Asianet Suvarna News Asianet Suvarna News

ಕಾಂಗ್ರೆಸ್‌ಗೊಲಿದ ಜಯ : ಬಿಜೆಪಿಗೆ ಮುಖಭಂಗ

  • ನಗರಸಭೆ ಅವಿಶ್ವಾಸ ಗೊತ್ತುವಳಿ ವಿಶೇಷ ಸಭೆಯಲ್ಲಿ ವಿಶ್ವಾಸ ಕಳೆದುಕೊಂಡ ಉಪಾಧ್ಯಕ್ಷೆ
  •  ನಗರಸಭೆ ಉಪಾಧ್ಯಕ್ಷೆ ಕವಿತಾ ವಿರುದ್ಧ 10 ಕಾಂಗ್ರೆಸ್, 2ಬಿಎಸ್ಪಿ ಹಾಗೂ 4ಮಂದಿ ಪಕ್ಷೇತರ ಸದಸ್ಯರು ಕೈ ಎತ್ತುವ ಮೂಲಕ ಪದಚ್ಯು ತಿ
No confidence motion against kollegal town municipality vice president snr
Author
Bengaluru, First Published Oct 6, 2021, 3:19 PM IST

ಕೊಳ್ಳೇಗಾಲ (ಅ.06):  ನಗರಸಭೆ (Town Municipality ಅವಿಶ್ವಾಸ ಗೊತ್ತುವಳಿ ವಿಶೇಷ ಸಭೆಯಲ್ಲಿ ಹಾಲಿ ಉಪಾ ಧ್ಯಕ್ಷೆ (Vice president) ಕವಿತಾ ವಿಶ್ವಾಸ ಕಳೆದುಕೊಂಡಿದ್ದು, ಕಾಂಗ್ರೆಸ್ (Congress) ಪದಚ್ಯುತಿಗೊಳಿಸುವಲ್ಲಿ ಯಶಸ್ವಿಯಾಗಿದೆ.

 ನಗರಸಭೆ ಉಪಾಧ್ಯಕ್ಷೆ ಕವಿತಾ ವಿರುದ್ಧ 10 ಕಾಂಗ್ರೆಸ್, 2ಬಿಎಸ್ಪಿ (BSP) ಹಾಗೂ 4ಮಂದಿ ಪಕ್ಷೇತರ ಸದಸ್ಯರು ಕೈ ಎತ್ತುವ ಮೂಲಕ ಪದಚ್ಯು ತಿಗೊಳಿಸಿದರು. 

ಅವಿಶ್ವಾಸದ ವಿರುದ್ಧವಾಗಿ ಧರಣೀಶ್, ಚಿಂತು ಪರಮೇಶ್, ಕವಿತಾ, ಶಿರೀಸಾ ಸತೀಶ್ ಮತ್ತು ನಾಗೇಂದ್ರ ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ಅವಿಶ್ವಾಸದ ಪರವಾಗಿ ಬಿಎಸ್ಪಿಯ ಜಯಂತ್, ಜಯಮರಿ, ಕಾಂಗ್ರೆಸ್‌ನ ಸುಮೇರಾ ಬೇಗ, ಸುಮ ಸುಬ್ಬಣ್ಣ, ಪ್ರಶಾಂತ್, ಮನೋಹರ್, ಶಂಕರ್, ಮಂಜುನಾಥ್, ರಾಘವೇಂದ್ರ, ರೇಖಾ ರಮೇಶ್ , ಪುಷ್ಪಲತಾ ಶಾಂತರಾಜು, ಸುಶೀಲ ಶಾಂತರಾಜು, ಕವಿತಾ ರಾಜೇಶ್, ಜಿ ಎಂ ಸುರೇಶ ಸೇರಿದಂತೆ 16ಮಂದಿ ಮತ ಚಲಾ ಯಿಸಿದರು. ಜೊತೆಗೆ ಅಂತರ ಕಾಯ್ದುಕೊಂಡಿದ್ದ ಮತ್ತೋರ್ವ ಪಕ್ಷೇತರ ಸದಸ್ಯ ಶಂಕರನಾರಾ ಯಣ ಗುಪ್ತ ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದರು. 

ನಿಯತ್ತು ಮರೆತಿದ್ದಕ್ಕೆ ಉಚ್ಛಾಟನೆ : ಬಿಜೆಪಿ ಸೇರಿದ N ಮಹೇಶ್ ವಿರುದ್ಧ ಗಂಭೀರ ಆರೋಪ

ಅನಾರೋಗ್ಯ ಕಾರಣಕ್ಕಾಗಿ ಕಾಂಗ್ರೆಸ್‌ನ ಸದಸ್ಯ ಬಸ್ತಿಪುರ ಶಾತರಾಜು ಗೈರಾಗಿದ್ದರು, ಜೊತೆಗೆ ಕೋವಿಡ್ ಹಾಗೂ ಇನ್ನಿತರೆ ಆರೋಗ್ಯ ಕಾರಣಕ್ಕಾಗಿ ಬಿಜೆಪಿಯ (BJP) ಜಿ.ಪಿ. ಶಿವಕುಮಾರ್ ಮತ್ತು ರಮ್ಯ ಮಹೇಶ್ ಇಂದಿನ ಅವಿಶ್ವಾಸ ಗೊತ್ತುವಳಿ ಸಭೆಗೆ ಗೈರಾಗಿ ದ್ದರು, ಬಿಜೆಪಿ ಸದಸ್ಯರ ಗೈರು ನಾನಾ ರೀತಿಯ ಚರ್ಚೆಗೆ ಆಸ್ಪದ ಮಾಡಿಕೊಟ್ಟಿತ್ತು. 

ಕೊನೆಗೂ ಕವಿತಾ ಆಸೆ ಫಲಿಸಲಿಲ್ಲ: ನಗರ ಸಭೆ ಉಪಾಧ್ಯಕ್ಷರಾಗಿದ್ದ ಕವಿತಾ ಅವರ ಬೆಂಬ ಲಕ್ಕೆ 7ಮಂದಿ ಸದಸ್ಯರು, ಶಾಸಕ, ಸಂಸದರು ಬೆಂಬಲ ಸೂಚಿಸಿದ್ದರೆ ಇಂದಿನಿಂದ ಪ್ರಭಾರಿ ಅಧ್ಯಕ್ಷರಾಗಿ ಮುಂದುವರೆಯುವ ಅವಕಾಶ ವಿತ್ತು. ಹಾಗಾಗಿ ಕವಿತಾ ಅವರು ಪ್ರಭಾರಿ ಅಧ್ಯಕ್ಷರಾಗುವ ಭರವಸೆ ಹೊಂದಿದ್ದರು, ಹಾಗಾಗಿ ಕೊನೆ ಕ್ಷಣದಲ್ಲಿ ಮಂಗಳವಾರ ರಾತ್ರಿ ಮಂಡಲ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೂ ಸಹಾ ಜಿಲ್ಲಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದರು. 

ಆದರೆ ಕವಿತಾ ಅಂದುಕೊಂಡಂತೆ ಎಲ್ಲವೂ ನಡೆಯಲಿಲ್ಲ, ಕೊನೆ ಕ್ಷಣದಲ್ಲಿ ಉಪಾಧ್ಯಕ್ಷ ಸ್ಥಾನವನ್ನು ಕಳೆದುಕೊಂಡಿದ್ದು ಅವರಿಗೆ ಅದೃಷ್ಟ ಕೈ ಹಿಡಿಯಲಿಲ್ಲ. ನಗರಸಭೆಯಲ್ಲಿ ಅವಿಶ್ವಾಸಗೊತ್ತುವಳಿ ಸಾಮಾನ್ಯ ವಿಶೇಷ ಸಭೆ ಪ್ರಾರಂಭಕ್ಕೂ ಮುನ್ನ ಹಿರಿಯ ಸದಸ್ಯ ಶಂಕರ್ ಅವರನ್ನು ಸಭಾಧ್ಯಕ್ಷರ ನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿ ಬಳಿಕ ಸಭಾ ನಡಾವಳಿಯನ್ನು ನಗರಸಭೆ ಆಯುಕ್ತ ವಿಜಯ ಪ್ರಾರಂಭಿಸಿದರು. ನಂತರ ಅವಿಶ್ವಾಸದ ವಿರಿದ್ಧವಾಗಿ ಬಿಜೆಪಿಯ 5ಮಂದಿ ಹಾಗೂ ಅವಿಶ್ವಾಸದ ಪರವಾಗಿ 16ಮಂದಿ ಸದಸ್ಯರು ಕೈ ಎತ್ತಿದ್ದರಿಂದ ಹಾಲಿ ಉಪಾಧ್ಯಕ್ಷರು ಪದಚ್ಯುತರಾಗಿದ್ದಾರೆ, ಅವಿಶ್ವಾಸ ಸಭೆಗೆ ಗೆಲುವಾಗಿದೆ ಎಂದು ಸಭಾಧ್ಯಕ್ಷ ಶಂಕರ್ ಘೋಷಿಸಿದರು. 

N ಮಹೇಶ್ ಸೇರ್ಪಡೆಯಿಂದ ಮತ್ತೋರ್ವ ಬಿಜೆಪಿ ಮುಖಂಡಗೆ ಶುರುವಾಗಿದೆಯಾ ಆತಂಕ..?

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಪಾಧ್ಯಕ್ಷರ ಪದಚ್ಯುತಿಯಿಂದಾಗಿ ನಗರಸಭೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಖಾಲಿಯಾಗಿದ್ದು ಜಿಲ್ಲಾಧಿಕಾರಿಗಳು ಈ ಸಂಬಂಧ ಆಡಳಿತ ಮತ್ತು ಅಭಿವೃದ್ದಿ ದೃಷ್ಠಿಯಿಂದ ಮುಂದಿನ ಕ್ರಮಕೈಗೊಳ್ಳಬೇಕೆಂದು ಮನವಿ ಸಲ್ಲಿಸುವು ದಾಗಿ ಹೇಳಿದರು. 

ನಗರಸಭೆ ಉಪಾಧ್ಯಕ್ಷ ಸ್ಥಾನದಿಂದ ಪದಚ್ಯುತರಾದ ಹಿನ್ನೆಲೆ ಸಭೆಯಿಂದ ಏಕಾಂಗಿ ಯಾಗಿ ಹೊರಬಂದ ಕವಿತಾ ಅವರು ನಗು ನಗುತ್ತಲೆ ಇಲ್ಲಿ ನಡೆದ ರಾಜಕೀಯ ಬೆಳವಣಿಗೆ ಕುರಿತು ವರಿಷ್ಠರ ಗಮನಕ್ಕೆ ತರುವೆ, ಈಬಗ್ಗೆ ನಾನೇನು ಪ್ರತಿಕ್ರಿಯಿಸಲ್ಲ ಎಂದಷ್ಟೆ ಹೇಳಿ ನಗರಸಭೆಯಿಂದ ನಿರ್ಗಮಿಸಿದರು. 

