* ತೊರೆಕಾಡನಹಳ್ಳಿ ವ್ಯಾಪ್ತಿಯ ಕಾವೇರಿ ನೀರು ಯೋಜನೆ ಕಾಮಗಾರಿ ಹಿನ್ನೆಲೆ* ಇಂದು ತಡರಾತ್ರಿ 12.30 ಗಂಟೆಯಿಂದ ಗುರುವಾರ ರಾತ್ರಿ 11.30ರ ವರೆಗೆ * ವಿವಿಧ ತುರ್ತು ಕಾಮಗಾರಿ
ಬೆಂಗಳೂರು(ಜ.05): ಬೆಂಗಳೂರು ಜಲಮಂಡಳಿಯು(Bengaluru Water Board) ತೊರೆಕಾಡನಹಳ್ಳಿ ವ್ಯಾಪ್ತಿಯ ಕಾವೇರಿ ನೀರು(Kaveri Water) ಸರಬರಾಜು ಯೋಜನೆಯ ಒಂದು, ಎರಡನೇ ಹಂತದಲ್ಲಿ ವಿವಿಧ ತುರ್ತು ಕಾಮಗಾರಿ ಕೈಗೊಳ್ಳಲಿರುವ ಹಿನ್ನೆಲೆ ಇಂದು(ಬುಧವಾರ) ತಡರಾತ್ರಿ 12.30 ಗಂಟೆಯಿಂದ ಗುರುವಾರ ರಾತ್ರಿ 11.30ರ ವರೆಗೆ ನಗರದ ಹಲವು ಬಡಾವಣೆಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ವ್ಯತ್ಯಯದ ಪ್ರದೇಶಗಳು:
ನ್ಯೂಬಿನ್ನಿ ಲೇಔಟ್, ವಿದ್ಯಾಪೀಠ, ಗುರುರಾಜ್ ಬಡಾವಣೆ, ವಿವೇಕಾನಂದ ನಗರ, ಕತ್ರಿಗುಪ್ಪೆ, ತ್ಯಾಗರಾಜನಗರ, ಬಸವನಗುಡಿ, ಮೌಂಟ್‌ಜಾಯ್ ಎಕ್ಸ್‌ಟೆನ್ಷನ್, ಕುಮಾರಸ್ವಾಮಿ ಲೇಔಟ್, ಇಸ್ರೋ ಲೇಔಟ್, ದೊಮ್ಮಲೂರು, ಅಮರಜ್ಯೋತಿ ಬಡಾವಣೆ, ಆಡುಗೋಡಿ, ಕೋರಮಂಗಲ, ಕೆಎಚ್‌ಬಿ ಕಾಲೋನಿ, ಜಯನಗರ, ತಿಲಕ್‌ನಗರ, ಕಸ್ತೂರಬಾ ನಗರ, ಹೊಸ ಗುಡ್ಡದಹಳ್ಳಿ, ಬಾಪೂಜಿ ನಗರ, ಕಲಾಸಿಪಾಳ್ಯ, ಬಡಾಮಕಾನ್, ಸುಧಾಮ ನಗರ, ಕೆ.ಜಿ.ನಗರ, ಅಜಾದ್ ನಗರ, ಪಾದರಾಯನಪುರ, ಜೆಜೆಆರ್ ನಗರ, ರಂಗನಾಥ್ ಕಾಲೋನಿ, ಸಿದ್ಧಾಥ್‌ರ್ ನಗರ, ದೇವಗಿರಿ, ಯಡಿಯೂರು, ಕರಿಸಂದ್ರ, ಬನಗಿರಿ ನಗರ, ಕಾಮಾಕ್ಯ ಲೇಔಟ್, ಇಟ್ಟಮಡು, ಹೊಸಕೆರೆಹಳ್ಳಿ, ದ್ವಾರಕಾ ನಗರ, ಪದ್ಮನಾಭ ನಗರ, ಉತ್ತರಹಳ್ಳಿ, ಚಿಕ್ಕಲ್ಲಸಂದ್ರ, ರಾಮಾಂಜನೇಯ ನಗರ, ಪಿ.ಪಿ.ಲೇಔಟ್, ಶಾಂತಿ ನಗರ, ಭೈರಸಂದ್ರ, ಆರ್‌ಬಿಐ ಕಾಲೋನಿ, ಹೊಂಬೇಗೌಡ ನಗರ, ಸಿದ್ದಾಪುರ, ವಿಲ್ಸನ್ ಗಾರ್ಡನ್, ಲಕ್ಕಸಂದ್ರ, ಜೆ.ಪಿ.ನಗರ, ಗಾಂಧಿ ನಗರ, ವಸಂತ ನಗರ, ಹೈಗ್ರೌಂಡ್ಸ್.
