ಬೆಂಗಳೂರು(ಜು. 20)  ಕೊರೋನಾ ಸೋಂಕಿತರಿಗೆ ಬೆಡ್ ಸಿಗದ ವಿಚಾರವನ್ನು ಕರ್ನಾಟಕ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಹೈಕೋರ್ಟ್ ಸೂಚನೆಯಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ( ಡಿಎಂ)  ಕಾಯ್ದೆಯಡಿ ಆದೇಶ ಹೊರಡಿಸಲಾಗಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶದ ಪ್ರತಿ ಸಲ್ಲಿಕೆ ಮಾಡಿದ್ದಾರೆ. ರೋಗಲಕ್ಷಣವುಳ್ಳ ಸೋಂಕಿತರಿಗೆ ಅಡ್ಮಿಷನ್ ನಿರಾಕರಿಸುವಂತಿಲ್ಲ. ಖಾಸಗಿ ಆಸ್ಪತ್ರೆಗಳು ಅಡ್ಮಿಷನ್ ನಿರಾಕರಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಬೆಂಗಳೂರಲ್ಲಿ ಕೊರೋನಾ ಮಿತಿ ಮೀರಲು ಇದೇ ಮೇಜರ್ ಕಾರಣ

ರೋಗಲಕ್ಷಣ ಇಲ್ಲದವರನ್ನು ಅಡ್ಮಿಟ್ ಮಾಡಿಕೊಂಡು ಬ್ಲಾಕ್ ಮಾಡುವಂತಿಲ್ಲ. ಸೋಂಕು ಉಲ್ಬಣಿಸದವರಿಗೆ ತಡೆ ಹಾಕುವಂತೆ ಇಲ್ಲ. ಬಿಬಿಎಂಪಿ ಯಿಂದ‌ ಕಳುಹಿಸಿದವರಿಗೂ ಅಡ್ಮಿಷನ್ ನಿರಾಕರಿಸುವಂತಿಲ್ಲ. ಆಸ್ಪತ್ರೆಗಳ ಬೆಡ್ ನಿರ್ವಹಣೆಗೆ ಏಕೀಕೃತ ವೆಬ್ ಪೋರ್ಟಲ್ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ಪ್ರತಿ ಆಸ್ಪತ್ರೆಗಳಲ್ಲೂ ಖಾಲಿ ಬೆಡ್ ವಿವರ ಪ್ರಕಟಿಸಬೇಕು. ಸೋಂಕಿತರು ದೂರು ನೀಡಬೇಕಾದ ನಂಬರ್ ಪ್ರಕಟಿಸಬೇಕು ಎಂಬ ಅಂಶವನ್ನು ಸ್ಪಷ್ಟಪಡಿಸಲಾಗಿದೆ.ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕೊರೋನಾ ಪರಿಸ್ಥಿತಿ ಮಿತಿಮೀರಿದ್ದು ರೋಗಿಗಳಿಗೆ ಬೆಡ್ ಸಿಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಬೆಡ್ ಸಿಗದೆ ಪರಿತಪಿಸಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಇದೆಲ್ಲವನ್ನು ಗಮನಿಸಿದ ನ್ಯಾಯಾಲಯ ಆದೇಶ ನೀಡಿದೆ.