7ಮಂದಿ ಸದಸ್ಯರನ್ನು ನಿಲ್ಲಿಸಿ ನಾನು ಬರುವೆ ಅಂದಿದ್ದ ಸಂಸದರು. ನಗರಸಭೆಯಲ್ಲಿ ಕವಿತಾ ಪದಚ್ಯುತಿ ತಪ್ಪಿ ಸುವ ಹಿನ್ನೆಲೆ ಮಾಜಿ ಶಾಸಕ ಜಿ.ಎನ್. ನಂಜುಂಸ್ವಾಮಿ ಹಾಗೂ ಹಾಲಿ ಶಾಸಕರಾದ ಎನ್ ಮಹೇಶ್ ಅವರು ಲೋಕಸಭಾ ಸಂಸದ ವಿ ಶ್ರೀನಿವಾಸ ಪ್ರಸಾದ್ (Shrinivas prasad) ಅವರನ್ನು ನಗರಸಭೆಗೆ ಬಂದು ಅವಿಶ್ವಾಸದ ವಿರುದ್ಧ ಮತ ಚಲಾಯಿಸಿ ಎಂದು ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮಾಜಿ, ಹಾಲಿ ಶಾಸಕರುಗಳಿಬ್ಬರಿಗೂ 7ಮಂದಿ ಸದಸ್ಯರು ನಮ್ಮ ಮನೆಗೆ ತಿಂಡಿಗೆ ಕರೆತನ್ನಿ, ತಿಂಡಿ ಮುಗಿಸಿ ಎಲ್ಲರೂ ನೇರ ಕೊಳ್ಳೇ ಗಾಲಕ್ಕೆ ಹೋಗೋಣ ಎಂದು ತಿಳಿಸಿದ್ದರಂತೆ. ಅದರಂತೆ 7ಮಂದಿ ಸದಸ್ಯರ ಪೈಕಿ ಇಬ್ಬರು ಕೋವಿಡ್ ಕಾರಣಕ್ಕೆ ಸಭೆಗೆ ಗೈರಾಗುವ ವಿಚಾರವೂ ಹಾಗೂ ಇಲ್ಲಿನ ಎಲ್ಲಾ ಬೆಳವಣಿಗೆ ತಿಳಿದಿದ್ದ ಸಂಸದರೂ ಕೊಳ್ಳೇಗಾಲಕ್ಕೆ ಬಂದರೆ ಉಪಾಧ್ಯಕ್ಷರ ಪದಚ್ಯುತಿ ತಪ್ಪಿಸಲು ಆಗಲ್ಲ, ಮುಜುಗರ ಅನುಭವಿಸಬೇಕಾಗುತ್ತದೆ ಎಂಬಿ ತ್ಯಾದಿ ಕಾರಣಗಳಿಗಾಗಿ ತೆರಳುವುದೇ ಬೇಡ ಎಂದು ಜಾಣನಡೆ ಅನುಸರಿಸಿದರು ಎಂದು ಬಿಜೆಪಿ ಮೂಲಗಳು ಹೇಳಿವೆ. 

ಈ ಬೆಳವಣಿಗೆ ಮಾಜಿ, ಹಾಲಿ ಶಾಸಕರಿಬ್ಬರಿಗೂ ತೀವ್ರ ಮುಖಭಂಗವಾಗಿದೆ. ಜೊತೆಗೆ ಜಿಲ್ಲಾ ಧ್ಯಕ್ಷ ಸುಂದರ್, ಮಂಡಲ ಅಧ್ಯ ಲಕ್ಷ್ಮಿಪತಿ, ಅವರ ವೈಫಲ್ಯವೂ ಇಂದಿನ ಬೆಳವಣಿಗೆಗೆ ಪ್ರಮುಖ ಕಾರಣ ಎಂದೆ ಪಕ್ಷದ ಮೂಲಗಳಿಂದಲೇ ಕೇಳಿ ಬಂದಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಛಾಪು ಮೂಡಿಸುತ್ತಿದೆ, ಆದರೆ, ನಗರಸಭೆಯಲ್ಲಿ ತಂತ್ರಗಾರಿಕೆ ಅಧಿಕಾರಿ ಉಳಿಸಿಕೊಳ್ಳುವಲ್ಲಿ ವೈಪಲ್ಯ ಸಾಧಿಸಿರುವುದು ಈಗ ನಾನಾ ಚರ್ಚೆಯ ಕೇಂದ್ರ ಬಿಂದುವಾಗಿದೆ.   

Follow Us:
Download App:
  • android
  • ios