Kaveri water: ಬೆಂಗ್ಳೂರಿಗರೇ ಗಮನಿಸಿ: ಇಂದು ನಗರದ ವಿವಿಧೆಡೆ ನೀರು ಪೂರೈಕೆ ವ್ಯತ್ಯಯ
ಸಂಪಂಗಿರಾಮ ನಗರ, ಟೌನ್‌ಹಾಲ್, ಲಾಲ್‌ಬಾಗ್ ರಸ್ತೆ, ಕಬ್ಬನ್ ಪೇಟೆ, ಸುಂಕಲ್‌ಪೇಟೆ, ಕುಂಬಾರಪೇಟೆ, ಕಾಟನ್ ಪೇಟೆ, ಚಿಕ್ಕಪೇಟೆ, ಭಾರತಿ ನಗರ, ಸೇಂಟ್‌ಜಾನ್ಸ್ ರಸ್ತೆ, ಇನ್‌ಫ್ಯಾಂಟ್ರಿ ರಸ್ತೆ, ಶಿವಾಜಿ ನಗರ, ಫ್ರೇಜರ್‌ಟೌನ್ ಸೇವಾ ಠಾಣೆ ವ್ಯಾಪ್ತಿಯ ಪ್ರದೇಶಗಳು, ಎಂ.ಎಂ.ರಸ್ತೆ, ಬ್ಯಾಡರಹಳ್ಳಿ, ನೇತಾಜಿ ರಸ್ತೆ, ಕೋಲ್ಸ್ ರಸ್ತೆ, ಕಾಕ್ಸ್‌ಟೌನ್, ವಿವೇಕಾನಂದ ನಗರ, ಮಾರುತಿಸೇವಾ ನಗರ. ಪಿ.ಟಿ.ಕಾಲೋನಿ, ಡಿ.ಜೆ.ಹಳ್ಳಿ, ನಾಗವಾರ, ಸಮಾಧಾನ ನಗರ, ಪಿಳ್ಳಣ್ಣ ಗಾರ್ಡನ್ 1-3ನೇ ಹಂತ, ಲಿಂಗರಾಜಪುರ, ಚಾಮರಾಜಪೇಟೆ, ಬ್ಯಾಂಕ್ ಕಾಲೋನಿ, ಗವಿಪುರಂ, ಹನುಮಂತ ನಗರ, ಗಿರಿ ನಗರ, ಬ್ಯಾಟರಾಯನಪುರ, ನೀಲಸಂದ್ರ, ಆವಲಹಳ್ಳಿ, ಶ್ರೀನಗರ, ಬನಶಂಕರಿ ಯಶವಂತಪುರ, ಮಲ್ಲೇಶ್ವರಂ, ಕುಮಾರ ಪಾರ್ಕ್, ಜಯಮಹಲ್, ಶೇಷಾದ್ರಿಪುರಂ, ಸದಾಶಿವ ನಗರ, ಪ್ಯಾಲೇಸ್ ಗುಟ್ಟಹಳ್ಳಿ, ಸಂಜಯ್ ನಗರ, ಡಾಲರ್ಸ್ ಕಾಲೋನಿ, ಗೆದ್ದಲಹಳ್ಳಿ, ಭೂಪಸಂದ್ರ, ಕಾವಲ್ ಬೈರಸಂದ್ರ, ಆರ್‌ಟಿ ನಗರ, ಆನಂದ ನಗರ, ಸುಲ್ತಾನ್‌ಪಾಳ್ಯ. ಎಂಜಿ ರಸ್ತೆ, ಎಚ್‌ಎಎಲ್ 2ನೇ ಹಂತ, ಇಂದಿರಾ ನಗರ, ಜೀವನ್‌ಭೀಮಾ ನಗರ, ಹಲಸೂರು, ಜೋಗುಪಾಳ್ಯ, ದೀನಬಂಧು ನಗರ, ಎಸ್.ಪಿ.ರಸ್ತೆ, ಎಸ್.ಜೆ.ಪಿ. ರಸ್ತೆ, ಓಟಿ ಪೇಟೆ, ಜಾಲಿಮೊಹಲ್ಲಾ, ಪಿ.ಆರ್. ರಸ್ತೆ, ಕೆ.ಜಿ.ಹಳ್ಳಿ, ಬಿಟಿಎಂ ಬಡಾವಣೆ, ಮಡಿವಾಳ, ಡೇರಿ ಸರ್ಕಲ್, ಮಾರುತಿ ನಗರ, ನೇತಾಜಿ ನಗರ, ನಿಮ್ಹಾನ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ಕೊರತೆ ಉಂಟಾಗಲಿದೆ ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.
