Asianet Suvarna News Asianet Suvarna News

'ಶಾಲೆ ಪುನರಾರಂಭಕ್ಕೆ ಯಾವುದೇ ರೀತಿ ಅವಸರ ಇಲ್ಲ'

ಶಾಲೆಗಳ ಆರಂಭಕ್ಕೆ ರಾಜ್ಯ ಸರ್ಕಾರ ಯಾವುದೇ ರೀತಿ ಅವಸರ ಮಾಡಬಾರದು ಎಂದು ವಿಧಾನ ಪರಿಷತ್‌ ಸದಸ್ಯ, ಮಾಜಿ ಸಚಿವ ಎಚ್‌.ವಿಶ್ವನಾಥ್‌ ಸಲಹೆ ನೀಡಿದರು.

No hurry For School Reopen Says H Vishwanath
Author
Bengaluru, First Published Aug 26, 2020, 11:42 AM IST

ಮೈಸೂರು (ಆ.26):  ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಾಗೂ ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೆ ರಾಜ್ಯ ಸರ್ಕಾರ ಅವಸರ ಮಾಡಬಾರದು ಎಂದು ವಿಧಾನ ಪರಿಷತ್‌ ಸದಸ್ಯ, ಮಾಜಿ ಸಚಿವ ಎಚ್‌.ವಿಶ್ವನಾಥ್‌ ಸಲಹೆ ನೀಡಿದರು.

ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಸಮಿತಿ ರಚನೆ ಆಗುತ್ತಿದೆ. ಹೀಗಾಗಿ ಶಾಲಾ ಕಾಲೇಜು ಆಡಳಿತ ಮಂಡಳಿಯವರನ್ನು ಶಿಕ್ಷಣ ತಜ್ಞರು ಎಂದು ಭ್ರಮಿಸಬಾರದು. ಹೆಚ್ಚು ಶಾಲಾ ಕಾಲೇಜು ನಡೆಸುವವರು ಶಿಕ್ಷಣ ತಜ್ಞರಲ್ಲ. ಶಿಕ್ಷಣ ಜ್ಞಾನ ಇಲ್ಲದವರು ಸಮಿತಿಯಲ್ಲಿದ್ದಾರೆ ಎಂದರು.

ಬಿಜೆಪಿ ಸರ್ಕಾರ ಬರಲು ನನ್ನ ಪಾತ್ರ ದೊಡ್ಡದು, ನಾನೂ ಸಚಿವ ಸ್ಥಾನದ ಆಕಾಂಕ್ಷಿ'.

ಶಿಕ್ಷಣ ನೀತಿ ಸಮರ್ಪಕವಾಗಿ ಜಾರಿಯಾಗಬೇಕಾದರೆ ಸಮುದಾಯದ ಎಲ್ಲರೂ ಸಮಿತಿಯಲ್ಲಿ ಇರಬೇಕು. ಶಿಕ್ಷಣ ಮಾರುವವರನ್ನು ಸಮಿತಿಗೆ ಕರೆಯದೆ, ಶಿಕ್ಷಣ ಕಲಿಸುವವರನ್ನು ಕರೆದು ಮಾತನಾಡಬೇಕು. ಅರ್ಥಪೂರ್ಣ ಚರ್ಚೆ ನಡೆಸಿ ನಿರ್ಧಾರ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಶಾಲೆ ಆರಂಭಕ್ಕೂ ಅವಸರ ಬೇಡ. ಶಾಲೆ ಪುನಾರಂಭಕ್ಕೆ ಪೋಷಕರಾಗಲಿ, ಮಕ್ಕಳಾಗಲಿ ಕೇಳುತ್ತಿಲ್ಲ. ಹೀಗಾಗಿ, ಆಡಳಿತ ಮಂಡಳಿಯ ಒತ್ತಡಕ್ಕೆ ಮಣಿಯಬಾರದು. ಶಾಲೆಗಳು ಹಾಗೂ ಆಸ್ಪತ್ರೆ ನಡೆಸುವವರು ನಮ್ಮ ರಾಜಕಾರಣಿಗಳೇ ಹೆಚ್ಚಾಗಿದ್ದಾರೆ. ಅವರ ಅಭಿಪ್ರಾಯ ಕೇಳಿದರೆ ಶಿಕ್ಷಣ ದುರಂತ ಕಾಣಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅರಸು ಹೆಸರಲ್ಲಿ ಹುಣಸೂರಿಗೆ ಜಿಲ್ಲೆ ಸ್ಥಾನ?..

ಮಾಸ್ಕ್‌ಗೆ 300 ರು., ಅದನ್ನ ಕ್ಲೀನ್‌ ಮಾಡುವವರಿಗೆ 8500 ರು. ಸಂಬಳವಂತೆ. ಹೆಚ್ಚು ಸಂಬಳ ನೀಡಿದರೆ ಜನ ಬಂದು ಕೆಲಸ ಮಾಡುತ್ತಾರೆ. ಮೆಡಿಕಲ್‌ ವಿಚಾರವಾಗಿ ಡಿಎಚ್‌ಒಗಳಿಗೆ ಉಸ್ತುವಾರಿ ನೀಡಿ, ಆಡಳಿತ ವಿಚಾರವನ್ನು ಜಿಲ್ಲಾಡಳಿತ ನೋಡಿಕೊಳ್ಳಲಿ. ಜಿಲ್ಲಾಡಳಿತವೇ ಅನ್ನ ಸಾರಿನೊಂದಿಗೆ ಇಂಜೆಕ್ಷನ್‌ ನೀಡಲು ಆಗುವುದಿಲ್ಲ. ಇದು ಗೊಂದಲ ಸೃಷ್ಟಿಸುತ್ತದೆ. ಮೆಡಿಕಲ್‌ ಬಗ್ಗೆ ಜ್ಞಾನ ಇರುವವರನ್ನು ಉಸ್ತವಾರಿ ನೀಡಿ, ಐಎಎಸ್‌ ಅಧಿಕಾರಿಗಳು ಆಡಳಿತದ ಜವಾಬ್ದಾರಿ ನೋಡಿಕೊಳ್ಳುವಂತೆ ಸಲಹೆ ನೀಡಿದರು.

ಅ. 1 ರಿಂದ ಪದವಿ, ಸ್ನಾತಕೋತ್ತರ ಪದವಿ ಪ್ರಾರಂಭಕ್ಕೆ ಸಿದ್ಧತೆ; ಹೀಗಿರಲಿವೆ ತರಗತಿಗಳು

"

 

Follow Us:
Download App:
  • android
  • ios