ಕೊಚ್ಚಿ(ಏ. 14)  ಲಾಕ್ ಡೌನ್, ಕೊರೋನಾ ವೈರಸ್ ಸೋಂಕು ಇದರಷ್ಟೇ ಚರ್ಚೆಯಲ್ಲಿರುವ ಮತ್ತೊಂದು ವಿಚಾರ ಎಣ್ಣೆ! ಮದ್ಯ ಪ್ರಿಯರು ಮೇಲಿಂದ ಮೇಲೆ ಪ್ರಶ್ನೆ ಕೇಳುತ್ತಲೇ ಇದ್ದರೆ? ಯಾವಾಗ ಲಾಕ್ ಡೌನ್ ಮುಗಿಯುತ್ತದೆ? ಎಣ್ಣೆ ಯಾವಾಗ ಸಿಗುತ್ತದೆ?

ಮದ್ಯಪ್ರಿಯರಿಗೆ ಮನದ ಮೂಲೆಯಲ್ಲಿ ಒಂದು ಆಸೆ ಇದ್ದೇ ಇರುತ್ತೆ. ಮನೆಯ ಕೊಳಾಯಿ ತಿರುಗಿಸಿದರೆ ಎಣ್ಣೆ ನೀರಿನಂತೆ ಸುರಿಯಬೇಕು. ಹೌದು ಮನೆಯ ಕೊಳಾಯಿ ಬಿಟ್ಟಾಗ ಈ ಊರಲ್ಲಿ ರೆಡ್ ವೈನ್ ಸುರಿದಿದೆ.

ಇದು ಭಾರತದ ಘಟನೆಯೇ!  ಇಟಲಿಯಲ್ಲಿ ಮನೆ ಕೊಳಾಯಿ ತಿರುಗಿಸಿದಾಗ ರೆಡ್ ವೈನ್ ಹರಿದು ಬಂದಿದ್ದು ದೊಡ್ಡ ಸುದ್ದಿಯಾಗಿತ್ತು.  ಫೆಬ್ರವರಿ ತಿಂಗಳಿನಲ್ಲಿ ನಡೆದ ಪ್ರಕರಣ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಲಾಕ್ ಡೌನ್ ಇದ್ದರೆ ಏನಾತು? ಮದ್ಯ ಸಮಾರಾಧನೆಗೆ ಡೇಟ್ ಫಿಕ್ಸ್

ಕೇರಳದ ಚಾಲಾಕುಡ್ಡಿಯ ಫ್ಲಾಟ್ ಒಂದರಲ್ಲಿ ರೆಡ್ ವೈನ್ ನಳದಲ್ಲಿ ಹರಿದು ಬಂದಿದೆ. ಕೊಳಾಯಿ ತಿರುಗಿಸಿದಾಗ ಆಲ್ಕೋಹಾಲ್ ಮಿಶ್ರಿತ ನೀರು ಬಂದಿದ್ದು 18 ಕುಟುಂಬಗಳಿಗೂ ಇದರ ಪರಿಣಾಮ ತಟ್ಟಿದೆ.

ಇಟಲಿಯ ಮೋಡೆನಾ ಬಳಿಯೂ ಇಂಥದ್ದೇ ಘಟನೆ ನಡೆದಿತ್ತು. ನೀರಿನ ಬದಲು ರೆಡ್ ವೈನ್ ಬಂದಿತ್ತು. ಈ ಬಗ್ಗೆ ತನಿಖೆ ಸಹ ನಡೆದಿದ್ದು ವೈನ್ ಸ್ಟೋರ್ ಮಾಡಿದ್ದ ಸಿಲೋಸ್ ಲೀಕ್ ಆಗಿರಬೇಕು ಎಂದು ಹೇಳಲಾಗಿದೆ.  ಹೈ ಪ್ರೆಶರ್ ನಿಂದ ಹೀಗೆ ಆಗಿರಬೇಕು ಎಂದು ಟರಕ್ನಿಶಿಯನ್ ಹೇಳಿದ್ದಾರೆ.