ಚಾಮರಾಜನಗರ : ಕೊರೋನಾ ಗೆದ್ದ 22 ಹಳ್ಳಿಗಳು

  • ಇದೀಗ ಟಿಬೆಟಿಯನ್ನರ 22ಹಳ್ಳಿಗಳು ಕೋವಿಡ್ ಮುಕ್ತವಾಗಿದೆ.
  • ಕೋವಿಡ್ ಕೇರ್ ಕೇಂದ್ರ ತೆರೆಯುವುದರ ಮೂಲಕ ಸೋಂಕಿತ 137 ಮಂದಿಯು ಗುಣಮುಖ
  • ಕೊರೋನಾ ಗೆದ್ದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಒಡೆಯರ ಪಾಳ್ಯ ಟಿಬೆಟಿಯನ್ ನಿರಾಶ್ರಿತರ ಗ್ರಾಮ
No Covid Cases Reported in 22 villages in chamarajanagar snr

ಚಾಮರಾಜನಗರ (ಜೂ.18): ಕೊರೋನಾ ಎರಡನೆ ಅಲೆ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಒಡೆಯರ ಪಾಳ್ಯ ಟಿಬೆಟಿಯನ್ ನಿರಾಶ್ರಿತರ ಗ್ರಾಮಗಳಿಗೂ ಆವರಿಸಿತ್ತು. 

ಟಿಬೆಟಿಯನ್ನರು ಧೃತಿಗೆಡದೆ ತಮ್ಮ ಕ್ಯಾಂಪಿನ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಕೇಂದ್ರ ತೆರೆಯುವುದರ ಮೂಲಕ ಸೋಂಕಿತ 137 ಮಂದಿಯು ಗುಣಮುಖರಾಗಿದ್ದು, ಇದೀಗ ಟಿಬೆಟಿಯನ್ನರ 22ಹಳ್ಳಿಗಳು ಕೋವಿಡ್ ಮುಕ್ತವಾಗಿದೆ.

ಕೊರೋನಾ : ಮಕ್ಕಳಿಗಿಲ್ಲ 3ನೇ ಅಲೆಯ ಭಾರೀ ಶಾಕ್ .

ಭಾರತ ಸರ್ಕಾರವು 1974ರಲ್ಲಿ ಟಿಬೆಟಿಯನ್  ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿತು. ಪ್ರಸ್ತುತ 3500ಕ್ಕೂ ಹೆಚ್ಚು ಟಿಬೆಟಿಯನ್ ನಿರಾಶ್ರಿತರು ಈ ಗ್ರಾಮದ ಸುತ್ತಮುತ್ತಲು ತಮ್ಮದೇ ಆದ 22 ಹಳ್ಳಿಗಳನ್ನು ಸೃಷ್ಠಿಸಿಕೊಂಡು ವಾಸಮಾಡುತ್ತಿದ್ದಾರೆ. ಜೀವನೋಪಾಯಕ್ಕಾಗಿ ವ್ಯವಸಾಯ ಹಾಗು ಸ್ವೆಟರ್  ವ್ಯಾಪಾರ ಮಾಡುತ್ತಾರೆ. ಅಂತರರಾಜ್ಯ ಹಾಗು ದೇಶಗಳಲ್ಲಿ ಇವರ ಬಾಂಧವ್ಯವಿದೆ. 

ಎರಡನೆ ಅಲೆ ಕೊರೋನಾ ಮಹಾಮಾರಿ ಕಾಣಿಸಿಕೊಂಡ ಬಳಿಕ ಟಿಬೆಟಿಯನ್ನರು ತಮ್ಮ ಕ್ಯಾಂಪಿನಲ್ಲಿರುವ ಆಸ್ಪತ್ರೆಯಲ್ಲಿ ಮೂರಕ್ಕೂ ಹೆಚ್ಚು ಕೋವಿಡ್ ಕೇರ್ ಸೆಂಟರ್‌ಗಳನ್ನು ಪ್ರಾರಂಭಿಸಿ ಜಿಲ್ಲಾಡಳಿತ ಸರ್ಕಾರದ ಸಹಕಾರದೊಡನೆ ತಮ್ಮದೇ ಆದ ಸಂಪನ್ಮೂಲಗಳನ್ನು ಬಳಸಿಕೊಂಡು ಕೊರೋನಾ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.  

ಕೊರೋನಾ ಎರಡನೆ ಅಲೆಯಲ್ಲಿ ಇಲ್ಲಿರುವ 137 ಮಂದಿಗೆ ಕೊರೋನಾ ಕಾಣಿಸಿಕೊಂಡಿದ್ದು ಈಗ ಅವರೆಲ್ಲಾ ಗುಣಮುಖರಾಗಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios