ಬೆಂಗಳೂರು(ಜು.02): ಉದ್ಯಾನ ನಗರಿಯ ಫೇಮಸ್ ಲಾಲ್‌ಬಾಗ್ ಫ್ಲವರ್ ಶೋ ನೋಡಲು ಬಹಳಷ್ಟು ಜನ ಬರುತ್ತಾರೆರ. ಪ್ರವಾಸಿಗರು ಕಿಕ್ಕಿರಿದು ಸೇರುತ್ತಾರೆ. ಈ ಸಂದರ್ಭಲ್ಲಿ ಉತ್ತಮ ಆದಾಯವೂ ಬರುತ್ತದೆ. ಆದರೆ ಈ ಬಾರಿ ಮಾತ್ರ ಇದಕ್ಕೆಲ್ಲ ಕಡಿವಾಣ ಬಿದ್ದಿದೆ

ಲಾಲ್ ಬಾಗ್ ಫ್ಲವರ್ ಶೋಗೂ ಕೊರೋನಾ ಬಿಸಿ ತಟ್ಟಿದೆ. ಪ್ರತಿ ವರ್ಷ ಆಗಸ್ಟ್ ನಲ್ಲಿ ನಡೆಯುತ್ತಿದ್ದ ಫ್ಲವರ್ ಶೋ ಕ್ಯಾನ್ಸಲ್ ಆಗಿದ್ದು, ಕೊರೋನಾ ಹಿನ್ನಲೆ  ಈ ಬಾರಿಯ ಫ್ಲವರ್ ಶೋ ರದ್ದು ಮಾಡಲಾಗಿದೆ.

ರಾಯಚೂರು: ಖಾಸಗಿ ಶಾಲೆಗಳ ಕಾಟಕ್ಕೆ ಸುಸ್ತಾದ ಪೋಷಕರು..!

ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು ತೋಟಗಾರಿಕೆ ಇಲಾಖೆ ಈ ವರೆಗೂ ಯಾವುದೇ ತಯಾರಿ ಮಾಡಿಕೊಂಡಿಲ್ಲ. ಪ್ರತಿವರ್ಷ ಮೇ ನಲ್ಲಿಯೇ ಫ್ಲವರ್ ಶೋಗೆ  ತಯಾರಿ ಮಾಡಿಕೊಳ್ಳುತ್ತಿದ್ದ ತೋಟಗಾರಿಕೆ ಇಲಾಖೆ ಈ ಬಾರಿ ಸುಮ್ಮನೆ ಕುಳಿತಿದೆ.

ಈ ವರ್ಷ ಲಾಕ್ ಡೌನ್ ಹಿನ್ನಲೆ ಯಾವುದೇ ತಯಾರಿ ಮಾಡಿಕೊಂಡಿಲ್ಲ. ಈಗಾಗಲೇ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಹಿನ್ನಲೆ ಲಾಲ್ ಬಾಗ್ ನಲ್ಲಿ ನಡೆಯುತ್ತಿದ್ದ ಫಲಪುಷ್ಪ ಪ್ರದರ್ಶನ ರದ್ದು ಮಾಡಲಾಗಿದೆ ಎಂದು ಉಪನಿರ್ದೇಶಕಿ ಕುಸುಮ ಹೇಳಿದ್ದಾರೆ.