ಉಡುಪಿ(ಜು.03): ದೇಶದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಕೃಷ್ಣಮಠದಲ್ಲಿ ಇನ್ನೂ ಕೆಲವು ದಿನ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ.

ಕೃಷ್ಣಮಠದ ಪರಂಪರೆಯನ್ನು ಉಳಿಸಿಕೊಳ್ಳಬೇಕಾಗಿದೆ. ದೇಶದಲ್ಲಿ ಕೊರೋನಾ ಪರಿಸ್ಥಿತಿಯನ್ನು ಅವಲೋಕಿಸುತಿದ್ದೇವೆ, ದೇಶಾ​ದ್ಯಂತ ಅನ್‌ಲಾಕ್‌ ಆದ ಮೇಲೆ ಕೃಷ್ಣಮಠದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಅಲ್ಲಿವರೆಗೆ ಭಕ್ತರು ತಂತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು. ಮಠದಲ್ಲಿಯೂ ಋುತ್ವಿಜರು ಕೊರೋನಾ ನಿವಾರಣೆಗೆ ನಿತ್ಯ ಪ್ರಾರ್ಥನೆ ಸಲ್ಲಿಸುತಿದ್ದಾರೆ ಎಂದು ಪರ್ಯಾಯ ಅದಮಾರು ಮಠದ ಶ್ರೀ ಈಶ​ಪ್ರಿಯ ತೀರ್ಥ ಸ್ವಾಮೀಜಿ ಹೇಳಿ​ದರು.

ಗಲ್ಫ್‌ ಕನ್ನಡಿಗರಿಗೆ ಸಂಕಷ್ಟ: ಕೊರೋನಾ ನೆಗೆಟಿವ್ ಆದ್ರೆ ಮಾತ್ರ ರಾಜ್ಯಕ್ಕೆ ಪ್ರವೇಶ

ಎಲ್ಲ ರೋಗಗಳಿಗೆ ರಾಗ, ಮೋಹ ಇತ್ಯಾದಿ ಮನಸ್ಸಿನ ದೋಷಗಳೇ ಕಾರಣ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಮನಸ್ಸನ್ನು ಚೆನ್ನಾಗಿಟ್ಟುಕೊಂಡರೆ ಎಂತಹ ರೋಗವನ್ನಾದರೂ ಜಯಿಸಬಹುದು, ಒಳ್ಳೆಯ ಚಿಂತನೆಗಳನ್ನು ಬೆಳೆಸಿಕೊಂಡರೆ ರೋಗ ನಿರೋಧಕ ಶಕ್ತಿ ವೃದ್ಧಿಯಾ​ಗು​ತ್ತದೆ. ಆದ್ದರಿಂದ ಎಲ್ಲರೂ ಮನಸ್ಸನ್ನು ಚೆನ್ನಾಗಿಟ್ಟುಕೊಳ್ಳೋಣ ಎಂದು ಶ್ರೀಗ​ಳು ಕರೆ ನೀಡಿದ್ದಾರೆ.

ದೆಹಲಿಯಲ್ಲಿ ದೇಶದ ಮೊದಲ ಪ್ಲಾಸ್ಮಾ ಬ್ಯಾಂಕ್ ಕಾರ್ಯಾರಂಭ..! ಹೀಗಿದೆ ರೂಲ್ಸ್

ಅಲ್ಲದೇ ನಮ್ಮ ದೇಶದ ಔಷಧಿ ಪದ್ಧತಿ ಕೊರೋನಾಕ್ಕೆ ಫಲಕಾರಿ ಎಂದು ಕಂಡುಬರುತ್ತಿದೆ. ಆದ್ದರಿಂದ ಈ ಪದ್ಧತಿಯನ್ನು ಬಳಸುವುದಕ್ಕೆ ಮತ್ತು ಬೆಳೆಸುವುದಕ್ಕೆ ಇದು ಒಳ್ಳೆಯ ಕಾಲ ಎಂದು ಶ್ರೀಗಳು ಅಭಿ​ಪ್ರಾ​ಯ​ಪ​ಟ್ಟಿ​ದ್ದಾ​ರೆ.