ಬೆಳಗಾವಿ(ನ.01):  ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದ ಶ್ರೀ ರೇಣುಕಾದೇವಿ ಹಾಗೂ ಚಿಂಚಲಿ ಶ್ರೀ ಮಾಯಕ್ಕಾ ದೇವಿ ಸೇರಿ ಗಡಿ ಜಿಲ್ಲೆಯ ಮೂರು ದೇವಾಲಯಗಳ ಪ್ರವೇಶಕ್ಕೆ ಮತ್ತೆ ಒಂದು ತಿಂಗಳು ಭಕ್ತರಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.

 ಸತತ 8 ತಿಂಗಳಿಂದ ಸವದತ್ತಿ ಯಲ್ಲಮ್ಮ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿತ್ತು. 

ಇದೀಗ ಮತ್ತೆ ಒಂದು ತಿಂಗಳ ಕಾಲ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

ಬೆಳಗಾವಿಯಲ್ಲಿ ಭಾರೀ ಮಳೆ; ಸವದತ್ತಿ ಕೋಟೆಯ ಒಂದು ಭಾಗ ಕುಸಿತ

ದೇಶದಾದ್ಯಂತ ಕೊರೋನಾ ಸೋಂಕಿನ ಹಾವಳಿ ಹಿನ್ನೆಲೆಯಲ್ಲಿ ಮಾ.22ರಿಂದ ಜಿಲ್ಲೆಯ ಪ್ರಮುಖ ಮೂರು ದೇವಸ್ಥಾನ ಬಂದ್‌ ಮಾಡಲಾಗಿದ್ದು, ಭಕ್ತರು ಇದೀಗ ಮತ್ತೊಂದು ತಿಂಗಳು ಕಾಯಬೇಕಿದೆ.