ಗಾಣಗಾಪೂರ ದತ್ತಾತ್ರೆಯನಿಗೆ ಪೂಜೆ ನೆರವೇರಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ದಂಪತಿ

ಗಾಣಗಾಪೂರ ದತ್ತಾತ್ರೆಯ ದೇವಸ್ಥಾನಕ್ಕೆ ಭೇಟಿ ನೀಡಿ ಕೇಂದ್ರ ಸಚಿವ
ಗಾಣಗಾಪೂರ ದತ್ತಾತ್ರೆಯನಿಗೆ ಪೂಜೆ ನೆರವೇರಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ದಂಪತಿ
ಸೊಲ್ಲಾಪೂರದಿಂದ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಕಲಬುರಗಿಗೆ ಆಗಮನ

Nitin Gadkari performs darshan and pooja at ganagapur dattatreya rbj

ವರದಿ :- ಶರಣಯ್ಯ ಹಿರೇಮಠ, ಏಷ್ಯಾನೇಟ್ ಸುವರ್ಣ ನ್ಯೂಸ್ ಕಲಬುರಗಿ

ಕಲಬುರಗಿ, (ಏ.25):
ಕೇಂದ್ರದ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಇಂದು(ಸೋಮವಾರ) ಗಾಣಗಾಪೂರ ದತ್ತಾತ್ರೆಯ ದೇವಸ್ಥಾನಕ್ಕೆ 9Ganagapur Dattatreya  Temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. 

ಸೊಲ್ಲಾಪೂರದಿಂದ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ (Kalaburagi Airport) ಆಗಮಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಕಲಬುರಗಿ ವಿಮಾನ ನಿಲ್ದಾಣದಿಂದ ಬಿಗಿ ಭದ್ರೆತೆಯೊಂದಿಗೆ ಗಾಣಗಾಪೂರಕ್ಕೆ ರಸ್ತೆ ಮಾರ್ಗವಾಗಿ ತೆರಳಿದರು. 

Anagha Devi: ದತ್ತಾತ್ರೇಯ ಸ್ವಾಮಿಯ ಹೆಣ್ಣು ರೂಪ ಅನಘಾ ದೇವಿ

ಕುಟುಂಬ ಸಮೇತವಾಗಿ ಗಾಣಗಾಪೂರಕ್ಕೆ ಆಗಮಿಸಿದ ಅವರು, ಪತ್ನಿ ಜೊತೆಗೆ ದತ್ತಾತ್ರೆಯನಿಗೆ ವಿಶೇಷ ಪೂಜೆ ಸಲ್ಲಿಸಿದರು. ಗಾಣಗಾಪೂರ ದತ್ತಾತ್ರೆಯನಿಗೆ ನಡೆಯುವ ಮಹಾಪೂಜೆಯಲ್ಲಿ ಪಾಲ್ಗೊಂಡ ನಿತಿನ್ ಗಡ್ಕರಿ ದಂಪತಿಗಳು, ತಮ್ಮ ಕುಟುಂಬ ಮತ್ತು ದೇಶದ ಜನರ ಹಿತಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಗಾಣಗಾಪೂರ ದತ್ತಾತ್ರೆಯ ದೇವಸ್ಥಾನದ ಅರ್ಚಕ ಮಂಡಳಿ ವತಿಯಿಂದ ನಿತಿನ್ ಗಡ್ಕರಿ ದಂಪತಿಗಳಿಗೆ ಆತ್ಮೀಯವಾಗಿ ಸತ್ಕಾರಿಸಲಾಯಿತು. 

ಮುಂಜಾಗ್ರತಾ ಕ್ರಮವಾಗಿ ನಿತಿನ್ ಗಡ್ಕರಿ ದಂಪತಿಗಳು ಪೂಜೆ ಸಲ್ಲಿಸಿ ಹೋಗುವವರೆಗೆ ದತ್ತತ್ರೆಯ ದೇವಸ್ಥಾನದಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. 

ಮನವಿಗಳ ಮಹಾಪೂರ
ಇನ್ನೊಂದೆಡೆ ಕಲಬುರಗಿ ಜಿಲ್ಲೆಗೆ ಆಗಮಿಸಿದ ಕೇಂದ್ರ ಭೂ ಸಾರಿಗೆ ಸಚಿವರಿಗೆ ಮನವಿಗಳ ಮಹಾಪುರವೇ ಹರಿದು ಬಂದವು.. ಕಲಬುರಗಿ ನಗರಕ್ಕೆ ಔಟರ್ ರಿಂಗ್ ರಸ್ತೆ ನಿರ್ಮಾಣ ಯೋಜನೆ ಕೇಂದ್ರ ಸರಕಾರ ಕೈ ಬಿಟ್ಟಿದ್ದು, ಅದನ್ನು ಪುನರ್ ಕೈಗೆತ್ತಿಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ನಿಯೋಗ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಅಫಜಲಪುರ ಕಾಂಗ್ರೆಸ್ ಶಾಸಕ ಎಂ.ವೈ ಪಾಟೀಲ್, ಮುಖಂಡರಾದ ಶರಣು ಮೋದಿ ಇನ್ನಿತರರು ಮನವಿ ಪತ್ರ ಕೊಟ್ಟು ಕಲಬುರಗಿಗೆ ಔಟರ್ ರಿಂಗ್ ರಸ್ತೆ ಅಗತ್ಯವಿದ್ದು, ಕೂಡಲೇ ಯೋಜನೆ ಪುನರ್ ಪರಿಶೀಲನೆಗೆ ಒಳಪಡಿಸಿ ಕೈಗೆತ್ತಿಕೊಳ್ಳುವಂತೆ ಗಡ್ಕರಿ ಅವರಿಗೆ ಮನವಿ ಮಾಡಿಕೊಂಡರು. 

ಬಿಜೆಪಿಯಿಂದಲೂ ಮನವಿ
ಕಲಬುರಗಿ ನಗರಕ್ಕೆ ಔಟರ್ ರಿಂಗ್ ರಸ್ತೆಗಾಗಿ ಬಿಜೆಪಿ ಸಹ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದೆ. ಕಲಬುರಗಿ ಸಂಸದ ಉಮೇಶ ಜಾಧವ್, ಶಾಸಕ ದತ್ತಾತ್ರೇಯ ಪಾಟೀಲ್ ಇನ್ನಿತರರು ಕೇಂದ್ರ ಭೂ ಸಾರಿಗೆ ಸಚಿವರಿಗೆ ಭೇಟಿ ಮಾಡಿ ಔಟರ್ ರಿಂಗ್ ರೋಡ್ ಗೆ ಅನುಮತಿ ಮತ್ತು ಅನುದಾನ ನೀಡುವಂತೆ ಮನವಿ ಪತ್ರ ಸಲ್ಲಿಸಿದರು.

Latest Videos
Follow Us:
Download App:
  • android
  • ios