ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್‌ನಿಂದ ಯಾರೊಬ್ಬರು ಮೃತಪಟ್ಟಿಲ್ಲ
- ಬ್ಲ್ಯಾಕ್ ಫಂಗಸ್‌ನಿಂದ ಯಾರೊಬ್ಬರು ಮೃತಪಟ್ಟಿಲ್ಲ
- ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಸ್ಪಷ್ಟನೆ
- ಕೇಂದ್ರ ಸರ್ಕಾರದ ಜೊತೆ ಸಮನ್ವಯ ನಡೆಸಿ ಚಿಕಿತ್ಸೆ
ಮೈಸೂರು (ಮೇ.21): ಬ್ಲ್ಯಾಕ್ ಫಂಗಸ್‌ನಿಂದ ಯಾರೊಬ್ಬರು ಮೃತಪಟ್ಟಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.
ಚಾಮುಂಡಿಬೆಟ್ಟತಪ್ಪಲಿನ ಸುತ್ತೂರು ಶಾಖಾ ಮಠಕ್ಕೆ ಗುರುವಾರ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಅವರು, ಬ್ಲಾಕ್ ಫಂಗಸ್‌ನಿಂದ ಯಾಕೂ ಸತ್ತಿಲ್ಲ. ಬ್ಲಾಕ್ ಫಂಗಸ್‌ಗೆ ಔಷಧಿ ಕೊರತೆ ಇದೆ. ಸದ್ಯ ಕೇಂದ್ರ ಸರ್ಕಾರದ ಜೊತೆ ಸಮನ್ವಯ ನಡೆಸಿ ಚಿಕಿತ್ಸೆ ನೀಡುತ್ತಿದ್ದೇವೆ. ಇದಕ್ಕೆ ಔಷಧಿ ಪೂರೈಕೆ ಆಗುತ್ತಿದೆ. ಹೊರ ದೇಶದ ಜೊತೆ ಔಷಧಿ ಆಮದು ಮಾಡಿಕೊಳ್ಳಲು ಪ್ರಯತ್ನ ನಡೆಯುತ್ತಿದೆ ಬ್ಲ್ಯಾಕ್ ಫಂಗಸ್ ಅನ್ನು ಯಾರೂ ಮುಚ್ಚಿಡದೆ ಚಿಕಿತ್ಸೆ ನೀಡಬೇಕು. ಇದರ ಬಗ್ಗೆ ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ಅಗತ್ಯ ಮಾಹಿತಿ ನೀಡಬೇಕು ಎಂದು ಹೇಳಿದರು.
ರಾಜ್ಯದಲ್ಲಿ 100 ಮಂದಿಗೆ ಬ್ಲ್ಯಾಕ್ ಫಂಗಸ್ ಇದೆ. ಆದರೆ ರಾಜ್ಯದಲ್ಲಿ ಇಲ್ಲಿಯವರೆಗೂ ಯಾವುದೇ ಸಾವು ಸಂಭವಿಸಿರುವ ಮಾಹಿತಿ ಇಲ್ಲ. ಸದ್ಯ ಚಿಕಿತ್ಸೆಗೆ ಕೊರತೆ ಇದೆ ಎಂದು ಕೇಂದ್ರ ಸರ್ಕಾರಕ್ಕೆ ನಾವು ಮನವಿ ಮಾಡಿದ್ದೇವೆ. ಕೆಲವೇ ವಾರಗಳಲ್ಲಿ ಅಗತ್ಯವಿರುವ ಔಷಧಿ ಪೂರೈಕೆಗೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಂಡ್ಯದಲ್ಲಿ ಮೂರು ಪ್ರಕರಣ ಕಂಡುಬಂದಿರುವುದಾಗಿ ಹೇಳಲಾಗಿತ್ತು. ಆದರೆ ಈ ಪೈಕಿ 2 ಬ್ಲಾಕ್ ಫಂಗಸ್ ಪ್ರಕರಣ ಅಲ್ಲ. ಅಲ್ಲದೆ ಮೈಸೂರಿನಲ್ಲಿ ಸಂಭವಿಸಿದ ಸಾವಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ತಿಳಿಸಿದರು.
ಕೊರೋನಾ ನಡುವೆ ಬ್ಲಾಕ್ ಫಂಗಸ್ ಕಾಟ; ರಾಜ್ಯಗಳಿಗೆ ಮಹತ್ವದ ಸೂಚನೆ ನೀಡಿದ ಕೇಂದ್ರ!
ಉತ್ಪಾದನೆಯಾದ ಸ್ಫುಟ್ನಿಕ್ ಔಷಧದಲ್ಲಿ ಶೇ. 50 ರಷ್ಟುಸರ್ಕಾರಕ್ಕೆ ನೀಡಬೇಕು. ಬಾಕಿ ಶೇ. 50ರಷ್ಟುಔಷಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಗುವುದು. ಭಾರತ್ ಬಯೋಟೆಕ್ ಸಂಸ್ಥೆ ಸೇರಿದಂತೆ ಬೇರೆ ಕಂಪನಿಗಳಿಗೆ ವಿಧಿಸಿದ್ದ ನಿಮಯಗಳೇ ಸ್ಫುಟ್ನಿಕ್‌ಗೂ ಅನ್ವಯ ಆಗಲಿದೆ. ರಾಜ್ಯದಲ್ಲಿ ಲಾಕ್‌ಡೌನ್ ಮುಂದುವರೆಸುವ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನಿಸುತ್ತಾರೆ. ಈ ಬಗ್ಗೆ 23 ರಂದು ಸಿಎಂ ತಮ್ಮ ತೀರ್ಮಾನ ತಿಳಿಸುವರು. ರಾಜ್ಯದ ಅಂಕಿ ಅಂಶಗಳ ಗಮನಿಸಿ ಮತ್ತಷ್ಟುಬಿಗಿಕ್ರಮವಹಿಸಬೇಕಾ, ಇಲ್ಲ ಸಡಿಲಗೊಳಿಸಬೇಕ ಎಂಬುದು ತೀರ್ಮಾನವಾಗುತ್ತದೆ. ಆದರೆ ಈ ಬಗ್ಗೆ ಭಯವಂತು ಇದ್ದೆ ಇದೆ. ಸಾರ್ವಜನಿಕ ವಲಯದಲ್ಲಿ ಗಣ್ಯರು, ವಿರೋಧ ಪಕ್ಷದವರ ಸಲಹೆ ಪರಿಗಣಿಸುತ್ತೇವೆ. ಲಾಕ್‌ಡೌನ್ ಬಗ್ಗೆ ನನ್ನ ವೈಯುಕ್ತಿಕ ಅಭಿಪ್ರಾಯ ಇಲ್ಲ ಎಂದು ಅವರು ತಿಳಿಸಿದರು.
ನಾಯಕತ್ವ ಬದಲಿಲ್ಲ : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ರಾಜ್ಯ ಸರ್ಕಾರ ಕೊರೋನಾ ನಿರ್ವಹಣೆಯಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಯಡಿಯೂರಪ್ಪ ನಾಯಕತ್ವದಲ್ಲಿ ಸರ್ಕಾರ ಎಲ್ಲ ರೀತಿಯ ಸವಾಲುಗಳನ್ನು ಸಮರ್ಥವಾಗಿ ಎದುರುಸುತ್ತಿದೆ. ಪಕ್ಷದಲ್ಲಿ ಅಥವಾ ಬೇರೆಲ್ಲೂ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆಯೇ ನಡೆಯುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.