Asianet Suvarna News Asianet Suvarna News

ಮೆಡಿಕಲ್ ಶಾಪ್‌ನಲ್ಲಿ ಮಾಸ್ಕ್ ಹಾಗೂ ದರದ ಬೋರ್ಡ್ ಕಡ್ಡಾಯ

ಕೊರೋನ ಭೀತಿ ಹಿನ್ನೆಲೆ ಮಾಸ್ಕ್‌ಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುತಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ನಗರದ ಮೆಡಿಕಲ್ ಶಾಪ್‌ಗಳಿಗೆ ನಗರ ಪಾಲಿಕೆ ಆರೋಗ್ಯ ಮತ್ತ ಸಾಮಾಜಿಕ ನ್ಯಾಯ ಸಮಿತಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

 

Mask price should be showed in front  of medical shop
Author
Bangalore, First Published Mar 12, 2020, 12:43 PM IST

ಮೈಸೂರು(ಮಾ.12): ಕೊರೋನ ಭೀತಿ ಹಿನ್ನೆಲೆ ಮಾಸ್ಕ್‌ಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುತಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ನಗರದ ಮೆಡಿಕಲ್ ಶಾಪ್‌ಗಳಿಗೆ ನಗರ ಪಾಲಿಕೆ ಆರೋಗ್ಯ ಮತ್ತ ಸಾಮಾಜಿಕ ನ್ಯಾಯ ಸಮಿತಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜ್ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜೆ. ಗೋಪಿ ನೇತೃತ್ವದಲ್ಲಿ ಮೆಡಿಕಲ್ ಶಾಪ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿಗದಿತ ದರಕ್ಕಿತ ಹೆಚ್ಚಿನ ಬೆಲೆ ಮಾರಟ ಮಾಡದಂತೆ ವರ್ತಕರಿಗೆ ಸೂಚನೆ ನೀಡಿದರು.

ಇಡೀ ಇಟಲಿ ದೇಶ ಬಂದ್‌: ಜನರಿಗೆ ಏನೇನು ನಿರ್ಬಂಧ? ದೇಶದೊಳಗೆ ಏನಾಗುತ್ತಿದೆ?

ಮೆಡಿಕಲ್ ಸ್ಟೋರ್‌ಗಳಲ್ಲಿ ಮಾಸ್ಕ್‌ ಲಭ್ಯತೆ ಪರಿಶೀಲಿಸಿ ಬಳಿಕ ಮಾತನಾಡಿದ ಆರೋಗ್ಯಾಧಿಕಾರಿ ಡಾ. ನಾಗರಾಜ್, ಮಾಸ್ಕ್ ಗಳಿಗೆ ಹೆಚ್ವು ಬೇಡಿಕೆ ಇರುವುದರಿಂದ ದುಬಾರಿ ಬೆಲೆಗೆ ಮಾರಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅದರಂತೆ ನಮ್ಮ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಎನ್‌ 90 ಮಾಸ್ಕ್‌ಗಳು ಲಭ್ಯವಿಲ್ಲ. ಮಾಸ್ಕ್ ಲಭ್ಯತೆ ಮತ್ತು ಅದರ ದರವನ್ನ ಸಾರ್ವಜಕರಿಗೆ ಕಾಣುವಂತೆ ಬೋರ್ಡ್‌ ಹಾಕಲು ಮೆಡಿಕಲ್ ಸ್ಟೋರ್‌ನವರಿಗೆ ಸೂಚನೆ ನೀಡಿದ್ದೇವೆ ಎಂದರು.

ಸತೀಶಗೆ ಒಲಿದು ಬಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಪಟ್ಟ: ಜಾರಕಿಹೊಳಿ ಮುಂದಿದೆ ಬಿಗ್ ಚಾಲೆಂಜ್!

ಹೆಚ್ಚು ಬೆಲೆಗೆ ಮಾಸ್ಕ್‌ ಮಾರಾಟ ಮಾಡಿದ್ದು ಕಂಡುಬಂದಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಗತ್ಯ ಇರವವರು ಮಾತ್ರ ಮಾಸ್ಕ್‌ ಬಳಸುವುದು ಉತ್ತಮ. ನೆಗಡಿ, ಕೆಮ್ಮು ಸೀನು ಇರುವಂತವರು ಮಾಸ್ಕ್‌ ಧರಿಸುವುದು ಉತ್ತಮ ಎಂದು ಪಾಲಿಕೆ ಆರೋಗ್ಯ ಅಧಿಕಾರಿ ನಾಗರಾಜ್‌ ಹೇಳಿದರು.

Follow Us:
Download App:
  • android
  • ios