ಡಿಕೆಶಿ KPCC ಅಧ್ಯಕ್ಷರಾದ್ರೂ ಕೋಲಾರ 'ಕೈ' ನಾಯಕರಿಗಿಲ್ಲ ಸಂಭ್ರಮ

ಡಿ. ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೂ ಕೋಲಾರದ ಸ್ಥಳೀಯ ನಾಯಕರಿಗೆ ಮಾತ್ರ ಈ ಬಗ್ಗೆ ಸ್ವಲ್ಪವೂ ಖುಷಿ ಇಲ್ಲ. ರಾಜ್ಯದ ಹಲವು ಭಾಗಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚಣೆಯಲ್ಲಿ ತೊಡಗಿದ್ರೆ ಕೋಲಾರ ಮಾತ್‌ರ ಸಪ್ಪೆಯಾಗಿದೆ.

 

no celebration in kolar as dk shivakumar appointed as president of kpcc

ಕೋಲಾರ(ಮಾ.12) : ಡಿ. ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೂ ಕೋಲಾರದ ಸ್ಥಳೀಯ ನಾಯಕರಿಗೆ ಮಾತ್ರ ಈ ಬಗ್ಗೆ ಸ್ವಲ್ಪವೂ ಖುಷಿ ಇಲ್ಲ. ರಾಜ್ಯದ ಹಲವು ಭಾಗಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚಣೆಯಲ್ಲಿ ತೊಡಗಿದ್ರೆ ಕೋಲಾರ ಮಾತ್‌ರ ಸಪ್ಪೆಯಾಗಿದೆ.

ಕೆಪಿಸಿಸಿ ನೂತನ ಸಾರತಿ ಡಿ.ಕೆ ಶಿವಕುಮಾರ್ ಆಯ್ಕೆ ಆಗಿರುವ ವಿಚಾರವಾಗಿ ಕೋಲಾರದಲ್ಲಿ ಇದುವರೆಗೂ ಸಂಭ್ರಮಾಚರಣೆ ಮಾಡಿಲ್ಲ. ಮಾಜಿ ಸಂಸದ ಕೆ.ಎಚ್ ಮುನಿಯಪ್ಪಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದಕ್ಕೆ ಬೇಸರ ವ್ಯಕ್ತವಾಗಿದೆ.

ಮೆಡಿಕಲ್ ಶಾಪ್‌ನಲ್ಲಿ ಮಾಸ್ಕ್ ಹಾಗೂ ದರದ ಬೋರ್ಡ್ ಕಡ್ಡಾಯ

ಕೋಲಾರದ ಸ್ಥಳೀಯ ನಾಯಕರಲ್ಲಿ ಬೇಸರವಿದ್ದು, ಕೆ.ಎಚ್ ಮುನಿಯಪ್ಪ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಗಾಂಧಿ ಬಳಿ ಲಾಬಿ ಮಾಡಿದ್ದರು. ಬೇಡಿಕೆ ಇಟ್ಟಿರುವ ಕುರಿತು ಕೆ.ಎಚ್ ಮುನಿಯಪ್ಪ ಬಹಿರಂಗವಾಗಿ ಹೇಳಿಕೊಂಡಿದ್ದರು. ಕೊನೆ ಕ್ಷಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ ಆಯ್ಕೆಯಾಗಿದ್ದು, ಜಿಲ್ಲೆಯಲ್ಲಿಮಾತ್ರ ಸಂಭ್ರಮಾಚರಣೆ ಕಾಣಿಸಿಕೊಂಡಿಲ್ಲ.

Latest Videos
Follow Us:
Download App:
  • android
  • ios