‘ಗಂಗಾ’ ಯೋಜನೆಯಡಿಯಲ್ಲಿ ಮನೆ ಮನೆಗೆ ನಲ್ಲಿ ಸಂಪರ್ಕ: ಈಶ್ವರಪ್ಪ
ಬೆಳಗಾವಿ: ರಾಜ್ಯದಲ್ಲಿ (Karnataka) ‘ಮನೆ ಮನೆಗೆ ಗಂಗಾ’ ಯೋಜನೆಯಡಿ (Ganga Yojana) ಗ್ರಾಮೀಣ ಭಾಗದಲ್ಲಿ (Rural Area) ಈವರೆಗೆ 41.91 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ನಳ (Water Tap) ಸಂಪರ್ಕ ಕಲ್ಪಿಸಲಾಗಿದ್ದು, 2023-24ರ ಅಂತ್ಯದೊಳಗೆ ಒಟ್ಟು 97.91 ಲಕ್ಷ ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲು ಗುರಿ ಹೊಂದಲಾಗಿದೆ. ನಿತ್ಯ 10 ಸಾವಿರ ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ಹೇಳಿದ್ದರು.
ಡಿ. 17 ರಂದು ವಿಧಾನ ಪರಿಷತ್‌ನಲ್ಲಿ(Vidhan Parishat) ಬಿಜೆಪಿಯ (BJP) ಎನ್.ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ್ದ ಸಚಿವರು, ನಿರಂತರವಾಗಿ ಲಭ್ಯವಿರುವ ಜಲಮೂಲ ಇರುವ ಕಡೆ ಈ ಯೋಜನೆ ಜಾರಿ ಮಾಡಲಾಗುತ್ತಿದೆ. ಈ ಯೋಜನೆಯಡಿ ನಳ ಸಂಪರ್ಕ ಪಡೆಯಲು ಯಾವುದೇ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಆದರೆ ಯೋಜನೆಯ (Project) ಮಾರ್ಗಸೂಚಿಯಂತೆ ಗ್ರಾಮದೊಳಗಿನ ನಳ ಸಂಪರ್ಕ ಒದಗಿಸುವ ಅಂದಾಜು ಮೊತ್ತದ ಶೇ.10ರಷ್ಟನ್ನು (ಪ.ಜಾತಿ/ ಪಂಡಗಳಿಗೆ ಶೇ.5) ಸಮುದಾಯ ವಂತಿಕೆಯಾಗಿ ಪಡೆಯಬೇಕಾಗಿರುತ್ತದೆ ಎಂದು ವಿವರಿಸಿದ್ದರು.
