* ಕಿರಿಕ್ ಮುಖ್ಯಸ್ಥೆ ವಿರುದ್ಧ ತಿರುಗಿ ಬಿದ್ದ ಸಿಬ್ಬಂದಿ* ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ನರ್ಸಿಂಗ್ ಸಿಬ್ಬಂದಿ ಪ್ರತಿಭಟನೆ* ನಿರ್ಮಲಾ ಎಂ ಹಟ್ಟಿ, ನಿಮ್ಹಾನ್ಸ್ ಆಸ್ಪತ್ರೆ ಕ್ಲಿನಿಕಲ್ ನರ್ಸಿಂಗ್ ಸರ್ವಿಸಸ್ ಹೆಡ್ * ನರ್ಸಿಂಗ್ ಸರ್ವೀಸ್ ಸಿಬ್ಬಂದಿಗಳಿಗೆ ದಿನ ನಿತ್ಯ ಕಿರುಕುಳ ನೀಡುತ್ತಿರುವ ಆರೋಪ

ಬೆಂಗಳೂರು(ಸೆ. 06) ಕಿರಿಕ್ ಮುಖ್ಯಸ್ಥೆ ವಿರುದ್ಧ ತಿರುಗಿ ಬಿದ್ದ ಸಿಬ್ಬಂದಿ ಪ್ರತಿಭಟನೆಗೆ ಇಳಿದಿದ್ದಾರೆ. ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ನರ್ಸಿಂಗ್ ಸಿಬ್ಬಂದಿ ಪ್ರತಿಭಟನೆ ಆರಂಭಿಸಿದ್ದಾರೆ.

ನಿಮ್ಹಾನ್ಸ್ ಆಸ್ಪತ್ರೆ ಕ್ಲಿನಿಕಲ್ ನರ್ಸಿಂಗ್ ಸರ್ವಿಸಸ್ ಹೆಡ್ ನಿರ್ಮಲಾ ಎಂ ಹಟ್ಟಿ ವಿರುದ್ಧ ಸಿಬ್ಬಂದಿ ತಿರುಗಿ ಬಿದ್ದಿದ್ದಾರೆ. ನರ್ಸಿಂಗ್ ಸರ್ವೀಸ್ ಸಿಬ್ಬಂದಿಗೆ ದಿನ ನಿತ್ಯ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ.

ರಕ್ಕಸನಾದ ಪೊಲೀಸಪ್ಪ.. ದೂರು ಕೊಡಲು ಬಂದವಳ ಮೇಲೆಯೇ ಅತ್ಯಾಚಾರ

ಸಿಬ್ಬಂದಿ ಜತೆ ಸೌಜನ್ಯವಿಲ್ಲದ ವರ್ತನೆ ತೋರುತ್ತಾರೆ. ಮುಖ್ಯಸ್ಥೆ ನಿರ್ಮಲಾ ವರ್ತನೆಯಿಂದ ಬೇಸೆತ್ತಿರುವ ಸಿಬ್ಬಂದಿ ಪ್ರತಿಭಟನೆ ದಾರಿ ಹಿಡಿದಿದ್ದಾರೆ.

ನರ್ಸ್ ಮೇಲೆ ನಿರ್ಮಾಲಾರಿಂದ ಹಲ್ಲೆ ನಡೆಸಿರುವ ಆರೋಪವೂ ಕೇಳಿ ಬಂದಿದೆ. 5 ದಿನಗಳ ಹಿಂದೆ ಅನಸೂಯ ಎಂಬ ನರ್ಸ್ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ನರ್ಸ್ ಮೇಲಿನ ಹಲ್ಲೆ ವಿರೋಧಿಸಿ 400 ಕ್ಕೂ ಅಧಿಕ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ.