ಬೆಳಗಾವಿಗೆ ಗುಡ್‌ನ್ಯೂಸ್, ತೆಲಂಗಾಣದ ಮನುಗೂರಿಗೆ ಮುಂದಿನ ಮಾರ್ಚ್‌ವರೆಗೂ ವಿಶೇಷ ರೈಲು!
ಬೆಳಗಾವಿ ಮತ್ತು ಮನುಗೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭವಾಗಲಿದ್ದು, ಅಕ್ಟೋಬರ್ 16 ರಿಂದ 2025ರ ಮಾರ್ಚ್ 30ರವರೆಗೆ ಒಟ್ಟು 95 ಟ್ರಿಪ್‌ಗಳನ್ನು ಈ ರೈಲು ನಡೆಸಲಿದೆ. ಈ ರೈಲು ಮಂತ್ರಾಲಯ ಮತ್ತು ಸಿಕಂದರಾಬಾದ್‌ಗೆ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ.
ಬೆಳಗಾವಿ (ಅ.11): ದಸರಾ ಹಬ್ಬದ ಸಂಭ್ರಮದಲ್ಲಿಯೇ ಬೆಳಗಾವಿಗೆ ಗುಡ್‌ನ್ಯೂಸ್ ಸಿಕ್ಕಿದೆ. ರೈಲು ಸಂಖ್ಯೆ 07335 ಬೆಳಗಾವಿ-ಮನುಗೂರು ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಅಕ್ಟೋಬರ್ 16 ರಿಂದ 2025ರ ಮಾರ್ಚ್ 30ರವರೆಗೆ ಸಂಚಾರ ನಡೆಯಲಿದೆ. ಈ ಅವಧಿಯಲ್ಲಿ ಒಟ್ಟು 95 ಟ್ರಿಪ್‌ಗಳನ್ನು ರೈಲು ಮಾಡಲಿದೆ. ಈ ರೈಲು (07335) ಪ್ರತಿ ಭಾನುವಾರ, ಬುಧವಾರ, ಶನಿವಾರ ಮತ್ತು ಮಂಗಳವಾರ ಬೆಳಗಾವಿಯಿಂದ ಮಧ್ಯಾಹ್ನ 12:30 ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 12:50 ಕ್ಕೆ ತೆಲಂಗಾಣದ ಮನುಗೂರು ನಿಲ್ದಾಣಕ್ಕೆ ತಲುಪಲಿದೆ. ಮಂತ್ರಾಲಯ ಹಾಗೂ ಸಿಕಂದರಾಬಾದ್‌ಗೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಈ ರೈಲಿನಿಂದ ಹೆಚ್ಚಿನ ಸಹಾಯವಾಗಲಿದೆ.
ರೈಲು ಸಂಖ್ಯೆ 07336 ಮನುಗೂರು-ಬೆಳಗಾವಿ ವಿಶೇಷ ಎಕ್ಸ್ ಪ್ರೆಸ್ ರೈಲು ಅಕ್ಟೋಬರ್ 17ರಿಂದ 2025ರ ಮಾರ್ಚ್ 31 ರವರೆಗೆ 95 ಟ್ರಿಪ್‌ಗಳನ್ನು ಮಾಡಲಿದೆ. ಈ ರೈಲು (07336) ಪ್ರತಿ ಸೋಮವಾರ, ಗುರುವಾರ, ಭಾನುವಾರ ಮತ್ತು ಬುಧವಾರ ಮನುಗೂರು ನಿಲ್ದಾಣದಿಂದ ಮಧ್ಯಾಹ್ನ 3:40 ಕ್ಕೆ ಹೊರಟು, ಮರುದಿನ ಸಂಜೆ 4:00 ಗಂಟೆಗೆ ಬೆಳಗಾವಿ ನಿಲ್ದಾಣಕ್ಕೆ ಆಗಮಿಸಲಿದೆ.
ಈ ರೈಲು ಖಾನಾಪುರ, ಲೋಂಡಾ, ಅಳ್ನಾವರ, ಧಾರವಾಡ, ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ, ತೋರಣಗಲ್ಲು, ದರೋಜಿ, ಬಳ್ಳಾರಿ, ಗುಂತಕಲ್, ಆದೋನಿ, ಕೋಸ್ಗಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣಾ, ಯಾದಗಿರಿ, ಚಿತ್ತಾಪುರ, ಮಳಖೇಡ ರೋಡ್, ಸೇಡಂ, ತಾಂಡೂರು, ವಿಕಾರಾಬಾದ್, ಲಿಂಗಂಪಲ್ಲಿ, ಬೇಗಂಪೇಟ್, ಸಿಕಂದರಾಬಾದ್, ಭೋಂಗೀರ್, ಜನಾಂವ್, ಕಾಜಿಪೇಟ್, ವಾರಂಗಲ್, ಕೇಸಮುದ್ರಂ, ಮಹಬೂಬಾಬಾದ್, ದೊರಣಕಲ್, ಗಾಂಧಿಪುರಂ ಹಾಲ್ಟ್, ಮತ್ತು ಭದ್ರಾಚಲಂ ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ಇರಲಿವೆ.
ಹುಬ್ಬಳ್ಳಿಗೆ ಮತ್ತೊಂದು ಹೊಸ ರೈಲು: ಈಶಾನ್ಯ ಗಡಿ ಅಸ್ಸಾಂನಿಂದ ಹುಬ್ಬಳ್ಳಿಗೆ ಒನ್ ವೇ ಸ್ಪೆಷಲ್ ಎಕ್ಸ್ ಪ್ರೆಸ್
ಈ ವಿಶೇಷ ರೈಲಿನಲ್ಲಿ 1 ಎಸಿ ಟು ಟೈಯರ್, 2 ಎಸಿ ತ್ರಿ ಟೈಯರ್, 9 ಸ್ಲೀಪರ್ ಕ್ಲಾಸ್, 4 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ಎಸ್ಎಲ್ಆರ್ ಡಿ ಬೋಗಿಗಳು ಸೇರಿದಂತೆ ಒಟ್ಟು 18 ಬೋಗಿಗಳು ಇರಲಿವೆ.
ಹಬ್ಬದ ಪ್ರಯುಕ್ತ ಬೆಂಗಳೂರು ಸಂಪರ್ಕಿಸುವ ರೈಲುಗಳಿಗೆ ಹೆಚ್ಚುವರಿ ಬೋಗಿ ಜೋಡಣೆ!