್ಳಲಾಗಿದೆ. ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಕಳೆದ ಮೂರು ತಿಂಗಳಿನಿಂದ ಸೀಮೆಎಣ್ಣೆ ಬಿಡುಗಡೆ ಮಾಡದೇ ಇರುವುದರಿಂದ ಮೀನುಗಾರರು ಬೀದಿಗೆ ಬರುವಂತಾಗಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದರು.
ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ(Shobha karandlaje) ,ನಳಿನ್ ಕುಮಾರ್ ಕಟೀಲ್(Naleen kumar kateel),ಬಿ.ವೈ ರಾಘವೇಂದ್ರ(B.Y.Raghavendra) ಮೀನುಗಾರರ ಸಚಿವರಾದ ಎಸ್ ಅಂಗಾರ(S.angara) ಅವರ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆದರು ಕೂಡ, ಇದುವರೆಗೂ ಸೀಮೆಎಣ್ಣೆ(Kerosene oil) ಬಿಡುಗಡೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಮೂರು ತಿಂಗಳಿನಿಂದ ಬಿಡುಗಡೆಯಾಗಬೇಕಿದ್ದ ಸೀಮೆಎಣ್ಣೆ ತಕ್ಷಣ ಬಿಡುಗಡೆ ಮಾಡಬೇಕು. 2016-17ರ ಸಾಲಿನಿಂದ ಮೀನುಗಾರರಿಗೆ ಸಿಗಬೇಕಾದ ಶೇ.50 ಸಬ್ಸಿಡಿ(Subsidy)ಯನ್ನು ತಕ್ಷಣ ಜ್ಯಾರಿಗೆ ತರಬೇಕು. ಕರಾವಳಿಯ 8130 ಪರ್ಮಿಟ್ ಗಳಿಗೆ 120 ಕೋಟಿ ರೂಪಾಯಿಯ ಬಜೆಟ್ ಮಂಡಿಸಬೇಕು ಎಂದು ಆಗ್ರಹಿಸಿದರು.
ಕಷ್ಟ-ನಷ್ಟ ವಿವರ:
ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯಲ್ಲಿ 1345, ಉಡುಪಿ(Udupi) ಜಿಲ್ಲೆಯಲ್ಲಿ 4,896 ಹಾಗೂ ಉತ್ತರ ಕನ್ನಡ(Uttara Kannada) ಜಿಲ್ಲೆಯಲ್ಲಿ 1789 ಒಟ್ಟು 8,030 ಸೀಮೆ ಎಣ್ಣೆ ಚಾಲಿತ ದೋಣಿಗಳಿವೆ. ಪ್ರತಿ ತಿಂಗಳಿಗೆ 300 ಲೀಟರ್ ನಂತೆ ವಾರ್ಷಿಕ 24,000 ಕೆ ಎಲ್ ಸೀಮೆಎಣ್ಣೆಯ ಅಗತ್ಯವಿದೆ. ಒಂದು ದೋಣಿಯಲ್ಲಿ ಕನಿಷ್ಠ ಆರರಂತೆ ಒಟ್ಟು 60,500 ನಾಡದೋಣಿ(0 ಮೀನುಗಾರರು ಇದ್ದಾರೆ.
2013 ರಿಂದ ಸರ್ಕಾರದ ಆದೇಶದಂತೆ ನಾಡದೊಣಿಗಳಿಗೆ ಮಾಸಿಕ 300 ಲೀಟರ್ ನಂತೆ ಸೀಮೆಎಣ್ಣೆ ನೀಡಲಾಗುತ್ತದೆ. ಆದರೆ ಅಂದು ಕೇವಲ 4514. ನಾಡ ದೋಣಿಗಳಿದ್ದವು. ಅದೇ ಮಾದರಿಯಲ್ಲಿ ಪ್ರಸ್ತುತ ದಿನಗಳಲ್ಲೂ ಸೀಮೆಎಣ್ಣೆ ಬಿಡುಗಡೆಯಾಗುತ್ತಿದೆ. ಆದರೆ ಈಗ ನಾಡದೋಣಿಗಳ ಸಂಖ್ಯೆ ಹೆಚ್ಚಾಗಿದೆ. ಸರಕಾರದ ಸೀಮೆಎಣ್ಣೆ ಪೂರೈಕೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಬಂದ ಸೀಮೆ ಎಣ್ಣೆ ಎಲ್ಲರೂ ಹಂಚಿಕೊಳ್ಳುತ್ತಿದ್ದಾರೆ.
ಮೀನುಗಾರರ ಕಷ್ಟ ಆಲಿಸದ ಸಿಎಂ: ಭಟ್ಕಳಕ್ಕೆ ಬಂದವರು ಶಿರೂರಿಗೆ ಬರಲಿಲ್ಲ
ನವೆಂಬರ್ ಏಳರಂದು ಮೂರು ಜಿಲ್ಲೆಗಳಲ್ಲಿ ಹೋರಾಟ ನಡೆಯಲಿದ್ದು ಕರಾವಳಿಯ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಎದುರು ಏಕಕಾಲದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕಾರ್ಯಕ್ರಮ ರೂಪಿಸಲಾಗಿದೆ. ಉಡುಪಿ ಜಿಲ್ಲೆಯೊಂದರಲ್ಲಿ ಸುಮಾರು 20 ಸಾವಿರ ಮೀನುಗಾರರು ಸೇರಲಿದ್ದು ಎಂಜಿಎಂ ಕಾಲೇಜಿನಿಂದ ಹೊರಟು ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆಯಲ್ಲಿ ಹಕ್ಕೊತ್ತಾಯ ಮೆರವಣಿಗೆ ನಡೆಯಲಿದೆ.