Asianet Suvarna News Asianet Suvarna News

ನಿಫಾ ಭೀತಿಯಲ್ಲಿ ದಾಖಲಾಗಿದ್ದ ವ್ಯಕ್ತಿಯ ಪರೀಕ್ಷೆ ವರದಿ ನೆಗೆಟಿವ್‌

  •  ನಿಫಾ ಸೋಂಕಿನ ಭೀತಿಯಿಂದ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಾಗಿದ್ದ ಕಾರವಾರ ಮೂಲದ ವ್ಯಕ್ತಿ
  • ಪರೀಕ್ಷಾ ವರದಿ ನೆಗೆಟಿವ್‌ ಬಂದಿದ್ದು, ಕರಾವಳಿ ಜನತೆ ನಿಟ್ಟುಸಿರು 
niphah suspected mangaluru youth report negative snr
Author
Bengaluru, First Published Sep 16, 2021, 7:10 AM IST

 ಮಂಗಳೂರು (ಸೆ.16):  ನಿಫಾ ಸೋಂಕಿನ ಭೀತಿಯಿಂದ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಾಗಿದ್ದ ಕಾರವಾರ ಮೂಲದ ವ್ಯಕ್ತಿಯ ಪರೀಕ್ಷಾ ವರದಿ ನೆಗೆಟಿವ್‌ ಬಂದಿದ್ದು, ಕರಾವಳಿ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಗೋವಾದ ಆರ್‌ಟಿಪಿಸಿಆರ್‌ ಕಿಟ್‌ ತಯಾರಿಸುವ ಪ್ರಯೋಗಾಲಯದಲ್ಲಿ ಮೈಕ್ರೋ ಬಯಾಲಜಿಸ್ಟ್‌ ಆಗಿ ಕೆಲಸ ಮಾಡುತ್ತಿರುವ 25ರ ಹರೆಯದ ಈ ವ್ಯಕ್ತಿ ರಜೆ ಮೇಲೆ ಮನೆಗೆ ಬಂದಿದ್ದರು. ಗೋವಾದಿಂದ ಕಾರವಾರಕ್ಕೆ ಬೈಕ್‌ನಲ್ಲಿ ಬಂದಿದ್ದು, ಮಳೆಗೆ ನೆನೆದಿದ್ದರು. ಎರಡು ದಿನಗಳ ಹಿಂದೆ ಅವರಿಗೆ ಜ್ವರ ಕಾಣಿಸಿತ್ತು. ಈ ವೇಳೆ ಗೂಗಲ್‌ ಸಚ್‌ರ್‍ ಮಾಡಿದಾಗ, ಜ್ವರದ ಲಕ್ಷಣ ಆಧರಿಸಿ ಅದು ನಿಪಾ ಇರಬಹುದು ಎಂದು ಶಂಕಿಸಿ ಸ್ವಯಂ ಆಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕಾರವಾರದಿಂದ ಮಣಿಪಾಲಕ್ಕೆ, ಅಲ್ಲಿಂದ ಶನಿವಾರ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಾಗಿದ್ದರು.

ದಕ್ಷಿಣ ಕನ್ನಡದಲ್ಲಿ ನಿಫಾ ಬಗ್ಗೆ ಭಯ ಬೇಡ : ಜಿಲ್ಲಾಧಿಕಾರಿ ಡಾ.ರಾಜೇಂದ್ರ

ವೆನ್ಲಾಕ್‌ ಆಸ್ಪತ್ರೆಯಲ್ಲಿ ಈ ವ್ಯಕ್ತಿಯ ಗಂಟಲು ದ್ರವ, ರಕ್ತ ಮತ್ತು ಮೂತ್ರ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರು ಮೂಲಕ ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದರ ಫಲಿತಾಂಶ ಬುಧವಾರ ಲಭ್ಯವಾಗಿದ್ದು, ನೆಗೆಟಿವ್‌ ಬಂದಿದೆ. ಈ ವ್ಯಕ್ತಿ ಕೂಡ ಚೇತರಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್‌ ಕುಮಾರ್‌ ತಿಳಿಸಿದ್ದಾರೆ.

ಈ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿ ನಿಗಾದಲ್ಲಿ ಇರಿಸಲಾಗಿದ್ದು, ಪದೇ ಪದೇ ನಿಪಾ ಬಗ್ಗೆ ಭೀತಿ ವ್ಯಕ್ತಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಕೌನ್ಸೆಲಿಂಗ್‌ ಕೂಡ

Follow Us:
Download App:
  • android
  • ios