ರಸ್ತೆ ಕೆಳ ಸೇತುವೆ ಕಾಮಗಾರಿ, ಈ ಭಾಗದ ಹಲವು ರೈಲುಗಳು ರದ್ದು, ಭಾಗಶಃ ರದ್ದು!
ಅಕ್ಟೋಬರ್ 17 ಮತ್ತು 24 ರಂದು ತುಮಕೂರಿನ ಸಂಪಿಗೆ ರೋಡ್ ಮತ್ತು ನಿಟ್ಟೂರು ರೈಲು ನಿಲ್ದಾಣಗಳ ನಡುವಿನ ಕಾಮಗಾರಿಯಿಂದಾಗಿ ಹಲವಾರು ರೈಲುಗಳು ರದ್ದಾಗಿವೆ. ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ, ಮತ್ತು ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ.
ಬೆಂಗಳೂರು (ಅ.11): ತುಮಕೂರಿನ ಸಂಪಿಗೆ ರೋಡ್ ರೈಲ್ವೇ ಸ್ಟೇಷನ್ ಹಾಗೂ ನಿಟ್ಟೂರ್ ರೈಲ್ವೇ ಸ್ಟೇಷನ್ ನಡುವಿನ ಕಾಮಗಾರಿಯ ಕಾರಣಕ್ಕಾಗಿ ಅಕ್ಟೋಬರ್ 17 ಹಾಗೂ 24 ರಂದು ಈ ವಲಯದಲ್ಲಿ ತಿರುಗಾಡುವ ಹೆಚ್ಚಿನ ರೈಲುಗಳ ಸಂಚಾರ ವ್ಯತ್ಯಯವಾಗಲಿದೆ. ನಿಟ್ಟೂರು ಮತ್ತು ಸಂಪಿಗೆ ರಸ್ತೆ ನಿಲ್ದಾಣದ ನಡುವಿನ ಲೆವೆಲ್ ಕ್ರಾಸಿಂಗ್ ನಂ. 64 ರಲ್ಲಿ ರಸ್ತೆ ಕೆಳ ಸೇತುವೆ ಕಾಮಗಾರಿಗೆ ತಾತ್ಕಾಲಿಕ ಗರ್ಡರ್‌ಗಳನ್ನು ಅಳವಡಿಸಲು ಮತ್ತು ತೆಗೆದುಹಾಕಲು ಅಗತ್ಯವಾದ ಎಂಜಿನಿಯರಿಂಗ್ ಕೆಲಸದ ದೃಷ್ಟಿಯಿಂದ, ರೈಲು ಸೇವೆಗಳಲ್ಲಿ ಈ ಕೆಳಗಿನ ಬದಲಾವಣೆಗಳನ್ನು ಮಾಡಲಾಗುತ್ತದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
17 ಹಾಗೂ 24 ರಂದು ತುಮಕೂರು-ಚಾಮರಾಜನಗರ ಪ್ಯಾಸೆಂಜರ್ (07346) ರೈಲು, ಚಾಮರಾಜನಗ-ಮೈಸೂರು ಪ್ಯಾಸೆಂಜರ್ (07328) ರೈಲು, ಚಿಕ್ಕಮಗಳೂರು-ಯಶವಂತಪುರ (16239) ಎಕ್ಸ್‌ಪ್ರೆಸ್, ಯಶವಂತಪುರ-ಚಿಕ್ಕಮಗಳೂರು (16240) ಎಕ್ಸ್‌ಪ್ರೆಸ್, ತುಮಕೂರು-ಕೆಎಸ್‌ಆರ್ ಬೆಂಗಳೂರು ಮೆಮು (06576), ಕೆಎಸ್‌ಆರ್ ಬೆಂಗಳೂರು-ತುಮಕೂರು (06575) ಮೆಮು, ಯಶವಂತಪುರ-ಶಿವಮೊಗ್ಗ ಟೌನ್ (16579) ಮತ್ತು ಶಿವಮೊಗ್ಗ ಟೌನ್-ಯಶವಂತಪುರ (16580) ರೈಲುಗಳು ರದ್ದಾಗಿವೆ.
ಬೆಳಗಾವಿಗೆ ಗುಡ್‌ನ್ಯೂಸ್, ತೆಲಂಗಾಣದ ಮನುಗೂರಿಗೆ ಮುಂದಿನ ಮಾರ್ಚ್‌ವರೆಗೂ ವಿಶೇಷ ರೈಲು!
ಭಾಗಶಃ ರದ್ದು, ಟ್ರೇನ್ ಡೈವರ್ಶನ್ ಹಾಗೂ ರೆಗ್ಯುಲೇಷನ್ ಆದ ವಿವರಗಳು ಇಲ್ಲಿವೆ..
ಕರಾವಳಿಗೆ ಶುಭ ಸುದ್ದಿ: ಅ.12 ರಿಂದ ಮುರ್ಡೇಶ್ವರದಿಂದ ತಿರುಪತಿಗೆ ನೇರ ರೈಲು ಸೇವೆ