ಸತತ 11ನೇ ದಿನವೂ ದಕ್ಷಿಣ ಕನ್ನಡ ಕೊರೋನಾ ಮುಕ್ತ

ಕೊರೋನಾ ಸೋಂಕು ಮುಕ್ತವಾಗುವತ್ತ ಹೆಜ್ಜೆ ಇಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ 11ನೇ ದಿನವೂ ಯಾವುದೇ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿಲ್ಲ.

No fresh covid19 cases in mangalore in last 11 days

ಮಂಗಳೂರು(ಏ.16): ಕೊರೋನಾ ಸೋಂಕು ಮುಕ್ತವಾಗುವತ್ತ ಹೆಜ್ಜೆ ಇಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ 11ನೇ ದಿನವೂ ಯಾವುದೇ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿಲ್ಲ.

ಇದುವರೆಗೆ ಒಟ್ಟು 12 ಮಂದಿ ಸೋಂಕಿತರಲ್ಲಿ ಈಗಾಗಲೇ 9 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ ಬಾಕಿ ಮೂವರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ಹೊಸದಾಗಿ ಯಾರಲ್ಲೂ ಸೋಂಕು ಕಂಡುಬಂದಿಲ್ಲ.

ಈ ವಾರದಿಂದಲೇ ಮನೆ ಬಾಗಿಲಿಗೆ ಮದ್ಯ, ಪೋನ್ ನಲ್ಲಿ ಆರ್ಡರ್ ಮಾಡಿದರಾಯ್ತು!

ಬುಧವಾರ ಒಟ್ಟು 42 ಪರೀಕ್ಷಾ ವರದಿಗಳು ಬಂದಿದ್ದು, ಎಲ್ಲವೂ ಕೊರೋನಾ ನೆಗೆಟಿವ್‌ ಆಗಿವೆ. ಮತ್ತೆ ಹೊಸದಾಗಿ 22 ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಈ ಮೊದಲಿನ ಸ್ಯಾಂಪಲ್‌ಗಳು ಸೇರಿ ಒಟ್ಟು 148 ಸ್ಯಾಂಪಲ್‌ ಗಳ ವರದಿಗಳನ್ನು ನಿರೀಕ್ಷಿಸಲಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ 38,032 ಮಂದಿಯ ಸ್ಕ್ರೀನಿಂಗ್‌ ನಡೆಸಲಾಗಿದೆ. ಈ ಪೈಕಿ 1,225 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಬುಧವಾರ ಬರೋಬ್ಬರಿ 4,588 ಮಂದಿ 28 ದಿನಗಳ ಹೋಮ್‌ ಕ್ವಾರಂಟೈನ್‌ ಅವಧಿಯನ್ನು ಪೂರ್ತಿಗೊಳಿಸಿದ್ದು, ಅವರಲ್ಲಿ ಸೋಂಕಿನ ಯಾವ ಲಕ್ಷಣಗಳೂ ಕಂಡುಬಂದಿಲ್ಲ. ಜಿಲ್ಲೆಯಲ್ಲಿ ಆರಂಭಿಸಲಾದ ಫೀವರ್‌ ಕ್ಲಿನಿಕ್‌ಗಳಲ್ಲಿ ಬುಧವಾರ 75 ಮಂದಿಯನ್ನು ಮತ್ತು ಈವರೆಗೆ 276 ಮಂದಿಯನ್ನು ತಪಾಸಣೆ ನಡೆಸಲಾಗಿದೆ.

ಪಾಸ್‌ ಅವಧಿ ಮುಂದುವರಿಕೆ

ಅವಶ್ಯಕ ಸಾಮಗ್ರಿಗಳನ್ನು ಪೂರೈಸುವ ನಿಟ್ಟಿನಲ್ಲಿ ಮಂಗಳೂರು ಉಪವಿಭಾಗಾಧಿಕಾರಿ ಹಾಗೂ ಪುತ್ತೂರು ಉಪ ವಿಭಾಗಾಧಿಕಾರಿ ಏ. 14ರವರೆಗೆ ನೀಡಿರುವ ಎಲ್ಲಾ ಪಾಸುಗಳ ಅವಧಿಯನ್ನು ಏ. 20ರವರೆಗೆ ಮುಂದುವರಿಸಲಾಗಿದೆ ಮತ್ತು ಹೊಸದಾಗಿ ಪಾಸುಗಳು ಅಗತ್ಯವಿದ್ದಲ್ಲಿ ಸಂಬಂಧಪಟ್ಟಉಪವಿಭಾಗಾಧಿಕಾರಿಗಳ ಕಚೇರಿಯನ್ನ ಸಂಪರ್ಕಿಸಲು ಕೋರಲಾಗಿದೆ.

ಮನೆ  ಕೊಳಾಯಿ ತಿರುಗಿಸಿದ್ರೆ 3 ಗಂಟೆ ಕಾಲ ನೀರಿನ ಬದಲು ಎಣ್ಣೆ! ನನಸಾದ ಕನಸು

ಅನ್‌ಲೈನ್‌ ಪಾಸ್‌ ಸೇವೆ ಇಂದಿನಿಂದ: ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಅಗತ್ಯ ಸೇವೆಗಳನ್ನು ಒದಗಿಸುವವರಿಗೆ ಆನ್‌ಲೈನ್‌ ಮೂಲಕ ಪಾಸುಗಳಿಗೆ ಅರ್ಜಿ ಸಲ್ಲಿಸುವ ಸೇವೆ ಏ. 16ರಿಂದ ಆರಂಭವಾಗಲಿದೆ. ಆನ್‌ಲೈನ್‌ ಲಿಂಕ್‌ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Latest Videos
Follow Us:
Download App:
  • android
  • ios